ಮದ್ವೆಗೂ ಮುಂಚೆ ನಿಮ್ಮ ಭಾವಿ ಪತಿಯರ ಜತೆ ದೇಹ ಹಂಚಿಕೊಳ್ಳಿ ಎಂದ ಖ್ಯಾತ ನಟಿ ; ಇದು ಎಷ್ಟು ಸರಿ ಎಂದ ನೆಟ್ಟಿಗರು

ಮದ್ವೆಗೂ ಮುಂಚೆ ನಿಮ್ಮ ಭಾವಿ ಪತಿಯರ ಜತೆ ದೇಹ ಹಂಚಿಕೊಳ್ಳಿ ಎಂದ  ಖ್ಯಾತ ನಟಿ ; ಇದು ಎಷ್ಟು ಸರಿ ಎಂದ ನೆಟ್ಟಿಗರು

ಮದುವೆ ಎನ್ನುವುದು ಒಂದು ಸುಂದರ ಸಂಬಂಧ ಅದು ಜನ್ಮ ಜನ್ಮದ ಅನುಬಂಧ . ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಒಂದು ಮಹತ್ವಇದೆ. ಒಂದು ಗಂಡು ಮತ್ತು ಹೆಣ್ಣು ಜೊತೆಯಾಗಿ ಒಟ್ಟಿಗೆ ಇರ ಬೇಕಾದರೆ ಮದುವೆ ಎನ್ನುವುದು ಅನಿವಾರ್ಯ . ಅದನ್ನು ಬಿಟ್ಟು ಮದುವೆ ಆಗದೆ ಜೊತೆಯಾಗಿ ವಾಸಿಸುವುದು ಭಾರತೀಯ ಸಂಸ್ಕೃತಿ ಗೆ ಅಪವಾದ ಮಾಡಿದಂತೆ .ಈಗಿನ ಕಾಲದ ಯುವಕ ಮತ್ತು ಯುವತಿಯರು ಪಾಶ್ಚಿಮಾತ್ಯ ರೀತಿಯನ್ನು ಅನುಕರಣೆ ಮಾಡಿ ಮದುವೆ ಇಲ್ಲದ ಲಿವಿಂಗ್ ಇನ್ ರಿಲೇಶನ್ ಶಿಪ್  ಹೆಸರಿನಲ್ಲಿ ಒಟ್ಟಿಗೆ ಇರುತ್ತಾರೆ . ಅದಕ್ಕೆ ಯಾವ ಸಮಾಜವು ಮನ್ನಣೆ ಕೊಡುವಿದಿಲ್ಲ .

ಅದೇ ರೀತಿ ಇಲ್ಲೊಬ್ಬ ತೆಲುಗು ನಟಿ ಮದ್ವೆಗೂ ಮುಂಚೆ ನಿಮ್ಮ ಭಾವಿ ಪತಿಯರ ಜತೆ ದೇಹ ಹಂಚಿಕೊಳ್ಳಿ ಎಂದು ಹೇಳೀದ್ದಾಳೆ ಆರ್​ಜಿವಿ ನಿರ್ದೇಶನದ ನಗ್ನಂ ಸಿನಿಮಾ ಮೂಲಕ ಶ್ರೀ ರಾಪಕಾ ಮುಖ್ಯವಾಹಿನಿಗೆ ಬಂದರು. ಅಲ್ಲದೆ, ಇತ್ತೀಚೆಗೆ ನಡೆದ ಬಿಗ್​ಬಾಸ್ ಶೋನಲ್ಲೂ ಇವರು ಭಾಗವಹಿಸಿದ್ದಾರೆ. ಸದ್ಯ ಸಿನಿಮಾಗಳ ಅವಕಾಶ ಕಡಿಮೆ ಇದ್ದರೂ ತಮ್ಮ ಬೋಲ್ಡ್​ ಕಾಮೆಂಟ್​ ಮೂಲಕ ರಾಪಕಾ ಸುದ್ದಿಯಲ್ಲಿದ್ದಾರೆ. ಸಂದರ್ಶನವೊಂದರಲ್ಲಿ ರಾಪಕಾ ಮಾಡಿದ ಕಾಮೆಂಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಹಾಟ್​ ಟಾಪಿಕ್​ ಆಗಿದೆ.

ಸಂದರ್ಶನದಲ್ಲಿ ರಾಪಕಾ ಅವರು ಮದುವೆ ಹಾಗೂ ಸೆಕ್ಸ್​ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮದುವೆಗೂ ಮುಂಚೆ ಸೆ * ಕ್ಸ್​ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿರುವ ರಾಪಕಾ, ಮದುವೆಯಾದ ಬಳಿಕ ನಿಮ್ಮ ಸಂಗಾತಿ ಗಂಡಸಲ್ಲ ಎಂದು ಗೊತ್ತಾದರೆ ನಿಮ್ಮ ಇಡೀ ಜೀವನವನ್ನು ಕಣ್ಣೀರಿನಲ್ಲಿ ಕಳೆಯಬೇಕಾಗುತ್ತದೆ ಎಂದರು. ಇಷ್ಟೇ ಅಲ್ಲದೆ, ತನ್ನ ಸ್ನೇಹಿತೆಯ ಜೀವನದಲ್ಲಿ ನಡೆದ ಘಟನೆಯನ್ನು ವಿವರಿಸಿ, ಉದಾಹರಣೆಯನ್ನೂ ನೀಡಿದರು.

ನನ್ನ ಸ್ನೇಹಿತೆ ವೈದ್ಯರೊಬ್ಬರನ್ನು ಮದುವೆ ಆಗಿದ್ದಳು. ಆಕೆಯ ಮೊದಲ  ರಾತ್ರಿಯ ಸಮಯದಲ್ಲಿ ತನ್ನ ಗಂಡ ಓರ್ವ ಸಲಿಂಗಕಾಮಿ ಎಂಬುದು ಆಕೆಗೆ ತಿಳಿದು ಬಹಳ ದುಃಖಿತಳಾದಳು. ಹೀಗಾಗಿ ಮದುವೆಗೂ ಮುಂಚೆ ಸೆಕ್ಸ್​ ಮಾಡಿದರೆ ತನ್ನ ಸಂಗಾತಿ ಸಲಿಂಗಕಾಮಿಯೋ? ಇಲ್ಲವೋ? ಎಂಬುದು ತಿಳಿಯುತ್ತದೆ. ನನ್ನ ದೃಷ್ಟಿಕೋನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸೆಕ್ಸ್​ ತುಂಬಾ ಮುಖ್ಯ. ಅದನ್ನು ಕೊಡಲಾಗದವನ್ನು ಮದುವೆಯಾಗಿ ಪಶ್ಚತಾಪ ಪಡುವುದು ಸರಿಯಲ್ಲ ಎಂದು ರಾಪಕಾ ಹೇಳಿದ್ದಾರೆ.
ಆದರೆ ನೆಟ್ಟಿಗರು ಇದು ಹಿಂದೂ ಸಂಸ್ಕೃತಿ ಅಲ್ಲ . ಒಂದು ಹೆಣ್ಣು ಮತ್ತು ಗಂಡು ಮದುವೆ ಅದ ಮೇಲೆ ದೇಹ ಸಂಬಂಧ ಬೆಳೆಸ ಬೇಕು ಅದು ಬಿಟ್ಟು ಮದುವೆ ಗೆ ಮುಂಚೆ ಅಲ್ಲ ಅಂದು ಕಾಮೆಂಟ್ ಮಾಡಿದ್ದಾರೆ .