ನಟಿ ಮಯೂರಿ ದಾಂಪತ್ಯ ಜೀವನದಲ್ಲಿ ಬಿರುಕು! ಈ ಬಗ್ಗೆ ನಟಿ ಹೇಳಿದ್ದೇನು ಗೊತ್ತಾ?

ನಟಿ ಮಯೂರಿ ದಾಂಪತ್ಯ ಜೀವನದಲ್ಲಿ ಬಿರುಕು! ಈ ಬಗ್ಗೆ ನಟಿ ಹೇಳಿದ್ದೇನು ಗೊತ್ತಾ?

ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಗುತ್ತಿರುವ ಸೆಲೆಬ್ರಿಟಿ ಡೈವರ್ಸ್ ಪ್ರಕರಣಗಳು ಇದೀಗ ಮಾಧ್ಯಮಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಹಲವು ಪ್ರಸಿದ್ಧ ನಟರು ಮತ್ತು ನಟಿಯರು ವೈವಾಹಿಕ ತೊಂದರೆಗಳಿಂದಾಗಿ ತಮ್ಮ ವಿವಾಹವನ್ನು ಮುರಿಯುತ್ತಿದ್ದಾರೆ.  ಸಿನಿತಾರೆಯರ ವೃತ್ತಿಜೀವನದಲ್ಲಿ ಅಪಾರ ಒತ್ತಡ ಇರುತ್ತದೆ. ಇದು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸಿನಿತಾರೆಯ ಜೀವನ ಬಹಿರಂಗವಾಗಿರುವುದರಿಂದ, ವ್ಯಕ್ತಿಪರ ಸಮಸ್ಯೆಗಳು ಸಾರ್ವಜನಿಕವಾಗುತ್ತವೆ ಮತ್ತು ಇದು ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ. ಕೆಲವು ವೇಳೆಯಲ್ಲಿ ವೈವಾಹಿಕ ಅನರ್ಹತೆಗಳ ಕಾರಣದಿಂದ ವಿವಾಹ ಮುರಿಯಬಹುದು.

ಇತ್ತೀಚೆಗೆ ಡೈವರ್ಸ್ ಪಡೆದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಪ್ರಕರಣದ ಬೆನ್ನಲ್ಲೇ ನಟ ಯುವ ಹಾಗೂ ಶ್ರೀದೇವಿ ಅವರ ಡೈವರ್ಸ್ ವದಂತಿಗಳು ಕೇಳಿ ಬರುತ್ತಿದೆ. ಆದರೆ ಈಗ ಇಬ್ಬರ ವಿರುದ್ಧವೂ ಸಾಕ್ಷಿ ಸಿಕ್ಕಿದ್ದು ಈ ಕೇಸ್ ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ. ಇದೀಗ ಮಯೋರಿ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಬಿದ್ದಿದೆ ಎಂದು ಒಂದು ವಾರದಿಂದ ಸುದ್ದಿ ಹರಿದಾಡುತ್ತಿದೆ. ಆದರೆ ಈಗ ನಟಿ ತಮ್ಮ ವಿವಾದದ ಬಗ್ಗೆ ಹೇಳಿಕೆ ಕೊಟ್ಟು ಎಲ್ಲದಕ್ಕೂ ತೆರೆ ಎಳೆದಿದ್ದಾರೆ. ಇನ್ನೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಫೋಟೋಗಳನ್ನು ಡಿಲಿಟ್ ಮಾಡಿದ ಕಾರಣ ಅವರ ದಾಂಪತ್ಯದಲ್ಲಿ ಬಿರುಕು ಬಿದ್ದಿದೆ ಎಂದು ಎಲ್ಲರೂ ಶಂಕಿಸುತ್ತಿದ್ದರು.  

ಆದರೆ ಪಬ್ಲಿಕ್ ಟೀವಿ ಗೆ ಹೇಳಿಕೆ ನೀಡುವ ಮೂಲಕ ಎಲ್ಲದಕ್ಕೂ ಬ್ರೇಕ್ ಎಳೆದಿದ್ದಾರೆ. ಇನ್ನೂ ಮಾದ್ಯಮಗಳಲ್ಲಿ ಮಾತನಾಡಿದ ಅವರು ನನ್ನ ದಾಂಪತ್ಯದ ಜೀವನದಲ್ಲಿ ಯಾವುದೇ ತೊಂದರೆ ಇಲ್ಲ. ನಾವು ಹತ್ತು ವರ್ಷಗಳ ಕಾಲ ಪ್ರೀತಿಸಿ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದೇವೆ. ಈಗ ಮಗ ಇದ್ದರೂ ಕೊಡ ನಾವು ಇನ್ನೂ ನಮ್ಮ ಕಾಲೇಜ್ ದಿನಗಳ ರೀತಿಯಲ್ಲಿ ಇದ್ದೇವೆ. ಅದ್ರಲ್ಲೂ ನಾವು ಪಬ್ಲಿಕ್ ಫಿಗರ್ ಆಗಿರುವ ಕಾರಣ ನಮ್ಮಲ್ಲಿ ಕೊಡ ಜವಾಬ್ದಾರಿಗಳು ಇವೆ ಎಂದು ಉತ್ತರ ನೀಡಿದ್ದಾರೆ. ಇನ್ನೂ ಇವರ ಹೇಳಿಕೆಯಿಂದ ಎಲ್ಲಾ ಗಾಳಿ ಸುದ್ದಿಗೆ ಬ್ರೇಕ್ ಬಿದ್ದಿದೆ. ಹಾಗೆಯೇ ಇವರ ಹೊಸ ಧಾರಾವಾಹಿಯಲ್ಲಿ ಮತ್ತೆ ಬಣ್ಣದ ರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದು ಯಶಸ್ಸು ಸಿಗಲಿ ಎಂದು ಹಾರೈಸೋಣ.

( video credit : Guarantee News )