ದರ್ಶನ್ ಕೇಸ್ ಲೀಡ್ ಮಾಡುತ್ತಿರುವ ಎಸಿಪಿ ಚಂದನ್ ಕುಮಾರ್ ಹಿನ್ನಲೆ ನಿಜಕ್ಕೂ ಸ್ಪೂರ್ತಿ ದಾಯಕ! ಇಲ್ಲಿದೆ ಫುಲ್ ಡೀಟೇಲ್ಸ್?

ದರ್ಶನ್ ಕೇಸ್ ಲೀಡ್ ಮಾಡುತ್ತಿರುವ  ಎಸಿಪಿ  ಚಂದನ್ ಕುಮಾರ್ ಹಿನ್ನಲೆ ನಿಜಕ್ಕೂ ಸ್ಪೂರ್ತಿ ದಾಯಕ! ಇಲ್ಲಿದೆ ಫುಲ್ ಡೀಟೇಲ್ಸ್?

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನದ ಹಿಂದೆ ಡಿಸಿಪಿ ಗಿರೀಶ್ ನಾಯ್ಕ್ ಮತ್ತು ಎಸಿಪಿ ಚಂದನ್ ಕುಮಾರ್ ಭಾಗವಾಗಿದ್ದಾರೆ.  ನಟ ದರ್ಶನ್ ಮತ್ತು ಅವರ ಸ್ನೇಹಿತೆ ಪವಿತ್ರಾ ಗೌಡ ಅವರನ್ನು ಬಂಧಿಸಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳ ವರದಿಯ ಪ್ರಕಾರ ಒಬ್ಬ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಮತ್ತು ಅನುಮೋದಕನಾಗಲು ಸಿದ್ಧನಾಗಿದ್ದಾನೆ ಎಂದು ವರದಿಯಾಗಿದೆ.  ಇದು ಜಾರಿಯಾದರೆ ದರ್ಶನ್‌ಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಹೇಳಬಹುದು. ಇನ್ನೂ ಈ ರೀತಿಯ ಘಟನೆಗಳು ಪೊಲೀಸರಿಗೆ ಹೊಸದಲ್ಲ ಆದರೆ ಈ ಘಟನೆಯಲ್ಲಿ ಪ್ರಬಲವಾದ ವ್ಯಕ್ತಿ ಇರುವುದರಿಂದ ಕೆಲ ಅಧಿಕಾರಿಗಳು ಒತ್ತಡಕ್ಕೆ ಸಿಲುಕಿ ಹಿಂದೆ ಸರಿಯುತ್ತಾರೆ. ಆದ್ರೆ ಚಂದನ್ ಕುಮಾರ್ ಎಲ್ಲರಿಗೂ ಕೊಡ ಮಾದರಿ ಆಗುವಂತೆ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಬಹುದು.  

ಪ್ರಸ್ತುತ ದರ್ಶನ್ ಹತ್ಯೆ ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಎಸಿಪಿ ಚಂದನ್ ಕುಮಾರ್ ಅವರು ಕಾನೂನು ಜಾರಿಯಲ್ಲಿ ಮಹತ್ವದ ಹಿನ್ನೆಲೆ ಹೊಂದಿದ್ದಾರೆ.  ಆರಂಭದಲ್ಲಿ ಪ್ರಕರಣವನ್ನು ನಿಭಾಯಿಸಿದ ಇನ್‌ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರ ಸ್ಥಾನಕ್ಕೆ ಅವರನ್ನು ನೇಮಿಸಲಾಯಿತು ಆದರೆ ಚುನಾವಣಾ ಕರ್ತವ್ಯಗಳ ನಂತರ ಅವರನ್ನು ಮರು ನಿಯೋಜಿಸಲಾಯಿತು.  ನಟ ದರ್ಶನ್ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವ ರಾಜಕೀಯವಾಗಿ ಸಂಪರ್ಕ ಹೊಂದಿದ ವ್ಯಕ್ತಿಗಳನ್ನು ರಕ್ಷಿಸುವ ಪ್ರಯತ್ನಗಳ ಆರೋಪದ ನಡುವೆ ಚಂದನ್ ಕುಮಾರ್ ನೇಮಕವಾಗಿದೆ. ಈಗ ಹಾಟ್ ನ್ಯೂಸ್ ಆಗಿರುವ ಈ ಪ್ರಕರಣಕ್ಕೆ ಚಂದನ್ ಕುಮಾರ್ ಯಾವ ಅಂತ್ಯ ನೀಡುತ್ತಾರೆ ಎಂದು ಕಾದು ನೋಡಬೇಕಿದೆ .ಇನ್ನೂ ಪುನೀತ್ ರಾಜ್ ಕುಮಾರ್ ಅವರ ಪೃಥ್ವಿ ಸಿನಿಮಾ ನೋಡಿ ಪ್ರೇರೇಪಿತರಾಗಿ ಇಂಜಿನಿಯರಿಂಗ್ ಮುಗಿಸಿ ಇನ್ಫೋಸಿಸ್ ನಲ್ಲಿ ಕೆಲ್ಸ ಮಾಡುತ್ತಿದ್ದ ವ್ಯಕ್ತಿಯು ಪೊಲೀಸ್ ಆಗಬೇಕು ಎಂಬ ಬಯಕೆ ಯನ್ನು ಮಾಡುತ್ತಾರೆ ಎಂದು ಸ್ವತಃ ಅವರೇ ಹೇಳಿದ್ದಾರೆ.   

ಡಿಪ್ಲೊಮೊ ಮೂಲಕ ಇಂಜಿನಿಯರಿಂಗ್ ಮಾಡಿದ ಈ ವ್ಯಕ್ತಿ ಎರಡು ವರ್ಷಗಳ ಕಾಲ ಶಿಕ್ಷಕನಾಗಿ, ಎರಡು ಪ್ರಾಡ್ಕಟ್ ಕಂಪನಿಯಲ್ಲಿ ಕೆಲಸ ಮಾಡಿ ಅದಾದ ಬಳಿಕ ಏಳು ವರ್ಷಗಳ ಇನ್ಫೋಸಿಸ್ ನಲ್ಲಿ ಕೆಲ್ಸ ಮಾಡಿದ್ದಾರೆ. 2011ನಲ್ಲಿ KAS ಪರೀಕ್ಷೆ ಬರೆದಿದ್ದ ಇವರಿಗೆ ಮೊದಲ ಬಾರಿಯೇ ಜಯ ಸಿಗುತ್ತದೆ ಆದರೆ ಕೆಲ ಕಾರಣಗಳಿಂದ ಅವ್ರ ಆಗ ಸಿಕ್ಕ ಸ್ಥಾನವನ್ನು ಸೇರ್ಪಡೆ ಆಗಲು ಸಾದ್ಯವಾಗುವುದಿಲ್ಲ. ಎರಡೂ ಬಾರಿ UPSC ಎಕ್ಸಾಮ್ ಕೊಡ ಬರೆದಿರುತ್ತಾರೆ. ಮತ್ತೆ 2020ರ KAS ಪರೀಕ್ಷೆಯಲ್ಲಿ ಉತ್ತೀರ್ಣರಾದ ಇವರಿಗೆ ಮೊದಲಿಗೆ ತಿಪಟುರಿಗೆ ನೇಮಕಾತಿ ಮಾಡಲಾಗುತ್ತದೆ ಅಲ್ಲಿ ಕೊಡ 1ವರ್ಷಗಳ ಕಾಲ ಕಾರ್ಯ ನಿರ್ವಹಿಸು ಅದಾದ ಬಳಿಕ ಶೇಷಾದ್ರಿ ಪುರಂ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿ 1.7 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.  ( video credit : Avaniyana )