2023 ರ ಕೊನೆಯ ಮಾರ್ಗಶಿರ ಅಮಾವಾಸ್ಯೆಯ ದಿನ ಈ ಕೆಲ್ಸ ಮಾಡಲೇ ಬೇಕು! ಯಾವತ್ತೂ ಹಾಗೂ ಏನು ಮಾಡಬೇಕು ಗೊತ್ತಾ?

2023 ರ ಕೊನೆಯ ಮಾರ್ಗಶಿರ ಅಮಾವಾಸ್ಯೆಯ ದಿನ ಈ ಕೆಲ್ಸ ಮಾಡಲೇ ಬೇಕು! ಯಾವತ್ತೂ ಹಾಗೂ ಏನು ಮಾಡಬೇಕು ಗೊತ್ತಾ?

ಈಗ ವರ್ಷದ ಅಂತ್ಯದಲ್ಲಿ ಇದ್ದೇವೆ ನಾವು ಹೊಸ ವರ್ಷಕ್ಕೆ ಕೇವಲ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಉಳಿದಿದೆ. ಇನ್ನೂ ಹೊಸ ವರ್ಷ ಎಂದ್ರೆ ಜೀವನದಲ್ಲಿ ಹೊಸತನವನ್ನು ಕಾಣುವ ಒಂದು ನಿರೀಕ್ಷೆ ಇದ್ದರೆ ಅದರೊಟ್ಟಿಗೆ ಕಳೆದ ವರ್ಷ ನಾವು ಕಳೆದ ಖುಷಿ ದುಃಖ ಹಾಗೂ ಕಲಿತ ಪಾಠಗಳ ಬುತ್ತಿಯನ್ನು ನಾವು ಹೊತ್ತು ನಿಂತಿರುತ್ತವೆ. ನಾವೆಲ್ಲರೂ ಕೊಡ ಇಂದಿನ ದಿನಕ್ಕಿಂತ ನಾಳಿನ ದಿನ ನಮ್ಮ ಜೀವನ ಇನ್ನಷ್ಟು ಸುಗಮ ಆಗಲಿ ಎಂದು ಬಯಸುತ್ತೇವೆ ಹಾಗಾಗಿ 2024ರ ಹೊಸ ವಸಂತ ಎಲ್ಲರ ಬಾಳಲ್ಲಿ ಇನ್ನಷ್ಟು ಬೆಳಕು ಹಾಗೂ ಸಿಹಿ ಸುದ್ದಿಯನ್ನು ನೀಡಲಿ ಎಂದು ನಾವೆಲ್ಲರೂ ಆಶಿಸೋಣ. ಇನ್ನೂ ಹೊಸ ವರ್ಷಕ್ಕೂ ಮುಂಚೆ ಬರುವ ವರ್ಷದ ಕೊನೆಯ ಅಮಾವಾಸ್ಯೆ ಎಂದಿಗೂ ಮರೆಯಬಾರದು. 

ಇನ್ನೂ ನಮಗೆ ಅಮಾವಾಸ್ಯೆ ಎಂದ್ರೆ ತಟ್ಟನೆ ನೆನಪಾಗುವುದು ಶುಭ ಕಾರ್ಯಕ್ಕೆ ಯೋಗ್ಯವಾದ ದಿನ ಅಲ್ಲ ಇನ್ನೂ ಆ ದಿನದಂದು ನಾವು ಕೊಂಚ ಎಚ್ಚರವನ್ನು ವಹಿಸಬೇಕು ಎಂದು ತಿಳಿಸಿರುತ್ತಾರೆ. ಆದರೆ ಅದೇ ಅಮಾವಾಸ್ಯೆಯ ದಿನದಂದು ತಮ್ಮ ಹಿರಿಯರಿಗೆ ಪೂಜೆ ಸಲ್ಲಿಸಿ ಅವರಿಗೆ ಎಡೆ ಇಡುವ ಕಾರ್ಯ ಮಾಡುತ್ತಾರೆ. ಆದರೆ ಈ ಅಮಾವಾಸ್ಯೆ ಕೊಡ ಸಾಕಷ್ಟು ಒಳ್ಳೆಯ ಶಖುನವನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ವರ್ಷದ ಅಂತ್ಯದಲ್ಲಿ ಬರುವ ಅಮಾವಾಸ್ಯೆ ಇನ್ನಷ್ಟು ಶುಭ ಫಲ ನೀಡಲಿದೆ. ವರ್ಷದ ಕೊನೆಯ ಅಮಾವಾಸ್ಯೆ ಅನೇಕ ಪರ್ವಗಳ ಮೊದಲ ದಿನವಾಗಿರುತ್ತದೆ. ಇದು ಹಿಂದೂ ಪಂಚಾಂಗಗಳಲ್ಲಿ ಒಂದು ಪ್ರಮುಖ ದಿನ. ಇದು ಸಂಸ್ಕೃತ ಶಬ್ದಾವಶೇಷಗಳ ಮೂಲಕ ಪರಿಚಯವಿರುವ ದಿನವೂ ಆಗಿದೆ. ಈ ದಿನವು ಸಮಾಜದಲ್ಲಿ ಧರ್ಮದ ಪ್ರಮುಖ ಆಚರಣೆಗಳ ಒಂದು ಭಾಗವಾಗಿದೆ. ಇದು ಅತ್ಯಂತ ಮಹತ್ತರವಾದ ಧಾರ್ಮಿಕ ಹಬ್ಬಗಳ ಸೂಚಕವಾಗಿದೆ. 

ಕೆಲವೊಮ್ಮೆ ಈ ಅಮಾವಾಸ್ಯೆಯ ದಿನದಲ್ಲಿ ವ್ರತ, ಧ್ಯಾನ, ಪೂಜೆ ಮತ್ತು ದಾನಧರ್ಮ ಮಾಡುವುದು ಪ್ರಶಸ್ತವಾಗಿದೆ. ಅಂತಹ ಪವಿತ್ರ ದಿನ.ಇನ್ನೂ ವರ್ಷದ ಅಂತ್ಯದಲ್ಲಿ ಬರುವ ಅಮಾವಾಸ್ಯೆಯಂದು   ಅಗನ್  ಅಮಾವಾಸ್ಯೆ  ಅಥವಾ ಮಾರ್ಗಶಿರಾ ಅಮಾವಾಸ್ಯೆ ಎಂದು ಕರೆಯುತ್ತಾರೆ. ಇನ್ನೂ 2023ರ ಕೊನೆಯ ಅಮಾವಾಸ್ಯೆ 12 ಡಿಸೆಂಬರ್ ಮಂಗಳವಾರ ನಲ್ಲಿ ಘೋಚಾರವಾಗಿದೆ. ಈ ಅಮಾವಾಸ್ಯೆ ಡಿಸೆಂಬರ್ 12ರ ಬೆಳಿಗ್ಗೆ 6ಗಂಟೆಗೆ ಶುರುವಾದರೆ ಅಂತ್ಯ ಕಾಣುವುದು ಡಿಸೆಂಬರ್ 13ರ 5;40ರ ಮುಂಜಾನೆ. ಈ ಕಾಲದಲ್ಲಿ ನೀವು ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಅಥವಾ ನಿಮ್ಮ ಹಿರಿಯರ ಪೂಜೆ ಸಲ್ಲಿಸಲು ಈ ಸಮಯ ಬಹಳ ಪ್ರಶಸ್ತವಾಗಿದೆ ಎಂದರೆ ತಪ್ಪಾಗಲಾರದು. ಇನ್ನೂ ಲಕ್ಷ್ಮಿ ಪೂಜೆ ಮಾಡಲು ಬಯಸುವರು ಬೆಳಿಗ್ಗಿನ ಜಾವ 6 ರಿಂದ ಬೆಳಿಗ್ಗೆ 9ಗಂಟೆಯ ವರೆಗೂ ಮಾಡಬಹುದು ಹಾಗೂ ತರ್ಪಣದ ಸಮಯ 11;30 ರಿಂದ ಮದ್ಯಾಹ್ನ12;45 ರವರೆಗು ಕೊಡ ನೀವು ತರ್ಪಣ ಬಿಡಬಹುದು.