ಬೋಲೇ ಬಾಬಾ ಸತ್ಸಂಗ : ಮೂಢನಂಬಿಕೆಯಿಂದ 121 ಮಂದಿಯ ದಾರುಣ ಸಾವು! ಕಾರಣ ಇಲ್ಲಿದೆ ನೋಡಿ?

ಬೋಲೇ ಬಾಬಾ ಸತ್ಸಂಗ : ಮೂಢನಂಬಿಕೆಯಿಂದ   121 ಮಂದಿಯ ದಾರುಣ ಸಾವು! ಕಾರಣ ಇಲ್ಲಿದೆ ನೋಡಿ?

ಮೂಢನಂಬಿಕೆಗಳು (ಅಥವಾ ನಂಬಿಕೆಗಳ) ಉತ್ಥಾನಕ್ಕೆ ಹಲವಾರು ಕಾರಣಗಳಿವೆ. ಆದ್ರೆ ಇದರಿಂದಲೇ ನಮ್ಮಲಿ ಸಾಕಷ್ಟು ಅಪಾಯಗಳು ಹೆಚ್ಚಾಗುತ್ತಿದೆ ಎಂದರೆ ತಪ್ಪಾಗಲಾರದು. ಈ ಮೂಡನಂಬಿಕೆ ಶಿಕ್ಷಣದ ಕೊರತೆಯ ಕಾರಣದಿಂದ, ವಿಜ್ಞಾನ ಮತ್ತು ತರ್ಕದ ಅರಿವಿಲ್ಲದವರು ಸುಲಭವಾಗಿ ಮೂಢನಂಬಿಕೆಗಳನ್ನು ನಂಬುತ್ತಾರೆ. ಕೆಲವೆ ವೇಳೆ, ಪೂರ್ವಜರಿಂದ ಬಂದಿರುವ ಸಂಪ್ರದಾಯಗಳು ಮತ್ತು ನಂಬಿಕೆಗಳು ಆವೃತ್ತಿಯಾಗಿ ಮುಂದುವರಿಯುತ್ತವೆ. ಭಯದ ಮತ್ತು ಅನಿಶ್ಚಿತತೆಯ ಸಮಯದಲ್ಲಿ, ಜನರು ಮೂಲ ಭಯಗಳನ್ನು ನಿವಾರಿಸಲು ಮೂಲಹೀನ ನಂಬಿಕೆಗಳನ್ನು ಆರಾಮಪ್ರದ ಎನಿಸುತ್ತದೆ. 

ಕೆಲವು ವೇಳೆ, ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಮೂಢನಂಬಿಕೆಗಳನ್ನು ಹರಡಲು ಸಹಕಾರಿ ಆಗುತ್ತವೆ. ವಿಜ್ಞಾನವನ್ನು ಸರಿಯಾಗಿ ಅರ್ಥಮಾಡಿ ಕೊಳ್ಳದವರಲ್ಲಿ ಮೂಲಹೀನ ನಂಬಿಕೆಗಳು ಹೆಚ್ಚು ವಾಸ್ತವ ಎನಿಸುತ್ತವೆ.ಈ ನಂಬಿಕೆಗಳನ್ನು ಕಡಿಮೆ ಮಾಡುವ ಮಾರ್ಗವೆಂದರೆ ಶಿಕ್ಷಣದ ಆವಶ್ಯಕತೆಯನ್ನು ಒತ್ತಿಹೇಳುವುದು, ವೈಜ್ಞಾನಿಕ ಚಿಂತನೆಯನ್ನು ಉತ್ತೇಜಿಸುವುದು ಮತ್ತು ಜನರಲ್ಲಿ ಜ್ಞಾನ ಮತ್ತು ಅರಿವಿನ ಬೆಳವಣಿಗೆ ಮಾಡುವುದು. ಇದೀಗ ನಾವು ಎಷ್ಟೆಲ್ಲ ಪೀಠಿಕೆ ಹಾಕುತ್ತಿರುವುದು  ಇದೇ ಮೂಢ ನಂಬಿಕೆಯಿಂದ 170ಮಂದಿಯ ಪ್ರಾಣ ಹೋಗಿರುವ ಕಥೆಯ ಬಗ್ಗೆ ತಿಳಿಸಲು.  

ಉತ್ತರ ಪ್ರದೇಶದ ಹತ್ರಸನದಲ್ಲಿ  ನಡೆದಿರುವ ಘಟನೆ ಎಷ್ಟೇ ವರ್ಷಗಳು ಕಳೆದ್ರು ಕೊಡ ಯಾವತ್ತಿಗೂ ಮರೆಯಲಾಗದ ಒಂದು ಘಟನೆಗಿದೆ. ಪೊಲೀಸ್ ಪೇದೆ ಆಗಿದ್ದ ಒಬ್ಬ ವ್ಯಕ್ತಿ ಇನ್ಫ್ಯುಲೆನ್ಸರ್ ಆಗುವ ಕಾರಣದಿಂದ ಸ್ವಯಂ ನಿವೃತ್ತಿ ಪಡೆದುಕೊಂಡು ಬೋಲೇ ಬಾಬಾ ಎಂದು ಪ್ರಖ್ಯಾತಿ ಪಡೆದುಕೊಳ್ಳುತ್ತಾರೆ. ಇನ್ನೂ ಇವರನ್ನು ಮಾತನಾಡಲು ನೋಡಲು ಅಷ್ಟೇ ಯಾಕೆ ಇವರ ಪಾದದ ದೋಳನ್ನು ತಾಕಲು ಮುಗಿಬೀಳುತ್ತಾರೆ. ಇದೀಗ ಅದೇ ಕಾರಣಕ್ಕೆ ಜನ ಇವರು ತನ್ನ ಮಾತು ಮುಗಿಸಿ ಹೊರಟ ನಂತರ ಇವರ ಪಾದದ ಧೂಳನ್ನು  ಮುಟ್ಟಬೇಕು ಎಂದು ಜನರು ತುಳಿತಕ್ಕೆ ಸಿಲುಕಿ ಈಗ ಸಿಕ್ಕಿರುವ ಸಂಖ್ಯೆಯ ಪ್ರಕಾರ 121  ಮಂದಿ ಸಾವನ್ನು ಅಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ನಾಪತ್ತೆ ಆಗಿರುವ ವ್ಯಕ್ತಿಗಳ ಶೋಧನೆ ಶುರುವಾಗಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಿಗೆ ಕೊಡ ಆಗಬಹುದು.

( video credit : Third Eye )