ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಹಾಗೆ ತಮ್ಮದೇ ಆದ ವಿಶಿಷ್ಟ ಶೈಲಿಯ ನಿರೂಪಣೆ ಮೂಲಕ ತುಂಬಾ ಸದ್ದು ಮಾಡಿದ್ದಾರೆ. ಹೌದು. ಅದೇ ಸಾಲಿಗೆ ಇದೀಗ ನಟ ಮಾಸ್ಟರ್ ಆನಂದ್ ಅವರ ಪುತ್ರಿ ಕೂಡ ಸೇರಿದ್ದು ತುಂಬಾ ಖುಷಿಯ ವಿಚಾರ. ಮಾಸ್ಟರ್ ಆನಂದ್ ಪುತ್ರಿ ವಂಶಿಕ ಅಂಜನಿ ಕಶ್ಯಪ ಅವರು ಆರಂಭದಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮೂಲಕ ಬೆಳಕಿಗೆ ಬಂದವರು. ಆ ಕಾರ್ಯಕ್ರಮ ಗೆದ್ದು ಬಿಗಿದ ವಂಶಿಕ, ನಂತರ ಅಭಿನಯದಲ್ಲಿ ಎಲ್ಲರ ಮನೆ ಮಾತಾಗಿದ್ದಾರೆ. ಯಾವುದೇ ಪಾತ್ರ ಕೊಟ್ಟರು ತುಂಬಾ ಸಲೀಸಾಗಿ, ಲೀಲಾ ಜಲವಾಗಿ ಅಭಿನಯಿಸುತ್ತಾರೆ.

ಹೌದು ನಟ ಶಿವು ಅವರ ಜೊತೆ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲೂ ಅಭಿನಯ ಮಾಡಿ ಅಲ್ಲಿಯೂ ಕೂಡ ಗೆದ್ದು ಸಂತಸದಲ್ಲಿದ್ದಾರೆ. ಹೀಗಿರುವಾಗ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಸೀಸನ್ 2ಕ್ಕೆ ಮತ್ತೆ ಆಗಮಿಸಿದ ಈ ವಂಶಿಕ ಈಗ ನಿರೂಪಣೆಗೆ ಇಳಿದಿದ್ದಾರೆ ಎನ್ನಲಾಗಿದೆ. ಹೌದು ಇಲ್ಲಿಯೂ ಸಹ ವಂಶಿಕ ಗಮನ ಸೆಳೆಯುತ್ತಿದ್ದಾಳೆ. ಶೋಗೆ ನಿರೂಪಣೆ ಮಾಡಲು ಅನುಶ್ರೀ ಅವರನ್ನೇ ಮೀರಿಸುವಂತೆ ವಂಶಿಕ ಸಂಭಾವನೆ ಪಡೆಯುತ್ತಿದ್ದಾಳೆ ಎಂದು ಮಾಧ್ಯಮ ಮೂಲಕ ಹೇಳಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಲು ಎಪಿಸೋಡ್ ಗೆ 1.8 ಲಕ್ಷ ಹಣವನ್ನ ವಂಶಿಕಾ ಪಡೆಯುತ್ತಿದ್ದಾಳೆ ಎಂದು ತಿಳಿದುಬಂದಿದೆ.

ಜೊತೆಗೆ ಅನುಶ್ರೀ ಅವರು ಈ ವಿಷಯ ತಿಳಿದು ಅಚ್ಚರಿಗೆ ಒಳಗಾಗಿದ್ದು ಅವರು ಕೂಡ ತಮ್ಮ ಸಂಭಾವನೆಯ ಹೆಚ್ಚಿಗೆ ಮಾಡಿಕೊಂಡಿದ್ದಾರಂತೆ. ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುವ ಅನುಶ್ರೀ ಇದೀಗ ಮತ್ತೆ ಸರಿಗಮಪ ನಿರೂಪಕಿಯಾಗಿ ಬಂದಿದ್ದಾರೆ. ಈ ಕಾರ್ಯಕ್ರಮಕ್ಕೆ ಒಂದು ಎಪಿಸೋಡಿಗೆ ಈಗ ಅನುಶ್ರೀ 2 ಲಕ್ಷ ಹಣವನ್ನು ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ…ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವ ತಿಳಿಸಿ, ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..

By Kumar K