ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಯಾರಿಗೆ ಗೊತ್ತಿಲ್ಲ ಹೇಳಿ. ಸುಮತಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದವರು. ನಂತರ ಅರುಂಧತಿ, ಕಾದಂಬರಿಯಾಗಿ ಎಲ್ಲ ಮನ ಗೆದ್ದ ನಟಿ ಶ್ವೇತಾ ಚೆಂಗಪ್ಪ. ಇದರ ಜೊತೆಗೆ ಸುಕನ್ಯ, ಗೆಜ್ಜೆನಾದ, ಪುನರ್ಜನ್ಮ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಸುಮಾರು ಎರಡು ದಶಕಗಳಿಂದ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿರುವ ಶ್ವೇತಾ ಚೆಂಗಪ್ಪ, ಈಗ ನಿರೂಪಕಿಯಾಗಿ ಸೆಕೆಂಡ್ ಇನ್ನಿಂಗ್ಸ್ ಅನ್ನು ಆರಂಭಿಸಿದ್ದಾರೆ. ಬಿಗ್ ಬಾಸ್ ಸೀಸನ್ 2ರಲ್ಲೂ ಭಾಗಿಯಾಗಿದ್ದ ಶ್ವೇತಾ ಅವರು ನಟನೆಯಷ್ಟೇ ಅಲ್ಲದೇ, ನಿರೂಪಕಿಯಾಗಿಯೂ ಚಿರಪರಿಚಿತರು. ಅಷ್ಟೇ ಅಲ್ಲದೇ, ಸ್ಯಾಮಡಲ್ ವುಡ್ ನಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ಸಹೋದರಿ ಪಾತ್ರದಲ್ಲೀ ಮಿಂಚಿರುವ ಚೆಲುವೆ.

ಯಾರಿಗುಂಟು ಯಾರಿಗಿಲ್ಲ, ಡ್ಯಾನ್ಸಿಂಗ್ ಸ್ಟಾರ್, ಸೂಪರ್ ಮಿನಿಟ್, ಡ್ಯಾನ್ಸ್ ಜೂನಿಯರ್ಸ್ ಡ್ಯಾನ್ಸ್, ಕುಣಿಯೋಣು ಬಾರಾ, ಡಿ ಡ್ಯಾನ್ಸ್, ಜೋಡಿ ನಂ.1 ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಹೋಸ್ಟ್ ಆಗಿದ್ದಾರೆ. ಶ್ವೇತಾ ಚೆಂಗಪ್ಪ ಅವರ ಆಂಕರಿಂಗ್ ಅನ್ನು ಕೂಡ ಹಲವರು ಮೆಚ್ಚಿಕೊಂಡಿದ್ದಾರೆ. ಕೃಷ್ಣನ್ ಮ್ಯಾರೇಜ್ ಸ್ಟೋರಿ, ಗನ್, ತಂಗಿಗಾಗಿ, ವರ್ಷ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಂಆರ್ ಅವರ ಜೊತೆಗೆ ವೇದ ಚಿತ್ರದಲ್ಲೂ ನಟಿಸಿದ್ದಾರೆ. ಇನ್ನು ಮಜಾಟಾಕೀಸ್ ನಲ್ಲಿ ಸೃಜನ್ ಲೋಕೇಶ್ ಅವರ ಜೊತೆ ಸೇರಿ ಹಾಸ್ಯಭರಿತ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು.

ಆದರೆ, ಶ್ವೇತಾ ಚೆಂಗಪ್ಪಾ ಅವರಿಗೆ ಮೊದಲು ಸೃಜನ್ ಲೋಕೇಶ್ ಎಂದರೆ ಇಷ್ಟವಾಗುತ್ತಿರಲಿಲ್ಲವಂತೆ. ತುಂಬಾ ಆಟಿಟ್ಯೂಡ್ ಇರುವ ಮನುಷ್ಯ ಎಂದುಕೊಂಡಿದ್ದರಂತೆ. ಇನ್ನು ಸೃಜನ್ ಅವರಿಗೂ ಶ್ವೇತಾ ಕಂಡರೆ ಇರಿಟೇಟ್ ಆಗುತ್ತಿತ್ತಂತೆ. ಆದರೆ ಸೃಜನ್ ಗ್ರೀಷ್ಮಾ ಅವರ ಪತಿ ಎಂದ ತಿಳಿದ ಮೇಲೆ ಶ್ವೇತಾ ಅವರಿಗೆ ಸೃಜನ್ ಮೇಲೆ ಇದ್ದ ಹುಸಿ ಕೋಪ, ಇರಿಟೇಶನ್ ಕಡಿಮೆಯಾಯಿತಂತೆ. ಈ ಬಗ್ಗೆ ಸ್ವತಃ ಶ್ವೇತಾ ಚೆಂಗಪ್ಪ ಅವರೇ ಸಂದರ್ಶನ ನೀಡುವ ವೇಳೆ ಹೇಳಿದ್ದಾರೆ.