ಈ ವಾರ ಕಿಚ್ಚ ಸುದೀಪ್ ವಾರದ ಕತೆ ಕಾರ್ಯಕ್ರಮವನ್ನು ನಡೆಸಿಕೊಡುವುದಿಲ್ಲವಂತೆ: ಯಾಕೆ ಗೊತ್ತಾ..?

ಬಿಗ್ ಬಾಸ್ ಸೀಸನ್ 9 ಶುರುವಾಗಿ ಈಗಾಗಲೇ ನಾಲ್ಕೇ ವಾರ ನಡೆಯುತ್ತಿದೆ. ಆದರೆ ಈ ವಾರ ವಾರದ ಕತೆ ಕಿಚ್ಚನ ಜೊತೆ ಇರುವುದಿಲ್ಲ. ಯಾಕೆಂದರೆ ಕಿಚ್ಚ ಸುದೀಪ್ ಅವರು ಬರುವುದಿಲ್ಲವಂತೆ. ಹಾಗಾಗಿ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮ ಇರುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ಮಾತುಗಳನ್ನು ಕೇಳಿದ ಬಿಗ್ ಬಾಸ್ ಪ್ರೇಕ್ಷಕರೆಲ್ಲರೂ ಶಾಕ್ ಆಗುವುದರ ಜೊತೆಗೆ ಬೇಸರವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಕಳೆದ ವಾರ ನಡೆದ ಕಾರ್ಯಕ್ರಮದಲ್ಲಿ ಆರ್ಯವರ್ಧನ್ ಗುರೂಜಿ ಅವರು ಸ್ವಲ್ಪ ಓವರ್ ಆಗಿ ಮಾತನಾಡಿದ್ದರು. ಇದರಿಂದ ಕಿಚ್ಚ ಸುದೀಪ್ ಅವರು ಗರಂ ಆಗಿದ್ದರು. ಈ ಕಾರಣಕ್ಕೆ ಇನ್ಮುಂದೆ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮವನ್ನು ನಿಲ್ಲಿಸಲಾಗಿದೆಯಾ ಎಂದು ಕೂಡ ಯೋಚಿಸುತ್ತಿದ್ದಾರೆ.

ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಶುರುವಾದಾಗಿನಿಂದಲೂ ಈ ಕಾರ್ಯಕ್ರಮವನ್ನು ತಪ್ಪದೇ ನಡೆಸಿಕೊಡುತ್ತಿದ್ದಾರೆ. ಆದರೆ, ಕಳೆದ ಸೀಸನ್ ನಲ್ಲಿ ಕೊರೊನಾಗೆ ತುತ್ತಾದ ಹಿನ್ನೆಲೆ ಸುಮಾರು ನಾಲ್ಕು ವಾರಗಳ ಕಾಲ ಕಾರ್ಯಕ್ರಮವನ್ನು ನಡೆಸಿಕೊಡಲು ಸಾಧ್ಯವಾಗಲಿಲ್ಲ. ಅದು ಬಿಟ್ಟರೆ, ಇದುವರೆಗೂ ಈ ಕಾರ್ಯಕ್ರಮವನ್ನು ನಿಲ್ಲಿಸಿಲ್ಲ. ಆದರೆ ಈಗ ಸುದೀಪ್ ಅವರು ಈ ವಾರ ಕಾರ್ಯಕ್ರಮವನ್ನು ನಡೆಸಿಕೊಡುತ್ತಿಲ್ಲ ಎಂದು ಸುದ್ದಿಯಾಗಿದೆ. ಆದರೆ ಯಾಕೆ ಎಂಬುದು ಪ್ರೇಕ್ಷಕರಿಗೆ ಇನ್ನೂ ಗೊತ್ತಾಗಿಲ್ಲ.

ಈ ವಾರ 21ರಂದು ದಿ. ಡಾ. ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಗಂಧದಗುಡಿಯ ಕಾರ್ಯಕ್ರಮ ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಕೂಡ ಭಾಗವಹಿಸುತ್ತಿದ್ದಾರೆ. ಈ ಕಾರಣದಿಂದಲೇ ಸುದೀಪ್ ಅವರು ಈ ವಾರ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಸುದೀಪ್ ಅವರು ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆಯೇ..? ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ..