ಬಿಗ್ ಬಾಸ್ ಮನೆಯಲ್ಲಿರುವ ಆರ್ಯವರ್ಧನ್ ಗುರೂಜಿ ಗ್ರಹಚಾರ ಬಿಡಿಸಿದ ಕಿಚ್ಚ ಸುದೀಪ್

ಬಿಗ್ ಬಾಸ್ ಸೀಸನ್ 9 ಶುರುವಾಗಿ ಮೂರುವಾರ ಕಳೆದಿದೆ. ಮನೆಯ ಸದಸ್ಯರೆಲ್ಲರೂ ಒಬ್ಬರಿಗೊಬ್ಬರು ಅಡ್ಜಸ್ಟ್ ಆಗಿದ್ದಾರೆ. ಎಲ್ಲರೂ ಹೊಂದಿಕೊಂಡಿರುವ ಸಮಯದಲ್ಲೇ ಬಿಗ್ ಬಾಸ್ ಟಾಸ್ಕ್ ಗಳನ್ನು ನೀಡಿ, ಎಲ್ಲರ ಮನಸ್ಥಿತಿಯನ್ನು ಪರೀಕ್ಷೆ ಮಾಡುತ್ತಿದೆ. ಕಳೆದ ವಾರ ಪೂರ ಒಂದೇ ಟಾಸ್ಕ್ ಅನ್ನು ನೀಡಿದ್ದ ಬಿಗ್ ಬಾಸ್, ಚಿನ್ನ ಗೆದ್ದವರಿಗೆ ಕ್ಯಾಪ್ಟನ್ ಶಿಪ್ ಕೊಟ್ಟಿದೆ. ಈ ವಾರ ದೀಪಿಕಾ ದಾಸ್ ಅವರು ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿರಲಿದ್ದಾರೆ. ಆದರೆ ಚಿನ್ನದ ಟಾಸ್ಕ್ ನೀಡಿದ್ದರಲ್ಲಿ ಮ್ಯಾಚ್ ಫಿಕ್ಸಿಂಗ್ ಇದೆ ಎಂದು ಹೇಳಿದ ಆರ್ಯವರ್ಧನ್ ಗುರೂಜಿ ಗ್ರಹಾಚಾರವನ್ನು ಕಿಚ್ಚ ಸುದೀಪ್ ಬಿಡಿಸಿದ್ದಾರೆ.

ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಶನಿವಾರ ಕಿಚ್ಚ ಸುದೀಪ್ ಅವರು ಮೂವರು ಸದಸ್ಯರನ್ನು ನಾಮಿನೇಷನ್ ನಿಂದ ಸೇವ್ ಮಾಡಿ, ರೂಪೇಶ್ ಶೆಟ್ಟಿ ಮತ್ತು ಸಾನ್ಯಾಗೆ ಎಚ್ಚರಿಕೆಯನ್ನು ನೀಡಿದ್ದರು. ಇದರಿಂದ ರೂಪೇಶ್ ಶೆಟ್ಟಿ ಅಪ್ಸೆಟ್ ಆಗಿದ್ದರು. ಇನ್ನು ಭಾನುವಾರದ ಕಾರ್ಯಕ್ರಮದಲ್ಲಿ ದರ್ಶ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದು, ಆರ್ಯವರ್ಧನ್ ಗುರೂಜಿ ಕಿಚ್ಚ ಸುದೀಪ್ ಜೊತೆಗೆ ಕಿರಿ ಕಿರಿ ಮಾಡಿಕೊಂಡಿದ್ದಾರೆ. ಪದೇ ಪದೇ ಸುದೀಪ್ ಅವರು ಹೇಳುವ ಮಾತುಗಳನ್ನು ಅರ್ಥ ಮಾಡಿಕೊಲ್ಳದ ಆರ್ಯವರ್ಧನ್ ಅವರು ಈ ವಾರ ಸುದೀಪ್ ಅವರಿಂದ ವಾರ್ನಿಂಗ್ ಪಡೆದುಕೊಂಡಿದ್ದಾರೆ.

ಬಿಗ್ ಬಾಸ್ ನೀಡಿದ್ದ ಚಿನ್ನದ ಟಾಸ್ಕ್ ನಲ್ಲಿ ಎಲ್ಲರೂ ಚೆನ್ನಾಗಿ ಆಡಿದ್ದರು. ಅನುಪಮಾ ಗೌಡ, ದೀಪಿಕಾ ದಾಸ್, ಅರುಣ್ ಸಾಗರ್ ಎಲ್ಲರೂ ಅದ್ಭುತವಾಗಿ ಆಡಿದ್ದರು. ಒಬ್ಬರಿಗಿಂತ ಒಬ್ಬರು ಆಟವನ್ನು ಚೆನ್ನಾಗಿ ಆಡಿದ್ದರು. ಆದರೆ, ಟಾಸ್ಕ್ ನಲ್ಲಿ ಟ್ವಿಸ್ಟ್ ಇಟ್ಟಿದ್ದು ಬಿಗ್ ಬಾಸ್ ಮ್ಯಾಚ್ ಫಿಕ್ಸಿಂಗ್ ಎಂದು ಆರ್ಯವರ್ಧನ್ ಹೇಳಿದ್ದಾರೆ. ಈ ಮಾತನ್ನು ಕೇಳಿದ ಕಿಚ್ಚ ಸುದೀಪ್ ಅವರು ಇಲ್ಲಿ ಯಾವ ಆಟವೂ ಮ್ಯಾಚಿಂಗ್ ಫಿಕ್ಸಿಂಗ್ ಅಲ್ಲ. ತಪ್ಪು ತಿಳಿಯಬೇಡಿ ಎಂದು ಎಷ್ಟು ಬುದ್ಧಿವಾದ ಹೇಳಿದರೂ ಕೇಳುವುದಿಲ್ಲ. ಇದರಿಂದ ಸುದೀಪ್ ಅವರು ಗರಂ ಆಗಿದ್ದಾರೆ. ಅಲ್ಲದೇ, ಆರ್ಯವರ್ಧನ್ ಅವರಿಗೆ ಬಿಗ್ ಬಾಸ್ ವೇದಿಕೆಗೆ ಅವಮಾನ ಮಾಡಿದರೆ ನಾನು ಸುಮ್ಮನಿರುವುದಿಲ್ಲ ಆರ್ಯವರ್ಧನ್ ಎಂದು ಏಕವಚನದಲ್ಲಿ ಬೈದಿದ್ದಾರೆ.