ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಜನ ಮನ್ನಣೆ ಗಳಿಸಿರುವ ಬಿಗ್ ಬಾಸ್ ಒಟ್ಟು ಎಂಟು ಸೀಸನ್ಗಳನ್ನು ಮುಗಿಸಿದೆ. ಹೌದು ಈ ಬಾರಿ 9ನೇ ಸೀಸನ್ ಪ್ರಾರಂಭಕ್ಕೂ ಮುನ್ನ ಓ ಟಿ ಟಿ ಎನ್ನುವ ವೇದಿಕೆ ಮೂಲಕ ಕೆಲವು ಸ್ಪರ್ಧಿಗಳಿಗೆ ಬಿಗ್ಬಾಸ್ ವೂಟ್ ಸೆಲೆಕ್ಟ್ ನಲ್ಲಿ ಷೋನ ಪ್ರಸಾರ ಮಾಡಿ ನಡೆಸಿಕೊಟ್ಟಿತ್ತು. ತದನಂತರ ಅಲ್ಲಿ ಒಟ್ಟು ನಾಲ್ಕು ಜನರನ್ನು 45 ದಿನಗಳ ಬಳಿಕ ಭರ್ಜರಿಯಾಗಿ ಬಿಗ್ ಬಾಸ್ ಒಂಬತ್ತಕ್ಕೆ ಟಿವಿ ಕಾರ್ಯಕ್ರಮಕ್ಕೆ ಕರೆ ತಂದಿತ್ತು. ಇದೆಲ್ಲದರ ನಡುವೆ ಮೊನ್ನೆ ಪ್ರೊಮೋ ಬಿಡುಗಡೆಯಾಗಿದ್ದು ಆರ್ಯವರ್ಧನ್ ಗುರೂಜಿಯವರು ಬಿಗ್ ಬಾಸ್ ವಿರುದ್ಧ ಮಾತನಾಡಿದ್ದಾರೆ. ಹೌದು ಬಿಗ್ ಬಾಸ್ ವಿಕ್ಷಕರು ಕೂಡ ಇದರ ಬಗ್ಗೆ ಸಾಕಷ್ಟು ಬಾರಿ ಚರ್ಚೆ ನಡೆಸಿದ್ದರು. ಹೆಚ್ಚಾಗಿ ಕಾಮೆಂಟ್ಗಳನ್ನು ಕೂಡ ಮಾಡುತ್ತಿದ್ದರು..

ಬಿಗ್ ಬಾಸ್ ವಿಭಿನ್ನವಾಗಿ ಕಾಣುತ್ತಿದೆ…ಕನ್ನಡದ ಬಿಗ್ಬಾಸ್ ಆಟಗಳು ಒಂದು ಸ್ಕ್ರಿಪ್ಟಡ್ ರೀತಿಯೇ ಕಂಡುಬರುತ್ತವೆ.ಇಲ್ಲಿ ನಡೆಯುವುದು ಎಲ್ಲಾ ಸ್ಕ್ರಿಪ್ಟೆಡ್ ರೀತಿಯೇ ಹಾಗೆ ಮ್ಯಾಚ್ ಫಿಕ್ಸಿಂಗ್ ರೀತಿಯೇ ಆಗಿರುತ್ತದೆ ಎಂದು ಮಾತನಾಡುತ್ತಿದ್ದರು ಎನ್ನಲಾಗಿದೆ. ಆ ಮಾತನ್ನು ಈಗ ಕಿಚ್ಚನ ಎದುರು ಸಂಖ್ಯಾ ಶಾಸ್ತ್ರದ ಆರ್ಯವರ್ಧನ್ ಗುರೂಜಿ ಮಾತನಾಡಿದ್ದಾರೆ.. ಹೌದು ನಿಮ್ಮ ಪ್ರಕಾರ ಈ ಬಾರಿ ಈ ಬಿಗ್ ಬಾಸ್ ಸೀಸನ್ ೯ ರ ಟಾಪ್ 2 ಸ್ಪರ್ಧಿಗಳು ಯಾರು ಯಾರು ಇರುತ್ತಾರೆ ಎಂಬ ಪ್ರಶ್ನೆಗೆ ಮೊದಲಿಗೆ ಕೆಲವರು ಅರುಣ್ ಸಾಗರ್ ಹೆಸರನ್ನು ತೆಗೆದುಕೊಂಡರೆ, ಇನ್ನೂ ಕೆಲವರು ಬೇರೆ ಹೆಸರುಗಳನ್ನು ತೆಗೆದುಕೊಂಡರು. ಆದರೆ ಆರ್ಯವರ್ಧನ್ ಅವರ ಸರದಿ ಬಂದಾಗ ಅನುಪಮಾ ಎಂದು ಹೇಳಿ ಬಿಗ್ ಬಾಸ್ ವಿರುದ್ಧ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್ ಮ್ಯಾಚ್ ಫಿಕ್ಸಿಂಗ್ ಕಾರ್ಯಕ್ರಮ ಅನ್ಸುತ್ತೆ, ಅನುಪಮಾ ಅವರೇ ಟಾಪ್ ಅಲ್ಲಿ ಇರಬೇಕು ಎಂಬುದು ಬಿಗ್ ಬಾಸ್ ಅವರ ಆಸೆಯಂತಿದೆ ಎಂದು ಹೇಳಿಬಿಡುತ್ತಾರೆ.

ಆಗ ಕಿಚ್ಚ ಸುದೀಪ್ ಅವರು ಕೆಂಡಮಂಡಲವಾಗಿ ನಿಮ್ಮ ಮಾತಿನ ಮೇಲೆ ನಿಗಾ ಇರಲಿ ಎಂದು ಹೇಳುತ್ತಾರೆ. ನಾನು ಜನರಲ್ಲಾಗಿ ಹೇಳಿದೆ ಸರ್, ಬಿಗ್ ಬಾಸ್ ಮ್ಯಾಚ್ ಫಿಕ್ಸಿಂಗ್ ತರ ಇದೆ ಎಂದು ಹೇಳುತ್ತಾರೆ. ಆಗ ಕಿಚ್ಚ ಸುದೀಪ್ ನಿಮ್ಮ ವ್ಯಕ್ತಿತ್ವದ ಬಗ್ಗೆ ಮಾತನಾಡಿದರೆ ಇಷ್ಟುದ್ದ ಮಾತನಾಡುತ್ತೀರಾ ಎಂದು ಗರಂ ಆಗುತ್ತಾರೆ. ಇಲ್ಲಿದೆ ನೋಡಿ ಆ ವಿಡಿಯೋ. ಹಾಗೆ ಗುರೂಜಿ ಹೇಳಿದ ಈ ವಿಚಾರವಾಗಿ ಕೆಲವರು ಅವರ ಪರ ನಿಂತುಕೊಂಡಿದ್ದಾರೆ. ಇದು ಸತ್ಯವೇ ಇದೆ ಬಿಡಿ, ಆ ಗುರೂಜಿ ಇರುವ ನಿಜಾಂಶ ಹೇಳಿ ಬಿಗ್ ಬಾಸ್ ಬುಡಕ್ಕೆ ಬೆಂಕಿ ಇಟ್ಟಿದ್ದಾರೆ ಹೇಳುತ್ತಿದ್ದಾರೆ. ಇದು ನಿಜವೇ ಬಿಡಿ ಎಂದು ಅವರ ಪರವಾಗಿ ಮಾತನಾಡುತ್ತಿದ್ದಾರೆ ಎನ್ನಲಾಗಿದೆ. ನೀವು ಈಗಾಗಲೇ ಆರ್ಯವರ್ಧನ್ ಮಾತುಗಳನ್ನ ಕೇಳಿದ್ದರೆ ಹಾಗೂ ಅವರು ಬಿಗ್ ಬಾಸ್ ಒಂದು ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿರುವ ಮಾತಿಗೆ ನಿಮ್ಮ ಅಭಿಪ್ರಾಯವನ್ನು ಹೇಳಿ ನಿಮ್ಮ ಅನಿಸಿಕೆಯನ್ನು ತಿಳಿಸಿ ಧನ್ಯವಾದಗಳು..

By Kumar K