ನಟ ಶರಣ್ ಅವರು ಚಿತ್ರರಂಗದಲ್ಲಿ ಹಂತ ಹಂತವಾಗಿ ಬೆಳೆದವರು. ನಟಿ ಶೃತಿಯನ್ನೇ ಹಿಂಬಾಲಿಸಿದ ಶರಣ್ ಅವರು ಹಾಸ್ಯ ನಟನಾಗಿ ಹೊರಹೊಮ್ಮಿದರು.

ನಟ ಶರಣ್ ಅವರು ಚಿತ್ರರಂಗದಲ್ಲಿ ಹಂತ ಹಂತವಾಗಿ ಬೆಳೆದವರು. ನಟಿ ಶೃತಿಯನ್ನೇ ಹಿಂಬಾಲಿಸಿದ ಶರಣ್ ಅವರು ಹಾಸ್ಯ ನಟನಾಗಿ ಹೊರಹೊಮ್ಮಿದರು. ನೂರಾರು ಚಿತ್ರಗಳಲ್ಲಿ ಹಾಸ್ಯ ನಟನೆಯನ್ನು ಮಾಡಿ ಕನ್ನಡ ಜನತೆಯ ಮನ ಗೆದ್ದರು. ಮೂಲತಃ ರಂಗಭೂಮಿಯಿಂದ ಬಂದ ಶರಣ್, ಹಾಡು, ನಟನೆ ಎಲ್ಲದರಲ್ಲೂ ಜನರ ಮನಸ್ಸನ್ನು ಗೆದ್ದಿದ್ದಾರೆ. ಶರಣ್ ಅವರ ತಂದೆ ತಾಯಿ ಕೂಡ ರಂಗಭೂಮಿ ಕಲಾವಿದರೆ. ನಾಟಕ ಕಂಪನಿಯಲ್ಲೇ ಹುಟ್ಟಿ ಬೆಳೆದು, ಅಲ್ಲೇ ಪ್ರೀತಿಸಿ ಮದುವೆಯಾದವರೇ ಶೃತಿ ಹಾಗೂ ಶರಣ್ ಅವರ ಪೋಷಕರು.

ಇವರ ಕುಟುಂಬದ ಬಗ್ಗೆ ಇಡೀ ಕರುನಾಡಿಗೇ ಗೊತ್ತಿರುವ ವಿಚಾರ. ಮೊದ ಮೊದಲು ಸಣ್ಣ ಪುಟ್ಟ ಪಾತ್ರಗಳ ಮೂಲಕ ತೆರೆ ಹಂಚಿಕೊಂಡ ಶರಣ್ ಅವರು ಹಂತ ಹಂತವಾಗಿ ಬೆಳೆದಿದ್ದಾರೆ. ಪೋಷಕ ಪಾತ್ರಗನ ಬಳಿಕ ಹಾಸ್ಯ ನಟರಾದರು. ಬಳಿಕ ಹೀರೋ ಆಗಿ ಕೂಡ ಕಾಣಿಸಿಕೊಂಡರು. ಕನ್ನಡಿಗರು ಶರಣ್ ಅವರನ್ನು ಹಾಸ್ಯ ನಟನನ್ನಾಗಿಯೂ, ನಾಯಕ ನಟನನ್ನಾಗಿಯೂ ಒಪ್ಪಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ಬೆಳೆದಂತೆಯೇ, ಜೀವನದಲ್ಲೂ ಬೆಳೆದು ಗುರಿ ಮುಟ್ಟಿದ್ದಾರೆ. ಇವರಿಗೆ ಹೃದಯ ಹಾಗೂ ಪುಣ್ಯ ಎಂಬ ಇಬ್ಬರು ಮಕ್ಕಳಿದ್ದಾರೆ.ಗಂಡು ಮಗುವಿನ ಹೆಸರು ಹೃದಯ, ಹೆಣ್ಣು ಮಗುವಿನ ಹೆಸರು ಪುಣ್ಯ.

ಇದೀಗ ಅವರ ಮಗಳು ಕೂಡ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವೇ. ಶರಣ್ ಅವರ ನಟನೆಯ ಅವತಾರ ಪುರುಷ ಎಂಬ ಚಿತ್ರದಲ್ಲಿ ಪುಣ್ಯ ಅವರು ಕಾಣಿಸಿಕೊಂಡಿದ್ದಾರೆ. ಅವರ ಮುಗ್ಧ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ ಕೂಡ. ಇದೀಗ ಪುಣ್ಯ ಅವರು ತಂದೆಯಂತೆಯೇ ಕೇವಲ ನಟನೆಯಷ್ಟೇ ಅಲ್ಲ. ಹಾಡುವುದರಲ್ಲೂ ಸೈ ಎಂದು ತೋರಿಸಿಕೊಟ್ಟಿದ್ದಾರೆ. ಸೋಜುಗದ ಸೂಜು ಮಲ್ಲಿಗೆ ಎಂಬ ಹಾಡನ್ನು ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ.