ಇತ್ತೀಚಿಗಷ್ಟೇ ಬಿಗ್ ಬಾಸ್ ರಿಯಾಲಿಟಿ ಶೋ ನಿಂದ ಹೊರ ಬಂದಿರುವ ಸಾನ್ಯಾ ಅಯ್ಯರ್ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಆಗ ಬಹುದು ಎಂದು ಸಾಮಾಜಿಕ ಜಾಲ ತಾಣದಲ್ಲಿ ಚರ್ಚೆ ಆಗುತ್ತಿದೆ .

ಪುಟ್ಟಗೌರಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದಂತಹ ಖ್ಯಾತಿ ಸಾನ್ಯಾ ಅಯ್ಯರ್ ಅವರಿಗೆ ದೊರೆಯುತ್ತದೆ. ಸಾನ್ಯಾ ಅಯ್ಯರ್ ಅವರ ತಾಯಿ ದೀಪಾರವರೂ ಕೂಡ ಕಿರುತರೆ ಕಲಾವಿದೆ, ಸಾಕಷ್ಟು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ, ರಂಗಭೂಮಿಯಲ್ಲೂ ಕೂಡ ಬಣ್ಣ ಹಚ್ಚಿದ್ದಾರೆ, ಇನ್ನು ಸಿನಿಮಾದಲ್ಲಿಯೂ ಕೂಡ ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ತಾಯಿಯ ಪ್ರತಿಭೆಯೇ ಮಗಳಿಗೂ ಕೂಡ ಬಳುವಳಿಯಾಗಿ ಬಂದಿದೆ ಅಂತ ಹೇಳಬಹುದು.

ಪುಟ್ಟಗೌರಿ ಪಾತ್ರದಿಂದ ಹೊರ ಬಂದ ನಂತರ ಸಾನ್ಯಾ ಅವರು ತಮ್ಮ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನವನ್ನು ನೀಡುತ್ತಾರೆ, ತದನಂತರ ಇವರು ಕಾಣಿಸಿಕೊಂಡಿದ್ದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಡ್ಯಾನ್ಸಿಂಗ್ ಶೋನಲ್ಲಿ. ಸಾನ್ಯಾ ಕೇವಲ ನಟನೆಯಲ್ಲಿ ಮಾತ್ರ ಕರಗತ ಪಡೆದುಕೊಂಡಿರಲಿಲ್ಲ ಇದಕ್ಕಿಂತಲೂ ಹೆಚ್ಚಾಗಿ ಡಾನ್ಸ್ ಮಾಡುವುದರಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದರು. ಡಾನ್ಸ್ ಅಂದರೆ ಸಾನ್ಯಾ ಅವರಿಗೆ ಬಹಳನೇ ಕ್ರೇಜ್, ಇದನ್ನು ವೃತ್ತಿಪರ ಹವ್ಯಾಸವಾಗಿ ಬದಲಾಯಿಸಿಕೊಂಡಿದ್ದಾರೆ.

By Kumar K