ಪಡ್ಡೆ ಹುಡುಗರ ಮೈ ಜುಮ್ ಎನ್ನುವಂತೆ ಸೊಂಟ ಬಳುಕಿಸಿದ ಸಂಯುಕ್ತ ಹೆಗಡೆ

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಸಂಯುಕ್ತ ಹೆಗಡೆ (Samyuktha Hegde) ಅಂದರೆ, ಈಗಲೂ ಹುಡುಗರು ತುಟಿ ಕಚ್ಚುತ್ತಾರೆ. ಸಂಯುಕ್ತ ಹೆಗಡೆ ಕಿರಿಕ್ ಪಾರ್ಟಿ ಚಿತ್ರದಲ್ಲಿ ಅದ್ಭುತವಾಗಿಯೇ ನಟಿಸಿದ್ದರು. ಸಿನಿಮಾದಲ್ಲಿ ಸೆಕೆಂಡ್ ಹೀರೋಯಿನ್ ಆಗಿದ್ದರೂ ಕೂಡ ರಶ್ಮಿಕಾ ಮಂದಣ್ಣ (Rashmika Mandanna) ಪಡೆದಷ್ಟೇ ಹೆಸರು ಪಡೆದರು. ನಿಜವಾಗಿಯೂ ಹೇಳಬೇಕೆಂದರೆ, ರಶ್ಮಿಕಾ ಅವರಿಗಿಂತಲೂ ಸಂಯುಕ್ತ ಹೆಗಡೆ ಅವರಿಗೆ ಸಿನಿಮಾಗಳ ಆಫರ್ ಗಳು ಬಂದದ್ದೇ ಹೆಚ್ಚು. ನಂತರದ ದಿನಗಳಲ್ಲಿ ರಶ್ಮಿಕಾ ಮಿಂಚಿದ್ದು ಎಂದರೆ ತಪ್ಪಾಗುವುದಿಲ್ಲ. ಬಟ್ ಸಂಯುಕ್ತ ಹೆಗಡೆ ಅವರು ಈಗ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದಾರೆ.

ಅದಕ್ಕೆ ಬಲವಾದ ಕಾರಣವೂ ಇದೆ. ಸಂಯುಕ್ತ ಹೆಗಡೆ ಅವರಿಗೆ ತಮ್ಮ ಮೇಲಿನ ಕಾನ್ಫಿಡೆನ್ಸ್ ಹೆಚ್ಚಾದಂತೆ, ಇಂಡಸ್ಟ್ರಿಯಲ್ಲಿ ಸ್ವಲ್ಪ ದುರಹಂಕಾರವಾಗಿಯೂ ನಡೆದುಕೊಳ್ಳಲು ಮುಂದಾದರು. ಸರಿಯಾದ ಸಮಯಕ್ಕೆ ಶೂಟಿಂಗ್ ಗೆ ಬರುತ್ತಿರಲಿಲ್ಲ. ಕೊಟ್ಟ ಡೇಟ್ ಗಳಲ್ಲಿ ಶೂಟಿಂಗ್ ಗೆ ಇದ್ದಕ್ಕಿದ್ದ ಹಾಗೆ ಬರುವುದಿಲ್ಲ ಎನ್ನುತ್ತಿದ್ದರಂತೆ. ಇದೆಲ್ಲದರಿಂದ ಸಂಯುಕ್ತ ಅವರ ಕೈಲಿದ್ದ ಕೆಲ ಸಿನಿಮಾಗಳು ಕೂಡ ಕೈ ತಪ್ಪಿ ಹೋದವು. ಹಾಗಿದ್ದರೂ ಅವರ ಅಭಿಮಾನಿಗಳ ಸಂಖ್ಯೆ ಮಾತ್ರ ಕೊಂಚವೂ ತಗ್ಗಲಿಲ್ಲ.

ಪಡ್ಡೆ ಹುಡುಗರಂತೂ ಸಂಯುಕ್ತ ಹೆಗಡೆ ಅವರನ್ನು ಸ್ಕ್ರೀನ್ ಮೇಲೆ ನೋಡಲು ಸದಾ ಕಾಯುತ್ತಲೇ ಇರುತ್ತಾರೆ. ಸದ್ಯ ಸಂಯುಕ್ತ ಅವರು ಕ್ರೀಂ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿನ ಕೆಲ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಡ್ಯೂಪ್ ಬಳಸದೇ, ತಅವೇ ಮಾಡಿದ್ದಾರೆ. ಇನ್ನು ಇದೀಗ ಮ್ಯೂಸಿಕ್ ಒಂದಕ್ಕೆ ಸ್ಟುಡಿಯೋದಲ್ಲಿ ಡ್ಯಾನ್ಸ್ ಮಾಡಿದ್ದು, ಡ್ಯಾನ್ಸ್ ಮಾಸ್ಟರ್ ಜೊತೆಗೆ ಹೆಜ್ಜೆ ಹಾಕಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಡ್ಡೆ ಹುಡುಗರ ಕಣ್ಣು ಕುಕ್ಕುವಂತೆ ಡ್ಯಾನ್ಸ್ ಮಾಡಿದ್ದಾರೆ.

By Kumar K