ಮೈಸೂರು ಲೋಕೇಶ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಾಸ್ಯದ ಮೂಲಕವೇ ದೊಡ್ಡ ಹೆಸರು ಮಾಡಿದ್ದರು. ಆಗ ಮೂಡಿ ಬರುತ್ತಿದ್ದ ಬಹುತೇಕ ಸಿನಿಮಾಗಳಲ್ಲಿ ವಿಲನ್ ಹಾಗೂ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮೈಸೂರು ಲೋಕೇಶ್ ಅವರ ಪತ್ನಿ ಶಿಕ್ಷಕಿಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದರು. ಇವರ ಪುತ್ರ ಆದಿ ಲೋಕೇಶ್ ಹಾಗೂ ಪುತ್ರಿ ಪವಿತ್ರಾ ಲೋಕೇಶ್ ಕೂಡ ಈಗ ಚಿತ್ರರಂಗದಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಪವಿತ್ರಾ ಲೋಕೇಶ್‌ ಅವರು ತೆಲುಗು ಇಂಡಸ್ಟ್ರಿಯಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ

ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಖ್ಯಾತ ಹಾಸ್ಯನಟ ಹಾಗೂ ನಿರ್ದೇಶಕರಾಗಿದ್ದ ಮೈಸೂರು ಲೋಕೇಶ್‌ ಅವರು ತಮ್ಮ ಹಾಸ್ಯಗಳಿಂದಲೇ ಚಿರಪರಿಚಿತರಾಗಿದ್ದರು. ಸುಮಾರು ಮುನ್ನೂರಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಮೈಸೂರು ಲೋಕೇಶ್‌ ಅವರು ತಮ್ಮ ಅಭಿನಯದ ಮೂಲಕವೇ ಛಾಪನ್ನು ಮೂಡಿಸಿದ್ದರು. ಸಮಾಜವನ್ನು ಎದುರಿಸಲಾಗದೇ ಮೈಸೂರು ಲೋಕೇಶ್‌ ಅವರು ಲಾಡ್ಜ್‌ ಒಂದರಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಇನ್ನು ಮೈಸೂರು ಲೋಕೇಶ್‌ ಅವರು, ಡಿಂಗ್ರಿ ಅವರ ಪತ್ನಿಯಾಗಿದ್ದ ಕಂಠದಾನ ಕಲಾವಿದೆ ಸರ್ವಮಂಗಳ ಅವರ ಜೊತೆಗೆ ಸಂಬಂಧ ಹೊಂದಿದ್ದರಂತೆ. ಇಬ್ಬರು ಒಟ್ಟಿಗೆ ಓಡಾಡುತ್ತಿದ್ದರು ಎಂದು ಸುದ್ದಿಯಾಗಿತ್ತು. ಸರ್ವಮಂಗಳ ಅವರು ಆಗಿನ ಕಾಲದಲ್ಲಿ ಮಾಲಾಶ್ರೀ ಸೇರಿದಂತೆ ಬಹುತೇಕ ಸ್ಟಾರ್ ನಟಿಯರಿಗೆ ಧ್ವನಿಯನ್ನು ನೀಡುತ್ತಿದ್ದರು. ಇವರಿಬ್ಬರ ವಿಚಾರ ಹೊರಗಡೆ ಸುದ್ದಿಯಾಗುತ್ತಿದ್ದಂತೆ ಸಮಾಜವನ್ನು ಎದುರಿಸಲಾಗದೇ, ಇಬ್ಬರೂ ಲಾಡ್ಜ್‌ ಗೆ ಹೋಗಿ ವಿಷವನ್ನು ಸೇವಿಸಿದ್ದರು. ಮೈಸೂರು ಲೋಕೇಶ್‌ ಅವರು 1994 ಆಕ್ಟೋಬರ್ 14 ರಂದು ನಿಧನರಾದರು.

ಆದರೆ, ಸರ್ವಮಂಗಳ ಅವರು ಬದುಕುಳಿದಿದ್ದರು. ನಂತರ ಕೆಲ ಸಮಯ ಜೈಲಿನಲ್ಲಿ ಸಹ ಇದ್ದು ಬಂದಿದ್ದರು. ಡಿಂಗ್ರಿ ಅವರು ಸರ್ವಮಂಗಳ ಅವರನ್ನು ಕ್ಷಮಿಸಿ ಮತ್ತೆ ಒಟ್ಟಿಗೆ ಜೀವನ ಮಾಡುತ್ತಿದ್ದರು. ಆದರೆ ಸಮಾಜ ಸರ್ವಮಂಗಳ ಅವರನ್ನು ಚುಚ್ಚುವಂತೆ ಮಾತನಾಡುತ್ತಿತ್ತು. ಹೀಗಾಗಿ ನೋವು ಸಹಿಸಲಾಗದೇ ಡಿಪ್ರೆಷನ್‌ ಗೆ ಹೋಗಿದ್ದರು ಎಂದು ಹೇಳಳಾಗಿದೆ. ಇನ್ನು ಮೈಸೂರು ಲೋಕೇಶ್‌ ಅವರು ನಿಧನರಾದಾಗ ಪವಿತ್ರಾ ಲೋಕೇಶ್‌ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆಯೂರಲು ತುಂಬಾ ಕಷ್ಟಪಟ್ಟಿದ್ದಾರೆ.

By Kumar K