ಯಂಗ್ ಎನರ್ಜೆಟಿಕ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಆಗಲೇ ಒಂದು ವರ್ಷ ಕಳೆದಿದೆ. ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಟ ಪುನೀತ್ ಅವರು ನಮ್ಮನ್ನೆಲ್ಲಾ ಕ್ಷಣಾರ್ಧದಲ್ಲೇ ಅಗಲಿದರು. ಕೇವಲ 46 ವರ್ಷ ವಯಸ್ಸಿನ ಪುನೀತ್ ರಾಜ್ ಕುಮಾರ್ ಅವರು ಇಹಲೋಕ ತ್ಯಜಿಸಿದ್ದು, ಇಂದಿಗೂ ಯಾರಿಂದಲೂ ಅರಗಿಸಿಕೊಳ್ಳಲಾಗುತ್ತಿಲ್ಲ. ಸದಾ ಲವಲವಿಕೆಯಿಂದಿರುತ್ತಿದ್ದ ಪುನೀತ್ ಅವರಿಗೆ ಇದ್ದಕ್ಕಿದ್ದ ಹಾಗೆ ಹೀಗಾಗಿದ್ದು, ಇಡೀ ಕರುನಾಡಿಗೆ ಮರೆಯಲಾರದ ನೋವನ್ನುಂಟು ಮಾಡಿದೆ.

2021ರ ಅಕ್ಟೋಬರ್ 28 ರಂದು ಗುರುಕಿರಣ್ ಅವರ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದರು. ಅಂದು ರಾತ್ರಿಯೇ ಪುನೀತ್ ಅವರಿಗೆ ಕೊಂಚ ಎದೆ ನೋವು ಕಾಣಿಸಿಕೊಂಡಿತ್ತು. ಮಾರನೇಯ ದಿನ ಗಾಜನೂರಿಗೆ ಹೋಗಬೇಕು ಎಂದು ಕೊಂಡಿದ್ದರು . ಆದರೆ ನಂತರ ಅರಾಮಾಗಿದ್ದರಿಂದ 29ರ ಬೆಳಗ್ಗೆ ಜಿಮ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರು ವ್ಯಾಯಾಮ ಮಾಡುತ್ತಿದ್ದರು. ವರ್ಕೌಟ್ ಮಾಡುವಾಗ ಸುಮಾರು ಬೆಳಗ್ಗೆ 11:30 ರ ವೇಳೆಗೆ ಪುನೀತ್ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಸುಸ್ತು, ಎದೆ ನೋವು ಕಾಣಿಸಿಕೊಂಡ ತಕ್ಷಣವೇ ಅವರನ್ನು ಸ್ಥಳೀಯ ರಮಣಶ್ರೀ ಆಸ್ಪತ್ರೆಗೆ ದಾಖಲಿಸಲಾಯ್ತು.

ಆದರೆ, ಅವರ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಅವರನ್ನು ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಸುಮಾರು ಮಧ್ಯಾಹ್ನ 1:00ಗಂಟೆ ಸುಮಾರಿಗೆ ವಿಕ್ರಮ್ ಆಸ್ಪತ್ರೆಯ ವೈದ್ಯರು ಪುನೀತ್ ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಹೊರ ಹಾಕಿದರು. ಸುದ್ದಿ ಕೇಳಿ ಅಭಿಮಾನಿಗಳು ತಲೆ ತಲೆ ಚೆಚ್ಚಿ ಕೊಳ್ಳುತ್ತಿದ್ದಾರೆ. ಅಪ್ಪು.. ಅಪ್ಪು ಎಂದು ಕಿರುಚಾಡಿದರು. ಪುನೀತ್ ಸಾವಿನ ಸುದ್ದಿ ಕೇಳಿ ಇಡೀ ಕರುನಾಡೇ ಶೋಕ ಸಾಗರದಲ್ಲಿ ಮುಳುಗಿತ್ತು. ಒಂದು ವರ್ಷ ಕಳೆದರು, ಅಪ್ಪು ನಮ್ಮನ್ನಗಲಿದೆ ಸೂತಕ ಮಾತ್ರ ಹಾಗೆಯೇ ಹಸಿ ಹಸಿಯಾಗಿದೆ.ಈ ಮಾಹಿತಿ ಇಷ್ಟವಾದಲ್ಲಿ ಲೈಕ್ ಹಾಗು ಶೇರ್ ಮಾಡಿ .

ಹಾಗು ನಿಮ್ಮ ಅನಿಸಿಕೆಗಳನ್ನು ತಿಳಿಸಿ ( video credit : third eye )