ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಲೈಫ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿಬಿಟ್ಟಿದ್ದಾರೆ. ರಶ್ಮಿಕಾ ಅವರಿಗೆ ತಮ್ಮ ಹುಟ್ಟೂರು, ನಾಡು, ಭಾಷೆ ಯಾವುದೂ ನೆನಪೇ ಆಗುವುದಿಲ್ಲ. ನಿನ್ನೆ ಮೊನ್ನೆ ಹೆಸರು ಕೊಟ್ಟ ನಾಡಲ್ಲೇ ಸೆಟಲ್ ಆಗಿ ಬಿಟ್ಟಿದ್ದಾರೆ. ಸ್ಯಾಂಡಲ್ ವುಡ್ ಮೂಲಕ ಬಣ್ಣ ಹಚ್ಚಿಕೊಂಡರೂ, ಈಗ ಅವರಿಗೆ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಬಿಟ್ಟು ಬೇರೇನೂ ಕಾಣಿಸುತ್ತಿಲ್ಲ. ಕನ್ನಡದ ಬಗ್ಗೆ ಏನಾದರೂ ಕೇಳಿದರೂ ಕೂಡ ನನಗೆ ಗೊತ್ತಿಲ್ಲ. ನನಗೆ ಕನ್ನಡ ಬರಲ್ಲ ಎಂದೇ ಹೇಳುತ್ತಾರೆ. ರಶ್ಮಿಕಾ ಮಂದಣ್ಣ ಅವರು ತಾವು ನಡೆದು ಬಂದ ಹಾದಿಯನ್ನೇ ಮರೆತು ಬಿಟ್ಟಿದ್ದಾರೆ. ಹೀಗಾಗಿ ರಶ್ಮಿಕಾ ಕಂಡರೆ, ಕನ್ನಡಿಗರಿಗೆ ತುಂಬಾನೇ ಬೇಸರವಿದೆ.

ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸಿ, ಬಳಿಕವೇ ಇತರೆ ಭಾಷೆಯ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್ ಕ್ರಷ್ ಆಗಿದ್ದಾರೆ. ಗೀತಾ ಗೋವಿಂದಂ, ಚಲೋ, ಡಿಯರ್ ಕಾಮ್ರೇಡ್, ಪುಷ್ಪ, ಭೀಷ್ಮಾ, ಸರಿಲೇರು ನೀಕೆವ್ವರು, ಮಿಷನ್ ಮಜ್ನು, ಗುಡ್ ಬೈ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅಬ್ಬಾಬ್ಬಾ ಎಂದರೂ 10-15 ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ ಅವರೇ ತಮ್ಮ ಮೊದಲ ಚಿತ್ರ ಕಿರಿಕ್ ಪಾರ್ಟಿ ಜೊತೆ ಅಭಿನಯಿಸಿದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಅವರನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದ್ದಾರೆ.

ಕಾಂತಾರ ಚಿತ್ರ ರಿಲೀಸಾಗಿ ಕರ್ನಾಟಕ ಮಾತ್ರವಲ್ಲದೇ, ಇಡೀ ಭಾರತದಾದ್ಯಂತ ಸದ್ದು ಮಾಡುತ್ತಿದೆ. ಹೀಗಿದ್ದರೂ ರಶ್ಮಿಕಾ ಮಂದಣ್ಣ ಅವರು ನಡೆದು ಬಂದ ಹಾದಿಯನ್ನು ನೆನಪು ಕೂಡ ಮಾಡಿಕೊಂಡಿಲ್ಲ. ಸಿನಿಮಾದ ಬಗ್ಗೆ ಇದುವರೆಗೂ ಎಲ್ಲೂ ತುಟಿ ಬಿಚ್ಚಿಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಸಂಪೂರ್ಣವಾಗಿ ರಶ್ಮಿಕಾ ಮಂದಣ್ಣ ಮರೆತು ಬಿಟ್ಟಿದ್ದಾರೆ. ರಿಷಬ್ ಶೆಟ್ಟಿ ಅವರ ಚಿತ್ರ ಈ ಮಟ್ಟಕ್ಕೆ ಹೆಸರು ಮಾಡಿದೆ. ಕೃತಜ್ಞತೆಗಾದರೂ ಕಾಂತಾರ ಚಿತ್ರದ ಬಗ್ಗೆ ಮಾತನಾಡಬಹುದಿತ್ತು ಎಂದು ಕನ್ನಡಾಭಿಮಾನಿಗಳು ಬೇಸರಗೊಂಡಿದ್ದಾರೆ.