ಸೌತ್ ಬ್ಯೂಟಿ ಪ್ರಿಯಾಮಣಿ ಅವರು ಕೂಡಾ ಲವ್ ಮ್ಯಾರೇಜ್ ಆಗಿದ್ದಾರೆ. ಮುಸ್ತಾಫಾ ರಾಜ್ ಎಂಬುವರನ್ನು ಮದುವೆಯಾಗಿ ಹಲವು ವರ್ಷಗಳೇ ಕಳೆದಿದೆ. ಇನ್ನು ಪ್ರಿಯಾಮಣೀ ಅವರು ಸೌತ್ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದವರು, ಸುದೀಪ್, ದರ್ಶನ್, ಪುನೀತ್ ರಂತಹ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇನ್ನು ಬಾಲಿವುಡ್ ನ ಕೆಲ ವೆಬ್ ಸಿರೀಸ್ ಗಳಲ್ಲೂ ನಟಿಸಿ ಸುದ್ದಿಯಾಗಿದ್ದರು. ಆದರೆ ಕಳೆದ ಒಂದು ವರ್ಷದಿಂದ ಕಣ್ಮರೆಯಾಗಿದ್ದ ನಟಿ, ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ಸದ್ಯ ಪ್ರಿಯಾಮಣಿ ಅವರ ಕೈಲ್ಲಿ ಈಗ ಸಾಕಷ್ಟು ಪ್ರಾಜೆಕ್ಟ್ ಗಳು ಇವೆ. ಇನ್ನು ಕಿರುತೆರೆಯಲ್ಲೂ ಮಿಂಚುವ ಪ್ರಿಯಾಮಣಿ ಅವರು ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಕಿರುಚಿತ್ರಗಳಲ್ಲೂ ನಟಿಸಿದ್ದಾರೆ.ಇತ್ತೀಚೆಗಷ್ಟೇ ಪ್ರಿಯಾಮಣಿ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ದೊರಕಿತು. ಸುಮಾರು ಇಪ್ಪತ್ತು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿರುವ ಪ್ರಿಯಾಮಣಿ ಅವರು ಇನ್ನು ತಮ್ಮ ಚಾರ್ಮ್ ಅನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿ ಏನೆಂದರೆ, ಅದು ಪ್ರಿಯಾಮಣಿ ಅವರು ಡಿವೋರ್ಸ್ ಮಾಡುತ್ತಿದ್ದಾರೆ ಎಂಬುದು.

ಹೌದು.. ಪ್ರಿಯಾಮಣಿ ಅವರು ತಮಗೆ ಮಕ್ಕಳು ಬೇಡ ಎಂದು ಹೇಳಿದ್ದಾರೆ. ಹೀಗಾಗಿ ಪತಿ-ಪತ್ನಿ ನಡುವೆ ಜಗಳವಾಗಿದ್ದು, ಇಬ್ಬರೂ ಬೇರೆಯಾಗುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಈ ಹಿಂದೆಯೇ ಪ್ರಿಯಾಮಣಿ ಅವರು ಸ್ಪಷ್ಟನೆಯನ್ನು ನೀಡಿದ್ದರು. ನಾವಿಬ್ಬರು ಸುಖವಾಗಿ, ಚೆನ್ನಾಗಿದ್ದೇವೆ. ನಾವು ಬೇರೆಯಾಗುತ್ತಿಲ್ಲ. ಅದೆಲ್ಲಾ ಸುಳ್ಳು ಸುದ್ದಿ ಎಂದಿದ್ದರು. ಆದರೆ, ಇದೀಗ ಮತ್ತೆ ಮಕ್ಕಳು ಬೇಡ ಎಂಬ ಕಾರಣಕ್ಕೆ ಪ್ರೀತಿಸಿ ಮದುವೆಯಾದ ಈ ಜೋಡಿ ಈಗ ದೂರಾಗುತ್ತಿದೆ ಎಂದು ಭಾರೀ ಚರ್ಚೆಯಾಗುತ್ತಿದೆ.