ಇಂತಹ ಕಿಲಾಡಿ ಲೇಡಿ! ಹುಡುಕಿದರೂ ಸಿಗುವುದಿಲ್ಲ 13 ಹುಡುಗರೊಂದಿಗೆ ಪ್ರೀತಿ, 4 ಜನರೊಂದಿಗೆ ಮದುವೆ! 17 ಮಂದಿಯನ್ನು ವಂಚಿಸಿದ ಯುವತಿ
ಈಗಿನ ಕಾಲದಲ್ಲಿ ಹೆಣ್ಣು ಸಿಗುವುದು ತುಂಬಾ ಕಷ್ಟ . ಅದಕೋಸ್ಕರ ಯುವಕರು ಹುಡುಗಿಯರನ್ನು ಹುಡುಕಲು ಸಾಮಾಜಿಕ ಜಾಲತಾಣ , ಮ್ಯಾಟ್ರಿಮೋನಿಯಲ್ಲಿ ಹುಡುಕಲು ಸುರು ಮಾಡುತ್ತಾರೆ . ಇದನ್ನೇ ಬಂಡವಾಳ ಮಾಡಿ ಕೊಂಡ ಅನೇಕ ಯುವತಿಯರು ಇವರಿಗೆ ಬಲೆ ಬಿಸಿ ಅವರನ್ನು ಬುಟ್ಟಿಗೆ ಹಾಕಿ ಕೊಳ್ಳುತ್ತಾರೆ . ಇಂತಹ ಒಂದು ಘಟನೆ ಏನಾಗಿದೆ ನೋಡಣ ಬನ್ನಿ .
ಇಲ್ಲೊಬ್ಬ ಮಹಿಳೆ ಅದೇ ರೀತಿ 17 ಮಂದಿಯನ್ನ ವಂಚಿಸಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ 13 ಮಂದಿಗೆ ಪ್ರೀತಿಯ ಹೆಸರಲ್ಲಿ ಮೋಸ ಮಾಡಿದರೆ, ನಾಲ್ವರನ್ನ ಮದುವೆಯಾಗಿ ಮೋಸ ಮಾಡಿದ್ದಾಳೆ. ತನ್ನ ಸೌಂದರ್ಯವನ್ನು ಅಸ್ತ್ರವಾಗಿಸಿಕೊಂಡು ಹುಡುಗರನ್ನು ಬಲೆಗೆ ಬೀಳಿಸಿ ಲಕ್ಷಾಂತರ ಹಣಗಳಿಸಿಕೊಂಡಿದ್ದಾಳೆ. ಆನ್‌ಲೈನ್ ಅಪ್ಲಿಕೇಶನ್‌ಗಳನ್ನು ವೇದಿಕೆಯಾಗಿ ಬಳಸಿಕೊಂಡು ವಂಚನೆ ಮಾಡಿ ಹೈ ಫೈ ಜೀವನ ನಡೆಸುತ್ತಿದ್ದಳು ಎಂದು ತಿಳಿದುಬಂದಿದೆ.
ಆರೋಪಿ ಮಹಿಳೆ ಮದುವೆಯಾಗದ ಹುಡುಗರು ಹಾಗೂ ಹಣವಂತರನ್ನೇ ಟಾರ್ಗೆಟ್ ಮಾಡಿಕೊಂಡು ಖಾಸಗಿ ಮದುವೆ ಬ್ಯುರೋಗಳಲ್ಲಿ ಫೋಟೋ ಹಾಕಿ ಪರಿಚಯ ಮಾಡಿಕೊಳ್ಳುತ್ತಿದ್ದಳು. ಆ ಪರಿಚಯವನ್ನ ಮದುವೆಗೆ ಕರೆದುಕೊಂಡು ಹೋಗಿ, ಮದುವೆಯಾಗಿ ನಾಲ್ಕೈದು ದಿನಗಳ ನಂತರ ತವರು ಊರಿನಲ್ಲಿ ಕೆಲಸವಿದೆ ಎಂದು ನೆಪ ಮಾಡಿಕೊಂಡು ಹೋಗುತ್ತಿದ್ದಳು. ಈ ವೇಳೆ ಮದುವೆಗೆ ತೊಡಿಸಲಾಗಿದ್ದ ಎಲ್ಲಾ ಬಂಗಾರವನ್ನು ತೆಗೆದುಕೊಂಡು ಹೋಗುತ್ತಿದ್ದಳು. ಇದನ್ನೇ ಆಕೆ ವೃತ್ತಿಯನ್ನಾಗಿಸಿಕೊಂಡಿದ್ದಳು ಎಂದು ತಿಳಿದುಬಂದಿದೆ.
ಮದುವೆಯ ನಂತರ ಒಂದು ವಾರ ಚೆನ್ನಾಗಿದ್ದ ಕಿಲಾಡಿ ಅನುಷಾ, ತನ್ನ ಊರಿನಲ್ಲಿ ಕೆಲಸ ಇದೆ ಎಂದು ಹೇಳಿ 4 ತೊಲ ಚಿನ್ನ ಮತ್ತು 70 ಸಾವಿರ ನಗದನ್ನು ತೆಗೆದುಕೊಂಡು ಹೋಗಿದ್ದಾಳೆ. ಆದರೆ ಆಕೆ ಮತ್ತೆ ಬರಲಿಲ್ಲ. ಕರೆ ಮಾಡಿದರೂ ಸಿಗಲಿಲ್ಲ. ನಂತರ ವಿಚಾರಿಸಿದಾಗ ಪತಿ ರೇವಂತ್ ಕಿಲಾಡಿ ಮಹಿಳೆ ಈಗಾಗಲೇ ಮೂರು ಜನರನ್ನು ಮದುವೆಯಾಗಿದ್ದು, ಇತರ 13 ಜನರಿಗೆ ಪ್ರೀತಿಯ ಹೆಸರಲ್ಲಿ ವಂಚಿಸಿದ್ದಾರೆ ಎಂದು ತಿಳಿದುಕೊಂಡಿದ್ದಾನೆ.
ಇಷ್ಟಕ್ಕೆ ಇದು ಮುಗಿಯಲಿಲ್ಲ. ಆಕೆಯ ಮೋಸ ಬಯಲಾಗಿದೆ ಎನ್ನುವುದನ್ನು ತಿಳಿದುಕೊಂಡ ಆಕೆ, ರೇವಂತ್ನನ್ನು ಹೈದರಾಬಾದ್ಗೆ ಕರೆಸಿಕೊಂಡು, ರೈಡಿಗಳಿಂದ ಹೊಡಿಸಿ, ಅದನ್ನು ವೀಡಿಯೋ ತೆಗೆದು 20 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾಳೆ. ಇಲ್ಲದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಲೀಕ್ ಮಾಡುವುದಾಗಿ ರೇವಂತ್ನನ್ನು ಹೆದರಿಸಿದ್ದಾಳೆ. ಹಣ ನೀಡದ ಕಾರಣ ಪೋಷಕರಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕುದ್ದಾಳೆ. ನಂತರ ರೇವಂತ್ ತಮಗೆ ರಕ್ಷಣೆ ನೀಡಬೇಕೆಂದು ರಾಮಗುಂಡಂ ಪೊಲೀಸರ ಮೊರೆ ಹೋಗಿದ್ದಾರೆ.
ಇನ್ನಾದರೂ ಯುವಕರು ಇಂತಹ ಆಮಿಷಗಳಿಗೆ ಬಲಿಯಾಗದೆ ಹುಷಾರಾಗಿರುವುದು ಒಳ್ಳೆಯದು . ನೀವೇನಂತೀರಾ