ಹೆಂಡ್ತಿನಾ ಓದಿಸಿ ನ್ಯಾಯಾಧೀಶೆ ಮಾಡಿದ ಗಂಡ, ಕೊನೆಗೆ ಗಂಡನಿಗೆ ಕೈ ಕೊಟ್ಟ ಹೆಂಡ್ತಿ!!
ಒಂದಷ್ಟು ಜನರ ಜೀವನ ಹೇಗಪ್ಪಾ ಅಂದ್ರೆ ಸಾವಿರಾರು ಆಸೆ ಕನಸುಗಳನ್ನ ಇಟ್ಟುಕೊಂಡು ಜೀವನದಲ್ಲಿ ಆಗಿರಬೇಕು ಈಗಿರಬೇಕು ಅಂತೆಲ್ಲಾ ಆಸೆಪಟ್ಟು ಅದಕ್ಕಾಗಿ ತಾವು ಮಾಡೋ ತ್ಯಾಗ, ಪಡೋ ಕಷ್ಟ ಅಷ್ಟಿಸ್ಟಲ್ಲ ಕಾರಣ ಮುಂದೊಂದು ದಿನ ತಾವು ಚೆನ್ನಾಗಿರಬಹುದಲ್ಲ ಅನ್ನೋ ಕುರುಡು ನಂಬಿಕೆ ಮೇಲೆ ಇರೋ ಜೀವನನ ಬಹಳ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಸಿಗೋ ಸಮಯದಲ್ಲಿ ಆಸೆ, ಕನಸುಗಳನ್ನ ಬದಿಗೊತ್ತಿ ಮುಂದಿನ ಜೀವನಕ್ಕಾಗಿ ಬದುಕು ನಡೆಸ್ತಾರೆ. ಆದರೆ ಹಣೆಬರಹಕ್ಕೆ ಹೊಣೆ ಯಾರು ಎಂಬಂತೆ ಅಂದುಕೊಂಡಿದ್ದಲ್ಲ ಉಲ್ಟಾ ಆದ್ರೆ, ಅಷ್ಟು ದಿನದ ತ್ಯಾಗಕ್ಕೆ ಬೆಲೆಯೇ ಇಲ್ವಾ ಅನಿಸಿಬಿಡ್ತದೆ.
ಹೌದು ಈಗ ಇಂತದ್ದೇ ಒಂದು ಹುಚ್ಚು ಕನಸ್ಸು ಈಗ ಪತಿಯನ್ನ ಬೀದಿ ಇಲ್ಲ ಜೈಲಲ್ಲಿ ಕಳೆಯುವ ಆಗೇ ಮಾಡಿದೆ. ಇಲ್ಲೊಬ್ಬ ಪತಿ ಪತ್ನಿಯನ್ನ ಚೆನ್ನಾಗಿ ಓದಿಸಿ ಅವ್ಳಿಗೆ ಸರ್ಕಾರಿ ನೌಕರಿ ಕೊಡಿಸಲು ಆತ ಮಾಡಿದ ತ್ಯಾಗ ಅವ್ನು ಪಟ್ಟ ಕಷ್ಟ ಶ್ರಮ ಅಷ್ಟಿಷ್ಟಲ್ಲ ಆದರೆ ಇವತ್ತು ಆ ಕಷ್ಟಕ್ಕೆ ಬೆಲೆ ಇಲ್ಲ. ತನ್ನ ಮಡದಿಯಿಂದಲೇ ವರದಕ್ಷಿಣೆ ಕಿರುಕುಳದ ಆರೋಪದ ಮೇಲೆ ಜೈಲಿಗೆ ಹೋಗಿ ಇದೀಗ ಬೇಲ್ ಮೇಲೆ ಜೈಲಿನಿಂದ ಹೊರಗೆ ಬಂದಿದ್ದು, ಅಲ್ಲಿಯೂ ನೆಮ್ಮದಿಯಾಗಿರಲು ಬಿಡದ ಪಾಪಿ ಪತ್ನಿ, ಪ್ರಿಯಕರನ ಜೊತೆ ಸೇರಿ ಪತಿಗೆ ಡೈವೋರ್ಸ್ ನೀಡುವಂತೆ ಒತ್ತಾಯಿಸುತ್ತಿದ್ದೂ ಡಿವೋರ್ಸ್ ನೀಡಿಲ್ಲ ಅಂದ್ರೆ ಆಗೋದೇ ಬೇರೆ ಅಂತ ಧಮ್ಕಿ ಆಗ್ತಿದ್ದಾಳೆ.
ಉತ್ತರ ಪ್ರದೇಶದಲ್ಲಿ ಅಲೋಕ್ ಮೌರ್ಯ ಅನ್ನೋ ವ್ಯಕ್ತಿ ತಮ್ಮ ಪತ್ನಿ ಎಸ್ಡಿಎಂ ಜ್ಯೋತಿ ಮೌರ್ಯ ವಿರುದ್ಧ ಇದೀಗ ಇಂತದೊಂದು ಆರೋಪ ಮಾಡಿದ್ದಾರೆ. ಹೌದು ಮದುವೆ ಬಳಿಕ ಇಬ್ಬರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದೆವು. ಆದರೆ, ನಾನು ಬಿಡುವಿಲ್ಲದೆ, ತುಂಬಾ ಶ್ರಮವಹಿಸಿ ದುಡಿದು ಪತ್ನಿಗೆ ಶಿಕ್ಷಣ ಕೊಡಿಸಿದೆ. ಪ್ರಯಾಗ್ರಾಜ್ನಲ್ಲಿರುವ ಒಳ್ಳೆಯ ಕೋಚಿಂಗ್ ಕೇಂದ್ರಕ್ಕೆ ಸೇರಿಸಿ ಓದಿಸಿದೆ.
ಇನ್ನು ತನ್ನ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ 2016ರಲ್ಲಿ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಅಂದ್ರೆ ಎಸ್ಡಿಎಂ ಆಗಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಳು. ನಾನು ಹಗಲು-ರಾತ್ರಿಯೆನ್ನದೆ ಕಷ್ಟಪಟ್ಟು ದುಡಿದು ಪತ್ನಿಯನ್ನು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಮಾಡಿದೆ. ಆದರೆ, ಇಂದು ನನ್ನ ಪತ್ನಿ ಮತ್ತೊಬ್ಬ ಅಧಿಕಾರಿಯ ಜತೆ ಸಂಬಂಧ ಇಟ್ಟುಕೊಳ್ಳುವ ಮೂಲಕ ನನಗೆ ವಂಚನೆ ಮಾಡಿದ್ದಾಳೆ ಅಂತ ಪತಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ನನ್ನನ್ನ ಜೈಲಿಗೂ ಕಳುಹಿಸಿ ಇದೀಗ ಮತ್ತೆ ಡೈವೋರ್ಸ್ ನೀಡುವಂತೆ ಕಿರುಕುಳ ಕೊಡ್ತಿದ್ದಾಳೆ ಅಂತಿದ್ದಾರೆ.
ಪತಿಯ ವಿರುದ್ಧವೇ ಡೌರಿ ಕೇಸ್,ಡಿವೋರ್ಸ್ ಕೊಡದಿದ್ರೆ ಆಗೋದೇ ಬೇರೆ!?
ಹೌದು ಅಷ್ಟೆಲ್ಲ ಕಷ್ಟ ಪಟ್ಟು ಪತ್ನಿಯನ್ನ ಓದಿಸಿದ ಪತಿಯ ಮೇಲೆ ಸಣ್ಣ ಕೃತಜ್ಞತೆ ಕೂಡ ಇಲ್ಲದ ಪತ್ನಿ ಪ್ರಿಯಕರನಾ ಜೊತೆ ಸೇರಿ ಪತಿಯ ವಿರುದ್ಧವೇ ತಿರುಗಿ ಬಿದ್ದು, ಪತಿಗೆ ವಂಚನೆ ಮಾಡಿದ್ದಾಳೆ. ಹೌದು ಬೇರೆ ಅಧಿಕಾರಿಯ ಜತೆ ಸಂಬಂಧ ಇಟ್ಟುಕೊಂಡಿದ್ದ ಪತ್ನಿಯ ಸರಸ ಸಲ್ಲಾಪ ಪತಿಗೆ ಗೊತ್ತಾಗಿದ್ರು ಪತಿ ಸುಮ್ಮನಿದ್ರು. ಅಲ್ಲದೇ ಸರಸ ಸಲ್ಲಪಾದ್ಲಲಿದ್ದಾಗಲೇ ಇಬ್ಬರು ಸಿಕ್ಕಿಬಿದಿದ್ರು ಆ ಬಳಿಕವೂ ಅಲೋಕ್ ತನ್ನ ವೈವಾಹಿಕ ಸಂಬಂಧವನ್ನು ಉಳಿಸಿಕೊಳ್ಳಲು ಯತ್ನಿಸಿದ್ದಾನೆ.
ಆದರೆ, ಜ್ಯೋತಿ, ಗಂಡನ ವಿರುದ್ಧವೇ ಸುಳ್ಳು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಿದ್ದು, ಇದೀಗ ಅಲೋಕ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇದೀಗ ತನ್ನ ಕೆಲಸವನ್ನು ಕಳೆದುಕೊಂಡು ಸಂಕಷ್ಟಕ್ಕಿಡಾಗಿದ್ದು, ಮಾಧ್ಯಮಗಳ ಮುಂದೆ ಅಲೋಕ್ ಕಣ್ಣೀರಿಟ್ಟಿದ್ದು ತಮಗೆ ನ್ಯಾಯ ಕೊಡಿಸುವಂತೆ ಅಂಗಲಾಚಿದ್ದಾನೆ.