ಈಗಿರುವ ಕಾಂಗ್ರೆಸ್ ಸರ್ಕಾರ ಇಷ್ಟರಲ್ಲೆ ಉರುಳುತ್ತಾ..? ಯಶವಂತ್ ಗುರೂಜಿ ಭಯಾನಕ ಹೇಳಿಕೆ..!
![ಈಗಿರುವ ಕಾಂಗ್ರೆಸ್ ಸರ್ಕಾರ ಇಷ್ಟರಲ್ಲೆ ಉರುಳುತ್ತಾ..? ಯಶವಂತ್ ಗುರೂಜಿ ಭಯಾನಕ ಹೇಳಿಕೆ..! ಈಗಿರುವ ಕಾಂಗ್ರೆಸ್ ಸರ್ಕಾರ ಇಷ್ಟರಲ್ಲೆ ಉರುಳುತ್ತಾ..? ಯಶವಂತ್ ಗುರೂಜಿ ಭಯಾನಕ ಹೇಳಿಕೆ..!](/news_images/2023/07/yashwant1690522782.jpg)
ರಾಜ್ಯದಲ್ಲಿ ಇದೀಗ ಎಲ್ಲರಿಗೂ ಗೊತ್ತಿರುವಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ.. ಹೌದು ಕಾಂಗ್ರೆಸ್ ಸರ್ಕಾರ ಇದೀಗ ತಮ್ಮ ಚುಕ್ಕಾಣಿ ಹಿಡಿದು ಅಧಿಕಾರ ಮಾಡುತ್ತಿದೆ.. ಇದೆಲ್ಲದರ ನಡುವೆ ಇದೀಗ ಒಂದು ಹೊಸ ಸುದ್ದಿ ಎಬ್ಬಿದ್ದು ಕಾಂಗ್ರೆಸ್ ಸರ್ಕಾರ ಇಷ್ಟರಲ್ಲಿಯೆ ಮುರಿದು ಬೀಳಲಿದೆ, ಚಿದ್ರ ಚಿದ್ರ ಆಗಲಿದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿವೆ. ಒಟ್ಟು 135 ಶಾಸಕರು ಕಾಂಗ್ರೆಸ್ ಸರ್ಕಾರದಲ್ಲಿ ಇದೀಗ ಇದ್ದು, ಸರ್ಕಾರದಲ್ಲಿ ಕಾಂಗ್ರೆಸ್ ತಮ್ಮ ಅಧಿಕಾರವನ್ನು ನಡೆಸುತ್ತಿದೆ. ಇನ್ನು ಕೆಲವರು ಹೇಳುವ ಹಾಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ಅವರ ಹೇಳಿಕೆಯ ಗ್ಯಾರೆಂಟಿ ಯೋಜನೆಗಳೇ ಕಾರಣ ಎನ್ನಾಗುತ್ತಿದೆ.
ಗ್ಯಾರಂಟಿ ಯೋಜನೆಗಳ ಆದೇಶ ಹೊರಡಿಸದಿದ್ದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ ಎನ್ನುವುದು ರಾಜ್ಯದ ರಾಜಕೀಯದ ಕೆಲ ತಜ್ಞರ ಮಾತು. ಹೌದು ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಮಾತುಗಳು ಸಹ ಇನ್ನೊಂದು ಕಡೆ ಕೇಳಿ ಬರುತ್ತಿದ್ದು ತುಂಬಾ ಚರ್ಚೆ ಆರಂಭ ಆಗಿದೆ. ಕಾಂಗ್ರೆಸ್ ಶಾಸಕರಾಗಿರುವ ಬಿಕೆ ಹರಿಪ್ರಸಾದ್ ಅವರು ಹೇಳಿರುವ ಹೇಳಿಕೆ ಇದೀಗ ಹೆಚ್ಚು ಚರ್ಚೆ ಆಗುತ್ತಿದ್ದು, ನಮಗೆ ಹೇಗೆ ಸಿಎಂ ಮಾಡುವುದು ಗೊತ್ತು, ಸಿಎಂ ಸ್ಥಾನದಿಂದ ಹೇಗೆ ಕೆಳಗೆ ಇಳಿಸುವುದು ಗೊತ್ತು ಎಂದು ಹೇಳಿಕೆ ನೀಡಿದ್ದಾರೆ.
ಜೊತೆಗೆ ಇನ್ನೊಂದು ಕಡೆ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಹೇಳಿಕೆ ನೀಡಿರುವ ಪ್ರಕಾರ ನಮ್ಮ ಕಾಂಗ್ರೆಸ್ ಸರ್ಕಾರವನ್ನು ನೆಲಕ್ಕೆ ಉರುಳಿಸಲು ವಿರೋಧ ಪಕ್ಷದ ಕೆಲವರು ಹರಸಾಹಸ ಮಾಡುತ್ತಿದ್ದಾರೆ ನಮ್ಮ ಎದುರಿಗೆ ಮಾಡಿದರೆ ಗೊತ್ತಾಗುತ್ತದೆ ಎಂದು ವಿದೇಶಕ್ಕೆ ಹೋಗಿ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿದೇಶಕ್ಕೆ ಹೋಗಿರುವ ಹಿನ್ನೆಲೆಯಲ್ಲಿ ಈ ಮಾತು ಹೇಳಿದ್ದಾರೆ ಎನ್ನಲಾಗಿದೆ. ಕರ್ನಾಟಕದ ಪ್ರಖ್ಯಾತ ಗುರೂಜಿಗಳಾದ ಯಶವಂತ್ ಗುರೂಜಿ ಅವರು ಇದೀಗ ಹೇಳಿರುವ ಹೇಳಿಕೆ ಮತ್ತೆ ಎಲ್ಲೆಡೆ ಬುಗಿಲೆದ್ದಿದೆ..ಹೌದು ಯಶವಂತ್ ಗುರೂಜಿ ಅವರು ಆರಂಭದಲ್ಲಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದಿದ್ದರು.
ಅದೇ ರೀತಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ನಂತರ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಇದೆ ಯಶವಂತ್ ಗುರೂಜಿ ಹೇಳಿದ್ದರು. ಅದರ ಪ್ರಕಾರ ಇದೀಗ ಕಾಂಗ್ರೆಸ್ ನ ಸಿದ್ದರಾಮಯ್ಯನವರೆ ಮುಖ್ಯಮಂತ್ರಿಗಳಾದರು. ಇದೀಗ ನವೆಂಬರ್ ಹೊತ್ತಿಗೆ ಕಾಂಗ್ರೆಸ್ ಸರ್ಕಾರ ಚಿದ್ರ ಚಿದ್ರ ಆಗಲಿದೆ ಎನ್ನುವ ಮತ್ತೊಂದು ಭವಿಷ್ಯವನ್ನು ನುಡಿದಿದ್ದಾರೆ. ಈ ನಡುವೆ ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆಗೂ ಮುನ್ನ ಚಿದ್ರ ಆಗುತ್ತಾ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಈಗ ಯಶವಂತ್ ಗುರೂಜಿ ಅವರು ಹೇಳಿರುವ ಈ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ ಧನ್ಯವಾದಗಳು..