ಈ ಯೋಜನೆ ಅಡಿ 21 ರಿಂದ 60 ವರ್ಷದೊಳಗಿನ ಪ್ರತಿ ಮಹಿಳೆಯರಿಗೆ 10,000 ರೂ: ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ ಸರ್ಕಾರ
ಒಡಿಸ್ಸಾದ ಮುಖ್ಯ ಮಂತ್ರಿ ಮೋಹನ್ ಚರಣ್ ಮಾಝಿ, ತಮ್ಮ ರಾಜ್ಯದಲ್ಲಿ ಮಹಿಳೆಯರಿಗಾಗಿ ಯೋಜನೆಯನ್ನು ಪ್ರಾರಂಭಿಸಿದ್ದಾರೆ.ಈ ಯೋಜನೆಯ ಹೆಸರು ಸುಭದ್ರಾ ಯೋಜನೆ. ಈ ಯೋಜನೆಯ ಮೊದಲ ಕಂತನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 17 ರಂದು ಈ ಯೋಜನೆಗೆ ಚಾಲನೆ ನೀಡಿದ್ದರು.
ಸುಭದ್ರಾ ಯೋಜನೆ' ಒಡಿಶಾ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಈ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿ, ರಾಜ್ಯದ ಅರ್ಹ ಮಹಿಳೆಯರಿಗೆ ವರ್ಷಕ್ಕೆ 10,000 ರೂಪಾಯಿ ಆರ್ಥಿಕ ನೆರವು ನೀಡಲಾಗುವುದು. ಅದನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ತಲಾ 5,000 ರೂಪಾಯಿಯಂತೆ ಎರಡು ಕಂತುಗಳಲ್ಲಿ ನೀಡಲಾಗುತ್ತದೆ.
ಈ ಸೌಲಭ್ಯವನ್ನು ಯಾರು ಪಡೆಯುತ್ತಾರೆ ?:
ಸುಭದ್ರಾ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು:
೧. ಒಡಿಶಾದ ಖಾಯಂ ನಿವಾಸಿಯಾಗಿರಬೇಕು.
೨. ಮಹಿಳಾ ಅರ್ಜಿದಾರರು ಮಾತ್ರ ಅರ್ಹರು.
೩. 21 ರಿಂದ 60 ವರ್ಷಗಳ ನಡುವಿನ ಮಹಿಳೆಯರಿಗೆ ಲಾಭ
೪.ಯಾವುದೇ ಸರ್ಕಾರಿ ವಲಯದಲ್ಲಿ ಕೆಲಸ ಮಾಡುತ್ರಬಾರದು
೫.ಕುಟುಂಬದ ಆದಾಯವು ವರ್ಷಕ್ಕೆ 2.5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು.
೬.ಪ್ರತಿ ಕುಟುಂಬದ ಒಬ್ಬ ಮಹಿಳೆ ಮಾತ್ರ ಯೋಜನೆಯ ಪ್ರಯೋಜನ
೭.ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ. ಆದರೆ ಅವರ ಪತಿ ಸರ್ಕಾರಿ ಉದ್ಯೋಗಿಯಾಗಿದ್ದರೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಕೂಡಾ ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.