ಸ್ಪಂದನಾ ತಂದೆ ಬಿ ಕೆ ಶಿವರಾಂ ಖಡಕ್ ಆಫೀಸರ್ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು..!! ಇಲ್ಲಿವೆ ನೋಡಿ
ಸ್ನೇಹಿತರೆ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಇದೀಗ ಈ ಲೋಕ ಬಿಟ್ಟು ತುಂಬಾ ದೂರವೆ ಹೋಗಿದ್ದಾರೆ. ಹೌದು ನಿನ್ನೆಯಷ್ಟೇ ಅವರ ಅಂತ್ಯಕ್ರಿಯೆ ಮಾಡಲಾಯಿತು. ನಾಳೆ ಹಾಲು ತುಪ್ಪ ಕಾರ್ಯಕ್ರಮ ಜರುಗಲಿದೆ. ವಿಜಯ ರಾಘವೇಂದ್ರ ಅವರ ಮನೆಯಲ್ಲಿ ನೀರವ ಮೌನ ತಾಳಿದೆ. ಈಗಲೂ ಕೂಡ ಬಿಕೆ ಶಿವರಾಂ ಅವರ ಮನೆಯಲ್ಲಿಯೇ ವಿಜಯ್ ರಾಘವೇಂದ್ರ ಮತ್ತು ಅವರ ಇಡೀ ಕುಟುಂಬ ಅಲ್ಲೇ ಉಳಿದಿದೆ ಎನ್ನುವ ಮಾಹಿತಿ ಕೇಳಿ ಬಂದಿದ್ದು, ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರ ತಂದೆ ಬಿ ಕೆ ಶಿವರಾಂ ಅವರ ಬಗ್ಗೆ ನಿಮಗೆಷ್ಟು ಗೊತ್ತು.? ಇಂದಿನ ಈ ಲೇಖನದಲ್ಲಿ ಹಂತ ಹಂತವಾಗಿಯೇ ತಿಳಿದುಕೊಳ್ಳೋಣ ಬನ್ನಿ.
ಬಿ ಕೆ ಶಿವರಾಂ ಅವರು ಎಸ್ಐ ಆಗಿದ್ದರು, ನಂತರ ಎಸಿಪಿ ಹೇಗಾದರು, ಹಾಗೇನೆ ಇವರನ್ನು ಕಂಡರೆ ಬೆಂಗಳೂರಿನ ಭೂಗತ ಲೋಕದ ದೊಡ್ಡ ದೊಡ್ಡ ಡಾನ್ ಗಳೇ ಹೆದರುತ್ತಿದ್ದರಂತೆ. ಬಿಕೆ ಶಿವರಾಂ ಅವರು ಒಬ್ಬ ನಿಷ್ಠಾವಂತ ಪೊಲೀಸ್ ಅಧಿಕಾರಿ. ಎಂದಿಗೂ ಕೂಡ ಅಂಜದೆ, ಯಾರಿಗೂ ಹೆದರದೆ ನಿಷ್ಠೆಯಿಂದಲೇ ತಮ್ಮ ಕೆಲಸವನ್ನು ಮಾಡಿದ ಪೊಲೀಸ್ ಅಧಿಕಾರಿ ಇವರು. ಇವರು 1953 ರಲ್ಲಿ ಜನಿಸುತ್ತಾರೆ. ನಂತರ ಇವರ ತಂದೆ ತಾಯಿ ಕಷ್ಟದಲ್ಲಿಯೆ ಇವರನ್ನ ಓದಿಸುತ್ತಾರೆ. ಇವರ ಸಹೋದರ ಸಹೋದರಿ ಯಾರು ಇವರಿಗಿಂತ ಹೆಚ್ಚು ಓದಿದ್ದರಂತೆ. ಆದ್ರೆ ಶಿವರಾಂ ಅವರು ಡಿಗ್ರಿ ಮಾತ್ರ ಮುಗಿಸಿದ್ದು ನಂತರದಲ್ಲಿ ಓದನ್ನು ನಿಲ್ಲಿಸಿದರು ಎಂದು ತಿಳಿದುಬಂದಿದೆ.
ಆನಂತರದಲ್ಲಿ ಇವರ ಗೆಳೆಯರಾದ ವಿಜಯೇಂದ್ರ ಅವರು ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಎಸ್ಐ ಪೋಸ್ಟ್ಗಳನ್ನ ಬಿಟ್ಟಿದ್ದ ವಿಷಯ ತಿಳಿದು ಬಿಕೆ ಶಿವರಾಂ ಅವರಿಗೆ ಅರ್ಜಿ ಹಾಕುವಂತೆ ಹೇಳುತ್ತಾರೆ. ಆದರೆ ಶಿವರಾಂ ಅವರಿಗೆ ಇದು ಇಷ್ಟವಿರಲಿಲ್ಲವಂತೆ. ನಂತರ ಅವರ ತಾಯಿಗೆ ವಿಜಯೇಂದ್ರರು ಹೇಳಿದ್ದು, ಆನಂತರ ಬಿಕೆ ಶಿವರಾಂ ಅವರು ಎಸ್ಐ ಪೋಸ್ಟಿಗೆ ಅರ್ಜಿ ಹಾಕಿ ಎಲ್ಲ ಪರೀಕ್ಷೆಯಲ್ಲಿ ಪಾಸಾಗಿ, ಮುಂದೆ ಮೈಸೂರಿನಲ್ಲಿ ಟ್ರೈನಿಂಗ್ ಪಡೆದು ಬೆಂಗಳೂರಿನ ಅಶೋಕ್ ನಗರ ಪೊಲೀಸ್ ಠಾಣೆಗೆ ಎಸ್ ಐ ಅಧಿಕಾರಿ ಆಗಿಯೇ ಬರುತ್ತಾರೆ. ಆ ಸಂದರ್ಭದಲ್ಲಿ ಹಂತ ಹಂತವಾಗಿ ಎಲ್ಲರೂ ಇವರನ್ನ ಕಂಡರೆ ಅಂಜುತ್ತಿದ್ದರು ಎಂದು ತಿಳಿದುಬಂದಿದೆ. ಬಿಕೆ ಶಿವರಾಂ ಅಂದರೆ ನಿಂತಲ್ಲೇ ಗಡಗಡ ನಡುಗುತ್ತಿದ್ದರಂತೆ. ಅಷ್ಟು ಭಯಾನಕ ಮತ್ತು ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಹೆಸರು ಮಾಡಿದವರು ಬಿಕೆ ಶಿವರಾಂ
ಹೌದು, ನಂತರ ಎಸಿಪಿ ಪೋಸ್ಟಿಗೆ ವರ್ಗಾವಣೆಯಾದ ಬಿ ಕೆ ಶಿವರಾಂ ಅವರು 2007ರಲ್ಲಿ ತಮ್ಮ ಪೊಲೀಸ್ ಕೆಲಸಕ್ಕೆ ಮೂರು ವರ್ಷ ಬಾಕಿ ಇರುವಾಗಲೇ ಸುಮಾರು 31 ವರ್ಷ ಸೇವೆ ಸಲ್ಲಿಸಿ ಸ್ವತಹ ತಾವೇ ರಾಜೀನಾಮೆ ನೀಡುತ್ತಾರೆ. ನಂತರ 2013ರಲ್ಲಿ ಮಲ್ಲೇಶ್ವರಂ ಕ್ಷೇತ್ರದ ಮೂಲಕ ಕಾಂಗ್ರೆಸ್ ನಿಂಡ ವಿಧಾನಸಭಾ ಎಲೆಕ್ಷನ್ ನಲ್ಲಿ ನಿಂತು ಅಶ್ವಥ್ ನಾರಾಯಣ ಅವರೆದುರು ಶಿವರಾಂ ಅವರು ಸೋಲುತ್ತಾರೆ. ಸುಮಾರು ನಾಲ್ಕು ಕೋಟಿಗೂ ಹಣ ಈ ಎಲೆಕ್ಷನ್ ಗೆ ಹೋಗಿದ್ದು ಸಾಲವನ್ನ ಸಹ ಮಾಡಿಕೊಂಡರಂತೆ. ಶಿವರಾಂ ಅವರ ಮಗ ರಕ್ಶಿತ್ ಸಹ ಬೆಳ್ತಂಗಡಿಯಿಂದ ನಿಂತು ಈ ಬಾರಿ ಸೋತಿದ್ದಾರೆ. ಹಾಗೆ ಶಿವರಾಂ ಅವರ ತಮ್ಮ ಹರಿಪ್ರಸಾದ್ ಆರಂಭದಿಂದಲೂ ರಾಜಕೀಯದಲ್ಲಿ ತೊಡಗಿದ್ದಾರೆ..ಈಗ ಶಿವರಾಂ ಅವರು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಕೆಲ ಪುಟ್ಟ ಮಕ್ಕಳನ್ನ ದತ್ತು ಪಡೆದು ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಹೇಳುತ್ತಾ ಹೋದರೆ ಶಿವರಾಂ ಅವರ ಬಗ್ಗೆ ಹೆಚ್ಚು ವಿಚಾರಗಳಿವೆ. ಅವರ ಇನ್ನಷ್ಟು ವಿಚಾರಗಳ ತಿಳಿಯಲು ಒಮ್ಮೆ ಈ ವಿಡಿಯೋ ನೋಡಿ, ಹಾಗೆ ವಿಡಿಯೋ ಶೇರ್ ಮಾಡಿ ಧನ್ಯವಾದಗಳು... ( video credit : india reports )