ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಸೋಲಲು ಇದೇ ಅಸಲಿ ಕಾರಣ ನೋಡಿ ?
ಸೈನಿಕನ ವಿರುದ್ಧ ತೊಡೆ ತಟ್ಟಿದ್ದ ಯುವರಾಜ ಮತ್ತೊಮ್ಮೆ ಸೋಲುಂಡಿದ್ದಾರೆ. ಮೂರು ಬಾರಿಯೂ ನಿಖಿಲ್ ಕುಮಾರಸ್ವಾಮಿ ಸೋಲೋದಕ್ಕೆ ಇದೇ ಕಾರಣ.
ಇದಕ್ಕೆ ಪ್ರಮುಖ ಕಾರಣ ಜೆಡಿಎಸ್ ಪಕ್ಷದ ಆತುರದ ನಿರ್ಧಾರ ಅಂದ್ರೆ ತಪ್ಪಾಗಲ್ಲ. ಇಲ್ಲ ಕುಮಾರಸ್ವಾಮಿಯವರ ಆತುರದ ನಿರ್ಧಾರವಾ ಅನ್ನೋ ಪ್ರಶ್ನೆ ಮೂಡುತ್ತೆ. ಯಾವುದೇ ಯೋಚನೆ ಮಾಡದೇ ಮಗನನ್ನು ಪದೇ ಪದೇ ಕಣಕ್ಕೆ ಇಳಿಸುತ್ತಿರುವುದೇ ಸೋಲಿಗೆ ಪ್ರಮುಖ ಕಾರಣ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಯಾವಾಗಲೂ ಅಷ್ಟೇ ಕೊನೆ ಕ್ಷಣದಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೇ ತಪ್ಪಾಯ್ತು ಅಂತಿದ್ದಾರೆ ಮತದಾರರು. ಕೊನೆಕ್ಷಣದವರೆಗೂ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ನಿಲ್ತಾರೆ ಅಂತ ಕನ್ಫರ್ಮ್ ಆಗಿರಲಿಲ್ಲ. ಕೊನೆ ಕ್ಷಣದಲ್ಲಿ ನಿಖಿಲ್ ಫೈನಲ್ ಆಗಿದ್ದರು. ತಾತ, ತಂದೆಯವರ ಆಸೆಯಂತೆ ನಿಲ್ಲುತ್ತೇನೆ, ಗೆಲ್ತೇನೆ ಅಂತ ನಿಖಿಲ್ ಹೇಳಿದ್ದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಪ್ರಮುಖ ಕಾರಣ ಪ್ರಜ್ವಲ್ ರೇವಣ್ಣ ಅವರ ವಿವಾಹೇತರ ಸಂಬಂಧಗಳ ಹಗರಣವಾಗಿದೆ. ಪ್ರಜ್ವಲ್ ರೇವಣ್ಣ ಅವರು ವಿವಿಧ ಮಹಿಳೆಯರೊಂದಿಗೆ ಸಂಬಂಧ ಹೊಂದಿರುವುದಕ್ಕಾಗಿ ಜೈಲಿನಲ್ಲಿ ಇದ್ದಾರೆ. ಹೆಚ್.ಡಿ. ರೇವಣ್ಣ ಮತ್ತು ಅವರ ಇಬ್ಬರು ಪುತ್ರರ ತಪ್ಪುಕಾರ್ಯಗಳಿಂದ ದೇವೇಗೌಡ ಕುಟುಂಬವು ಸಾರ್ವಜನಿಕರ ಉತ್ತಮ ಅಭಿಪ್ರಾಯವನ್ನು ಕಳೆದುಕೊಂಡಿದೆ. ಕರ್ನಾಟಕದ ಜನರು ಕುಟುಂಬ ರಾಜಕಾರಣವನ್ನು ಪ್ರೋತ್ಸಾಹಿಸುವುದಿಲ್ಲ.
ಪ್ರತಿಬಾರಿಯೂ ನಿಖಿಲ್ ಕುಮಾರಸ್ವಾಮಿಯವರನ್ನೇ ಅಖಾಡಕ್ಕೆ ಇಳಿಸೋದ್ಯಾಕೆ ದಳಪತಿ? 2 ಬಾರಿ ಸೋತಿದ್ರೂ ಮತ್ತೆ ಮಗನಿಗೆ ಮಣೆ ಹಾಕಿದ್ಯಾಕೆ? ಮಗನನ್ನು ಗೆಲ್ಲಿಸುವುದೇ ಕುಮಾರಸ್ವಾಮಿಯವರ ಮಹತ್ತರ ಉದ್ದೇಶ ಅನ್ನೋದು ಇದರಿಂದಲೇ ಗೊತ್ತಾಗುತ್ತೆ
ಇದೀಗ ನಿಖಿಲ್‌ಗೆ ಮತ್ತೊಮ್ಮೆ ಹೀನಾಯ ಸೋಲಾಗಿದೆ. ಇಷ್ಟೆಲ್ಲಾ ಮಾಡಿದ್ದು ನಿಖಿಲ್ ಭವಿಷ್ಯಕ್ಕಾಗಿ ಅಲ್ವಾ? ಮುಂದೆ ನಿಖಿಲ್ ಭವಿಷ್ಯವೇನು? ಮೂರನೇ ಸೋಲಿನಿಂದ ನಿಖಿಲ್ ಹೇಗೆ ಆಚೆ ಬರ್ತಾರೆ? ಮತ್ತೆ ರಾಜಕೀಯದಲ್ಲೇ ಸಕ್ರಿಯರಾಗ್ತಾರಾ? ಇಲ್ಲ ಮತ್ತೆ ಚಿತ್ರರಂಗದತ್ತ ಮರಳುತ್ತಾರಾ? ಇದಕ್ಕೆ ಉತ್ತರ ಸ್ವತಃ ನಿಖಿಲ್ ಕುಮಾರಸ್ವಾಮಿನೇ ಹೇಳಬೇಕಿದೆ.