ಫ್ರೀ ಬಸ್ ಯೋಜನೆ ಅವಾಂತರ ;ಬಸ್ ಟೈಯರ್ ಗೆ ತಲೆಕೊಟ್ಟು ಪತಿರಾಯನ ಅವಾಂತರ ಟ್ರಿಪ್ ಗೆ ಹೋದ ಪತ್ನಿ ಮನೆಗೆ ಬಂದಿಲ್ಲ
ಸರ್ಕಾರದ ಫ್ರೀ ಬಸ್ ಯೋಜನೆ ಬಂದ ದಿನದಿಂದಲೂ ಒಂದಲ್ಲ ಒಂದು ಅವಾಂತರ ನಡೆಯುತ್ತಲೇ ಇದೆ. ನಮ್ಮ ಹೆಂಗಸರು ಮನೆಯಲ್ಲೇ ಇರುವುದಿಲ್ಲ ಯಾವಾಗಲಿ ಫ್ರೀ ಬಸ್ ಅಂತ ಊರಿಂದ ಊರಿಗೆ ಪ್ರಯಾಣ ಮಾಡುತ್ತಲೇ ಇರುತ್ತಾರೆ . ನಮಗೆ ಯಾರು ಅಡುಗೆ ಮಾಡಿ ಹಾಕುತ್ತಾರೆ ಅಂತ ಎಷ್ಟೋ ಜನ ಸರ್ಕಾರವನ್ನು ದೂರತ್ತಾ ಇದ್ದಾರೆ . ಆದ್ರೆ ಇಲ್ಲೊಬ್ಬ ಭೂಪ ಏನು ಮಾಡಿದ್ದಾನೆ ನೋಡಿ
ಹೊಸಕೋಟೆಯ ಬಸ್ ನಿಲ್ದಾಣದಲ್ಲಿ ಪತ್ನಿ ವಿರುದ್ಧ ಸಿಟ್ಟಿಗೆದ್ದ ಪತಿ ಬಸ್ ಟೈಯರ್‌ಗೆ ತಲೆಕೊಟ್ಟು ಆತ್ಮ * ಹತ್ಯೆಗೆ ಯತ್ನಿಸಿದ್ದಾನೆ. ಪರಿಣಾಮ ಹೊಸಕೋಟೆ ಬಸ್ ನಿಲ್ದಾಣದಲ್ಲಿ ಅರ್ಧಗಂಟೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಕೆಲಕಾಲ ಪರದಾಡುವಂತಾಯ್ತು.
ನನ್ನ ಹೆಂಡತಿ ಟ್ರಿಪ್ ಗೆ ಹೋದವಳು ಇನ್ನೂ ವಾಪಸ್ ಬಂದಿಲ್ಲ. ಸಿದ್ದರಾಮಯ್ಯ ಸರಿಯಿಲ್ಲ, ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ರದ್ದುಗೊಳಿಸಿ. ಸರ್ಕಾರ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣವನ್ನು ತೆಗೆದು ವ್ಯಕ್ತಿ ಹಾಕಬೇಕೆಂದು ಒತ್ತಾಯಿಸಿದ್ದಾನೆ.
ಕಂಠಪೂರ್ತಿ ಕುಡಿದಿರುವ ವ್ಯಕ್ತಿ ತೂರಾಡಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಲ್ಲದೆ ಬಸ್ ಟೈಯರ್ ಗೆ ತಲೆಕೊಟ್ಟು ಪ್ರಾಣಕಳೆದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ನೆರೆದ ಜನ ಆತನನ್ನು ರಕ್ಷಣೆ ಮಾಡಿದ್ದಾರೇ .