ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್,ಸಿಗಲಿದೆ 3 ಲಕ್ಷ ಸಾಲ ಅದರಲ್ಲಿ 1 ಲಕ್ಷ 20 ಸಬ್ಸಿಡಿ
ಮಹಿಳೆಯರೇ ನೀವು ದುಡ್ಡಿನ ಸಮಸ್ಯೆಯಲ್ಲಿದ್ದರೆ ಇಲ್ಲಿದೆ ನೋಡಿ ನಿಮಗೊಂದು ಒಳ್ಳೆಯ ಪರಿಹಾರ. ಕರ್ನಾಟಕದಲ್ಲಿರುವಂತಹ ಎಲ್ಲಾ ಮಹಿಳೆಯರು ಅಂದರೆ 18 ವರ್ಷ ಆಗಿರಬೇಕು 50 ವರ್ಷಕ್ಕಿಂತ ಮೀರಿರಬಾರದು ಅಂತಹ ಮಹಿಳೆಯರಿಗೆ ಸಾಲದ ಅವಶ್ಯಕತೆ ಇದ್ದರೆ ಸರ್ಕಾರದಿಂದ 3 ಲಕ್ಷದವರೆಗೆ ಸಾಲ ನೀಡುತ್ತಿದ್ದಾರೆ. ಪ್ರತಿಯೊಬ್ಬರೂ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.
ಕಾಂಗ್ರೆಸ್ ಸರ್ಕಾರ ಬಂದ ನಂತರ ಮಹಿಳೆಯರಿಗೆ ತುಂಬಾ ಸೌಲಭ್ಯವನ್ನು ದೊರಕುತ್ತಿವೆ ಉಚಿತ ಬಸ್ ಸೌಲಭ್ಯ, ಗೃಹಲಕ್ಷ್ಮಿ ಯೋಜನೆ ಇತ್ಯಾದಿ ನೀವು ನೋಡಿರಬಹುದು ಅದೇ ರೀತಿ ಈಗ ಮತ್ತೊಂದು ಯೋಜನೆಯನ್ನು ಮಹಿಳೆಯರಿಗಾಗಿ ಸರ್ಕಾರ ತಂದಿದೆ ಯಾವುದೇ ಗ್ಯಾರೆಂಟಿ ಹಾಗೂ ಅಡಮಾನ ಇಲ್ಲದೆ 3 ಲಕ್ಷದವರೆಗೆ ಮಹಿಳೆಯರಿಗೆ ಸಾಲ ನೀಡುತ್ತಾರೆ.
ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ತುಂಬಾ ಅನುಕೂಲ ಮಾಡಿಕೊಡುತ್ತಿದೆ. ಶಕ್ತಿ ಯೋಜನೆಯಿಂದಾಗಿ ಎಷ್ಟೋ ಮಹಿಳೆಯರು ಸ್ವತಂತ್ರವಾಗಿ ಓಡಾಡುತ್ತಿದ್ದಾರೆ ಅಷ್ಟೇ ಅಲ್ಲದೆ ಗೃಹಲಕ್ಷ್ಮಿ ಯೋಜನೆ ಕೂಡ ಮಹಿಳೆಯರಿಗೆ ತಮ್ಮ ದಿನನಿತ್ಯದ ವಸ್ತುಗಳನ್ನು ತೆಗೆದುಕೊಳ್ಳಲು ಯಾರ ಮೇಲೂ ಅವಲಂಬಿತವಾಗದೆ ತಾವೇ ತೆಗೆದುಕೊಳ್ಳುವಂತಹ ಸಾಮರ್ಥ್ಯವನ್ನು ನೀಡಿದೆ.
( video credit : ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ
ಮಹಿಳೆಯರು ಯಾರ ಮೇಲೂ ಅವಲಂಬಿತವಾಗದೆ ಸ್ವಂತ ದುಡಿಮೆಯಿಂದ ಬದುಕಬೇಕು ಅಂದುಕೊಂಡಂಥವರಿಗೆ ಇದು ಒಂದು ಒಳ್ಳೆಯ ಯೋಜನೆಯಾಗಿದೆ. ಹೊಸದಾಗಿ ಉದ್ಯೋಗವನ್ನು ಶುರು ಮಾಡಲು ಇದು ಒಂದು ಒಳ್ಳೆಯ ಅವಕಾಶ ಹಾಗೂ ಕಷ್ಟದಲ್ಲಿದ್ದಂತಹ ಮಹಿಳೆಯರಿಗೆ ಈ ಯೋಜನೆ ಉಪಯೋಗವಾಗುತ್ತದೆ ಈ ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಿ. ಮೂರು ಲಕ್ಷದವರೆಗೆ ಸಾಲ ನೀಡುತ್ತಿದ್ದಾರೆ ಹಾಗೂ ಯಾವುದೇ ರೀತಿ ಬಡ್ಡಿ ಇರುವುದಿಲ್ಲ
ಈ ಯೋಜನೆಯ ಫಲವನ್ನು ಪಡೆದುಕೊಳ್ಳಲು ಮಹಿಳೆಯರು ಬಡತನ ರೇಖೆಗಿಂತ ಕೆಳಗಿನವರಾಗಿರಬೇಕು. ನಿಮ್ಮ ಆಧಾರ್ ಕಾರ್ಡ್,ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ಪ್ರತಿ ಹೀಗೆ ಕೆಲವೊಂದಷ್ಟು ದಾಖಲಾತಿಗಳನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೀವು ಮಾಹಿತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.