ಕೋಡಿಮಠದ ಶ್ರೀಗಳಿಂದ ಶ್ರಾವಣ ಮಧ್ಯಂತರ ಭವಿಷ್ಯ..! ಚಂದ್ರಯಾನ 3 ಬಗ್ಗೆ ಶಾಕಿಂಗ್ ಹೇಳಿಕೆ
ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ತಮ್ಮ ಭವಿಷ್ಯವಾಣಿಯಿಂದಲೇ ಅತಿ ಹೆಚ್ಚು ಸುದ್ದಿ ಆಗುತ್ತಿರುವ ಹಾಸನದ ಕೋಡಿಮಠದ ಶ್ರೀಗಳು ಅಂದರೆ ಶಿವಾನಂದ ಶಿವಯೋಗಿ ಮಹಾಸ್ವಾಮೀಜಿಗಳು ಈಗ ಮತ್ತೊಂದು ಭಯಾನಕವಾದ ಸುದ್ದಿಯನ್ನು ಹೇಳಿದ್ದು ಭವಿಷ್ಯ ನುಡಿದಿದ್ದಾರೆ. ಶ್ರಾವಣ ಮಾಸದ ಮಧ್ಯಂತರ ವೇಳೆಗೆ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆ ಆಗುವ ಸಂದರ್ಭ ಬರಲಿದೆಯಂತೆ, ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಆಗುವ ಸಾಧ್ಯತೆ ಸಹ ಇದೆ ಎಂದು ಹೇಳಿದರು. ಇತ್ತೀಚೆಗೆ ಬೆಳಗಾವಿಯಲ್ಲಿ ಮಾತನಾಡಿದ ಶ್ರೀಗಳು ಹೇಳಿದಂತೆ ಸುನಾಮಿ ಭೂಕಂಪನ ಸಂಭವಿಸಲಿದ್ದು ಜನರು ಇದರಿಂದ ಸಾವು ನೋವಿಗೆ ಒಳಗಾಗುತ್ತಾರೆ ಎಂದರು.
ವಿಷ ಅನಿಲ ಬೀಸುವ ಸಾಧ್ಯತೆ ಕೂಡ ಇದೆಯಂತೆ. ಅದು ಎಲ್ಲಾ ಕಡೆಯೂ ವ್ಯಾಪಕ ಆಗುತ್ತದೆ, ಅತಿವ ಮಳೆಯಿಂದ ಎರಡು ದೇಶಗಳು ನಾಶ ಆಗುವ ಸಾಧ್ಯತೆ ಇದ್ದು ಭಾರತದಲ್ಲಿ ಜಲಪ್ರಳಯ ಆಗುವ ಲಕ್ಷಣಗಳು ಸಹ ಕಂಡು ಬರಲಿವೆ ಎಂದು ಶ್ರೀಗಳು ಮಾದ್ಯಮ ಮುಂದೆ ಭವಿಷ್ಯ ನುಡಿದಿದ್ದಾರೆ..ಮುಂದೆ ದಕ್ಷಿಣ ಭಾರತದಲ್ಲಿ ಸಮೃದ್ಧಿ ಆಗುವ ಲಕ್ಷಣ ಇವೆ, ಅಲ್ಲಿ ಯಾವುದೇ ತೊಂದರೆ ಇಲ್ಲ, ಜೊತೆಗೆ ಭೂಕಂಪನ ಸಾಧ್ಯತೆ ಇದ್ದು ದೊಡ್ಡ ದೊಡ್ಡ ನಗರಗಳು ಇದರಿಂದಾಗಿ ಅಪಾಯ ಎದುರಿಸಲಿದೆ. ಜೊತೆಗೆ ಜನರಲ್ಲಿ ಸಾವುಗಳು ಕೂಡ ಕಂಡು ಬರಬಹುದು, ಜಾಗತಿಕ ಮಟ್ಟದಲ್ಲಿ ವಿಷ ಅನಿಲ ಪರಿಣಾಮದಿಂದಾಗಿ ಭಾರತ ಕೂಡ ನಷ್ಟಕ್ಕೆ ಒಳಗಾಗಲಿದೆ.. ಜನರು ಜಗತ್ತಿನಲ್ಲಿ ಸಾಮ್ರಾಟ ತಲ್ಲಣ ಗೊಳ್ಳುವ ಪ್ರಸಂಗದಿಂದ ಎಚ್ಚರ ವಹಿಸಬೇಕು ಎಂದರು
ಹಾಗೆ ರಾಜಕೀಯದ ಬಗ್ಗೆ ಮಾತನಾಡಿದ ಕೊಡಿ ಶ್ರೀಗಳು ಲೋಕಸಭೆ ಚುನಾವಣೆ ಫಲಿತಾಂಶ ಬಗ್ಗೆ ಇನ್ನೂ ಹೇಳಲು ಸಮಯ ಇದೆ..ಚಂದ್ರಯಾನ ಮೂರು ಯಶಸ್ವಿಯಾಗಿ ಒಳ್ಳೆಯ ಫಲಿತಾಂಶ ಹೊರ ಬೀಳಲಿದೆ. ದೈವದ ಬಲ ಮನುಷ್ಯನಿಗೆ ಬೇಕು, ಯಾರು ದೈವವನ್ನು ನಂಬುತ್ತಾರೆಯೋ ಅವರಿಗೆ ಒಳ್ಳೆಯದಾಗುತ್ತದೆ, ಅವರಿಗೆ ತೊಂದರೆ ಆಗುವುದಿಲ್ಲ, ಯಾರು ದೈವವನ್ನು ನಂಬುವುದಿಲ್ಲವೋ ಅಂತವರಿಗೆ ಸಮಸ್ಯೆ ಖಂಡಿತ ಆಗುತ್ತದೆ,, ದೈವದ ಬಲ ಇದ್ದರೂ ಕೆಲವರಿಗೆ ಹೆಚ್ಚು ತೊಂದರೆಗಳು ಎದುರಾಗುತ್ತವೆ, ಅದು ಪ್ರಕೃತಿ ನಿಯಮ ಎಂದು ಭವಿಷ್ಯ ನುಡಿದರು.
ಜೊತೆಗೆ ಪ್ರಾಕೃತಿಕ ದೋಷದಿಂದಲೇ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ. ಮುಂಚಿತವಾಗಿ ದನದ ಗೊಬ್ಬರ ಕೊಟ್ಟಿಗೆ ಗೊಬ್ಬರ ಹಾಕಿ ಬೆಳೆಗಳನ್ನ ಬೆಳೆಯಲಾಗುತ್ತಿತ್ತು ಆದರೆ ಇಂದು ಬೆಳೆಗಳಿಗೆ ವಿಷವನ್ನು ಹೆಚ್ಚಾಗಿಯೇ ಸಿಂಪಡಿಸಲಾಗುತ್ತಿದೆ.. ಕಾರಣ ಬೆಳೆಗಳಿಗೆ ಸರಿಯಾದ ರೀತಿ ರೈತರಿಗೆ ಬೆಲೆ ಸಿಗುತ್ತಿಲ್ಲ. ಇಂದಿನ ಖರ್ಚು ಹೆಚ್ಚಾದ ಕಾರಣಕ್ಕೆ ರೈತರು ಹೊಲಗಳಿಗೆ ಹುಲ್ಲು ಕಳೆಯಲು ವಿಷ ಎಣ್ಣೆ ಸಿಂಪಡಿಸುತ್ತಾರೆ. ಹಾಗೆ ಕೆಲ ಬೆಳೆಗಳಿಗೆ ಎಣ್ಣೆ ಹೊಡೆದು ಹೊಡೆದು ತರಕಾರಿಗಳು ಕೂಡ ವಿಷಯವಾಗಿ ಮಾರ್ಪಾಡಾಗುತ್ತಿವೆ.. ಅವುಗಳನ್ನು ನಾವು ಊಟ ಮಾಡುತ್ತೇವೆ.. ಅದರಿಂದ ವಿಷಯವನ್ನೇ ಬಿತ್ತಿ ವಿಷಯವನ್ನೇ ತಿಂದರೆ ನಮ್ಮ ಆರೋಗ್ಯ ಹೇಗೆ ಸುಧಾರಿಸುವುದು, ಅದರ ವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ...
ಪ್ರಕೃತಿ ಕೂಡ ಮುನಿಸಿಕೊಂಡಿದೆ. ಮೊದಲು ಅಂತರ್ಜಲ ಇತ್ತು ಈಗ ಮನುಷ್ಯ ಬೋರ್ವೆಲ್ ಕೊರಸಿ ಹಣದ ಹಿಂದೆ ಓಡುತ್ತಿದ್ದಾನೆ. ಹಾಗಾಗಿ ಭೂಕಂಪನಗಳು ಹೆಚ್ಚಾಗುತ್ತಿದೆ. ಜೊತೆಗೆ ಪರಿಸರವನ್ನು ಹಾಳು ಮಾಡಿ ಕಾಡನ್ನು ನಶಿಸಿದ್ದಾನೆ, ಇದಕ್ಕೆಲ್ಲ ಪ್ರಕೃತಿಯೇ ಉತ್ತರ ನೀಡುತ್ತದೆ, ಹಣದ ಹಿಂದೆ ಓಡುತ್ತಿರುವ ಜನರಿಗೆ ಪ್ರಕೃತಿ ಪಾಠ ಕಲಿಸುತ್ತದೆ. ಭಗವಂತ ಏಲ್ಲಾ ನೋಡುತ್ತಿದ್ದಾನೆ ಎಂದು ಹೇಳಿ ಮಹಿಳೆ ಸಿಎಂ ಆಗುವ ಸಾದ್ಯತೆ ಸಹ ಇದೆ ಎಂದು ಹೇಳಿದ್ದಾರೆ ಎನ್ನಲಾಗಿದೆ... ( video credit :Asianet suvarna news )