Karnataka Weather: ಉತ್ತರ ಕರ್ನಾಟಕದಲ್ಲಿ ಬಿರುಬಿಸಿಲಿನ ಅಬ್ಬರ! ಗದಗ, ಕಲಬುರಗಿ, ದಾವಣಗೆರೆ, ರಾಯಚೂರು ತಾಪಮಾನ ಹೆಚ್ಚಳ ; ಬಿಸಿಗಾಳಿಯ ಮುನ್ಸೂಚನೆ

ಕರ್ನಾಟಕದಲ್ಲಿ ಈಗಾಗಲೇ ಬೇಸಿಗೆಕಾಲದ ಅನುಭವ ಆರಂಭವಾಗಿದೆ. ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಂಡುಬಂದಿದೆ. ಕಲಬುರಗಿ, ಗದಗ, ದಾವಣಗೆರೆ, ರಾಯಚೂರು ಸೇರಿದಂತೆ ಹಲವೆಡೆಗಳಲ್ಲಿ ಫೆಬ್ರವರಿ ಮೊದಲ ವಾರದಲ್ಲಿಯೇ ಬಿರುಬಿಸಿಲು ಅನುಭವವಾಗುತ್ತಿದೆ. ಈ ಪ್ರದೇಶಗಳಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ದಾಟಿದೆ.
ಉತ್ತರ ಕರ್ನಾಟಕದ ಉಷ್ಣಾಂಶ ಪ್ರಮಾಣ:
- ಕಲಬುರಗಿ: 35.6 ಡಿಗ್ರಿ ಸೆಲ್ಸಿಯಸ್
- ಗದಗ: 35.2 ಡಿಗ್ರಿ ಸೆಲ್ಸಿಯಸ್
- ರಾಯಚೂರು: 34.0 ಡಿಗ್ರಿ ಸೆಲ್ಸಿಯಸ್
- ವಿಜಯಪುರ: 33.8 ಡಿಗ್ರಿ ಸೆಲ್ಸಿಯಸ್
- ಬಾಗಲಕೋಟೆ: 33.7 ಡಿಗ್ರಿ ಸೆಲ್ಸಿಯಸ್
- ಬೆಳಗಾವಿ: 33.6 ಡಿಗ್ರಿ ಸೆಲ್ಸಿಯಸ್
- ಬೀದರ್: 33.6 ಡಿಗ್ರಿ ಸೆಲ್ಸಿಯಸ್
- ಧಾರವಾಡ: 33.2 ಡಿಗ್ರಿ ಸೆಲ್ಸಿಯಸ್
- ಹಾವೇರಿ: 33.2 ಡಿಗ್ರಿ ಸೆಲ್ಸಿಯಸ್
- ಕೊಪ್ಪಳ: 32.6 ಡಿಗ್ರಿ ಸೆಲ್ಸಿಯಸ್
ದಕ್ಷಿಣ ಕರ್ನಾಟಕದ ಉಷ್ಣಾಂಶ ಪ್ರಮಾಣ:
- ದಾವಣಗೆರೆ: 34.0 ಡಿಗ್ರಿ ಸೆಲ್ಸಿಯಸ್
- ಚಾಮರಾಜನಗರ: 35.6 ಡಿಗ್ರಿ ಸೆಲ್ಸಿಯಸ್
- ಶಿವಮೊಗ್ಗ: 34.0 ಡಿಗ್ರಿ ಸೆಲ್ಸಿಯಸ್
- ಚಿತ್ರದುರ್ಗ: 33.5 ಡಿಗ್ರಿ ಸೆಲ್ಸಿಯಸ್
- ಮಂಡ್ಯ: 32.8 ಡಿಗ್ರಿ ಸೆಲ್ಸಿಯಸ್
- ಮೈಸೂರು: 32.8 ಡಿಗ್ರಿ ಸೆಲ್ಸಿಯಸ್
- ಮಡಿಕೇರಿ: 32.7 ಡಿಗ್ರಿ ಸೆಲ್ಸಿಯಸ್
- ಹಾಸನ: 31.7 ಡಿಗ್ರಿ ಸೆಲ್ಸಿಯಸ್
- ಚಿಕ್ಕಮಗಳೂರು: 29.4 ಡಿಗ್ರಿ ಸೆಲ್ಸಿಯಸ್
- ಚಿಂತಾಮಣಿ: 35.6 ಡಿಗ್ರಿ ಸೆಲ್ಸಿಯಸ್
ಕರಾವಳಿ ಪ್ರದೇಶದ ಉಷ್ಣಾಂಶ ಪ್ರಮಾಣ:
- ಕಾರವಾರ: 35.8 ಡಿಗ್ರಿ ಸೆಲ್ಸಿಯಸ್
- ಮಂಗಳೂರು (ಪಣಂಬೂರು): 33.1 ಡಿಗ್ರಿ ಸೆಲ್ಸಿಯಸ್
- ಹೊನ್ನಾವರ: 32.7 ಡಿಗ್ರಿ ಸೆಲ್ಸಿಯಸ್
- ಮಂಗಳೂರು ವಿಮಾನ ನಿಲ್ದಾಣ: 32.5 ಡಿಗ್ರಿ ಸೆಲ್ಸಿಯಸ್
ಬೆಂಗಳೂರು ಹವಾಮಾನ:
ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಬೀಳುವ ಸಾಧ್ಯತೆಗಳಿವೆ. ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಹವಾಮಾನದಲ್ಲಿ ಈ ರೀತಿಯ ಬದಲಾವಣೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಬಿರುಬಿಸಿಲಿನ ಸೂಚನೆ ನೀಡುತ್ತಿವೆ. ಜನರು ತಕ್ಷಣವೇ ತಕ್ಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.