ರೈಲ್ವೆ ಹುದ್ದೆ ಪಡೆಯುವುದು ಹೇಗೆ ಹಾಗೂ ಯಾವ ಕೆಲ್ಸಕ್ಕೆ ಎಷ್ಟು ಸಂಬಳ ಇದೆ ಗೊತ್ತಾ?
ರೈಲ್ವೆ ಇಲಾಖೆಯಲ್ಲಿ ರೈಲ್ವೇ ನೌಕರರಿಗೆ ವಿವಿಧ ಅವಕಾಶಗಳು ಮತ್ತು ವ್ಯವಸ್ಥೆಗಳಿವೆ.ಇನ್ನೂ ಈ ರೈಲ್ವೆ ಇಲಾಖೆಯನ್ನು ಲೈಫ್ ಲೈನ್ ಎಂದು ಪ್ರಸಿದ್ದಿಯನ್ನು ಪಡೆದಿದ್ದಾರೆ ಎಂದು ಹೇಳಬಹುದು.
ಹಾಗೆಯೇ ಇದರಲ್ಲಿ ಒಮ್ಮೆ ಪ್ರವೇಶ ಪಡೆದುಕೊಂಡರೆ ಒಳ್ಳೊಳ್ಳೆ ಅವಕಾಶ ಹಾಗೂ ವ್ಯವಸ್ಥೆಯನ್ನು ಪಡೆದುಕೊಳ್ಳಬಹುದು ಎಂದು ಎಲ್ಲರೂ ಕೊಡ ಹೇಳುತ್ತಾರೆ. ರೈಲು ಸೇವೆಗಳು ದೇಶಾದ್ಯಂತ ಯಾತ್ರಿಕರಿಗೆ ಸೇವೆ ನೀಡುತ್ತವೆ. ಇವು ವಿವಿಧ ವರ್ಗಗಳಲ್ಲಿ ಲಭ್ಯವಿದ್ದು, ಬೇರೆ ವಿಧದ ಸ್ಥಳೀಯ ಮತ್ತು ದ್ವಿತೀಯಾಂಶ ಯಾತ್ರಿಕರನ್ನು ಸಂಪರ್ಕಿಸುತ್ತವೆ. ರೈಲ್ವೇ ಇಲಾಖೆ ವಿವಿಧ ಹುದ್ದೆಗಳಿಗೆ ಆದ್ಯಂತರ ಪರೀಕ್ಷೆಗಳನ್ನು ನಡೆಸುತ್ತದೆ. ಇದು ರೈಲ್ವೇ ನೌಕರರನ್ನು ನೇಮಕಗೊಳಿಸುವ ಒಂದು ಮುಖ್ಯ ವ್ಯವಸ್ಥೆ. ರೈಲ್ವೇ ಇಲಾಖೆಯು ನೇಮಕಾತಿಗಳನ್ನು ಪ್ರಕಟಿಸುತ್ತದೆ ಮತ್ತು ನೌಕರರನ್ನು ನೇಮಕಗೊಳಿಸುತ್ತದೆ.
ರೈಲ್ವೇ ಇಲಾಖೆಯಲ್ಲಿ ನೌಕರರಿಗೆ ಕಾರ್ಯಾಲಯ ಸೇವೆಗಳು ಲಭ್ಯವಿದೆ. ಇವು ನೌಕರರ ಬಳಕೆಗೆ ಅನೇಕ ಸುವಿಧೆಗಳನ್ನು ಒದಗಿಸುತ್ತವೆ. ರೈಲ್ವೇ ನೌಕರರಿಗೆ ನಿಯಮಿತವಾಗಿ ವೇತನ ಮತ್ತು ಭತ್ತೆ ಒದಗಿಸಲಾಗುತ್ತದೆ. ನೌಕರರು ತಮ್ಮ ಕರ್ತವ್ಯಗಳನ್ನು ನಡೆಸಲು ತಂತ್ರಾಂಶ ಸಹಾಯ ಲಭ್ಯವಿದೆ. ಭಾರತೀಯ ರೈಲ್ವೆಯ ಬಗ್ಗೆ ಹೇಳುವುದಾದರೆ 7ಸಾವಿರಕ್ಕೂ ಹೆಚ್ಚು ರೈಲು ಸ್ಟೇಶನ್ ಹೊಂದಿದ್ದು ಈ ರೈಲು ಸೇವೆಗೆ 108ವರ್ಷಗಳ ಕಾಲ ಇತಿಹಾಸವನ್ನು ಹೊಂದಿದೆ ಎಂದು ಹೇಳಬಹುದು. ದಿನಕ್ಕೆ 2ಲಕ್ಷದ ಜನರು ಈ ಸೇವೆಯನ್ನು ಪಡೆಯುತ್ತಾರಂತೆ ಹಾಗೆಯೇ ದಿನಕ್ಕೆ 30 ಲಕ್ಷದ ವರೆಗೂ ಗೂಡ್ಸ್ ಸಾಗಾಣಿಕೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಭಾರತದಲ್ಲಿ ಹೆಚ್ಚಿನ ಗೌರವ ನೀಡುವ ವೃತ್ತಿ ಎಂದ್ರೆ ಅದು ರೈಲ್ವೆ ಉದ್ಯೋಗ ಎಂದು ಹೇಳಬಹುದು. ಇದರಿಂದ ಸಾಕಷ್ಟು ಅನುಕೂಲಗಳು ಕೊಡ ಇವೆ ಎಂದು ಹೇಳಬಹುದು. ಹಾಗೆಯೇ ಯಾವೆಲ್ಲ ಅನುಕೂಲ ಇದೆ ಎಂದು ನೋಡೋಣ ಬನ್ನಿ.
ಇದರಲ್ಲಿ ಒಮ್ಮೆ ಒಳಗೆ ಬಂದರೆ ಕಾಯಂ ಕೆಲ್ಸ ಕಟ್ಟಿಟ್ಟ ಬುತ್ತಿ. ಇನ್ನೂ ವೃತ್ತಿಯಲ್ಲಿ ಇರುವಾಗ ಇವರಿಗೆ ಹಾಗೂ ಕುಟುಂಬದವರಿಗೆ ಉಚಿತವಾಗಿ ಇಡೀ ಭಾರತದಾದ್ಯಂತ ಓಡಾಡಬಹುದು. ಇವರಿಗೆ ಪೆನ್ಶನ್ ಸೌಲಭ್ಯ ಹಾಗೂ ಸರಿಯಾದ ಸಮಯಕ್ಕೆ ಯಾವುದೇ ಪರಿಸ್ಥಿಯಲ್ಲಿ ಕೊಡ ಇವರಿಗೆ ವೇತನವನ್ನು ನೀಡಲಾಗುವುದು. ಹಾಗೆಯೇ ಇವರ ಹಾಗೂ ಇವ್ರ ಕುಟುಂಬದ ಆರೋಗ್ಯದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಹಾಗೆಯೇ ಅಕಾಲಿಕ ಮರಣ ಹೊಂದಿದರು ಕೊಡ ಮನೆಯಲ್ಲಿ ಒಬ್ಬ ಸದಸ್ಯರಿಗೆ ಕೆಲ್ಸ ನೀಡಲಾಗುವುದು. ಹಾಗೆಯೇ ರೈಲ್ವೇಯ ಶಾಲೆ ಹಾಗೂ ಕಾಲೇಜುಗಳ ಮೂಲಕ ಅವರ ಮಕ್ಕಳಿಗೆ ಶಿಕ್ಷಣ ನೀಡಲಾಗುವುದು. ಆ ನಂತರ ಇದರಲ್ಲಿ ನಾಲ್ಕು ಭಾಗ ಮಾಡಿರುವ ಕೆಲ್ಸಗಳು ಇವೆ. ಇನ್ನೂ ಗ್ರೂಪ್ D ನೌಕರಿಗೆ 18 ಸಾವಿರದಿಂದ ಸಂಬಳ ಶುರುವಾದರೆ ಅವರ ಹುದ್ದೆಗೆ ತಕ್ಕಂತೆ ಸಂಬಳವನ್ನು ನಿರ್ಧಾರ ಮಾಡಲಾಗುವುದು. ಇನ್ನೂ ಹೆಚ್ಚಿನ ವಿವರಣೆಗೆ ನಮ್ಮ ಲೇಖನದಲ್ಲಿ ಅಟ್ಯಾಚ್ ಮಾಡಿರುವ ವಿಡಿಯೋ ಸಂಪೂರ್ಣವಾಗಿ ಓದಿ.
( video credit : India Reports )