ಪ್ರೇಮಿಯೊಂದಿಗೇ ಓಡಿ ಹೋದ ಮಗಳು ಬದುಕಿರುವಾಗಲೇ ಅಂತ್ಯಸಂಸ್ಕಾರ ಮಾಡಿದ ತಂದೆ!
ಹೌದು ಗೆಳೆಯರೇ ನಿಮ್ಮನ್ನು ಹೆತ್ತು ಹೊತ್ತು ಸಾಕಿದ ತಂದೆ ಮತ್ತು ತಾಯಿಯರು ನಿಮ್ಮ ಬಗ್ಗೆ ಸಾವಿರ ಕನಸು ಇತ್ತು ಕೊಂಡಿರುತ್ತಾರೆ . ನಿಮ್ಮ ಮದುವೆ ಬಗ್ಗೆ ನೂರಾರು ಕನಸು ಕಂಡಿರುತ್ತಾರೆ . ನಿಮ್ಮ ಸ್ವಾರ್ಥಕೋಸ್ಕರ ನೀವು ನಿಮ್ಮನ್ನು ಹೆತ್ತು ಹೊತ್ತು ಸಾಕಿದ ತಂದೆ ಮತ್ತು ತಾಯಿಯರು ಯಾವ ರೀತಿ ಆಘಾತಕ್ಕೆ ಒಳಗಾಗುತ್ತಾರೆ ಎನ್ನುವುದನ್ನು ನೋಡದೆ ನೀವು ಪ್ರೀತಿ ಮಾಡಿದ ಹುಡುಗನ ಜೊತೆ ಯಾರಿಗೂ ಹೇಳದೆ ಓಡಿ ಹೋದರೆ ಅವರ ಮನಸಿಗೆ ಎಷ್ಟು ಕಷ್ಟ ಆಗ ಬಹುದು ಅಲ್ಲವಾ . ಏನಿದು ಘಟನೆ ನೋಡುವ ಬನ್ನಿ
ಈ ಘಟನೆಯು ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದೆ, ಮದುವೆಗೆ ಒಂದು ತಿಂಗಳ ಮೊದಲು ಹುಡುಗಿ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು.ಇದರಿಂದ ಕುಪಿತಗೊಂಡ ಕುಟುಂಬಸ್ಥರು ಈ ನಿರ್ಧಾರ ಕೈಗೊಂಡು ಯುವತಿ ಬದುಕಿರುವಾಗಲೇ ಆಕೆಯ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಕುಟುಂಬಸ್ಥರು ಯುವತಿಯಂತೆ ಪ್ರತಿಕೃತಿ ಮಾಡಿ , ಅದನ್ನು ದಹನ ಮಾಡಿದ್ದಾರೆ. ತಮ್ಮ ಮಗಳು ಮನೆ ಮತ್ತು ಸಮಾಜಕ್ಕಾಗಿ ಸತ್ತಿದ್ದಾಳೆ ಎಂದು ಹೇಳಿದ್ದಾರೆ.
ಇಲ್ಲಿ ಪ್ರಿಯಾಂಕಾ ಎಂಬ ಹುಡುಗಿ ತನ್ನ ಪ್ರೇಮಿ ನೀರಜ್ ಜೊತೆ ಓಡಿಹೋದಳು. ಇದರಿಂದ ಕೋಪಗೊಂಡ ತಂದೆ, ಸಹೋದರರು ಮತ್ತು ಸಂಬಂಧಿಕರು ಪ್ರಿಯಾಂಕಾಳ ಹೆಸರಲ್ಲಿ ಚಟ್ಟವನ್ನು ಹಿಂದೂ ಸಂಪ್ರದಾಯಗಳೊಂದಿಗೆ ಅಲಂಕರಿಸಿದರು ಮತ್ತು ಅದರ ಮೇಲೆ ಕುಶನ್ ಪ್ರತಿಮೆಯನ್ನು ಇರಿಸಿದ್ದಾರೆ. ನಂತರ ಹಿಂದೂ ಸಂಪ್ರದಾಯದಂತೆ ಸಹೋದರ ಸೇರಿದಂತೆ ಸಂಬಂಧಿಕರು ಪ್ರಿಯಾಂಕಾ ಅವರ ಪುತ್ಥಳಿಗೆ ದಹನ ಮಾಡಿ ಸಂಬಂಧ ಕಳೆದುಕೊಂಡಿದ್ದಾರೆ.
ಈ ವೇಳೆ ಸಹೋದರ ಪ್ರಶಾಂತ್ ಉತ್ರಿ ಧರಿಸಿ ಬೆಂಕಿ ಅಗ್ನಿ ಸ್ಪರ್ಶ ಮಾಡಿದ್ದಾರೆ. ಪ್ರಿಯಾಂಕಾ ತಂದೆ ಕಿಶೋರ್ ಸಿಂಗ್ ಅವರು ತಮ್ಮ ಮಗಳಿಗೆ ಉತ್ತಮ ವಿದ್ಯಾಬ್ಯಾಸ ಕೊಡಿಸಿದೆ. ಈಗ ಅವಳ ಮದುವೆಯನ್ನೂ ಒಳ್ಳೆಯ ಕುಟುಂಬದೊಂದಿಗೆ ನಿಶ್ಚಯ ಮಾಡಿದ್ದೆ. ಆದರೆ ಜೂನ್ 27ರಂದು ಪದವಿ ಅಂಕಪಟ್ಟಿ ತರುವ ನೆಪದಲ್ಲಿ ಪೂರ್ಣಿಯಾ ಕಾಲೇಜಿಗೆ ಹೋಗಿದ್ದು, ಅಲ್ಲಿಂದ ಚಂಪಾನಗರದ ನೀರಜ್ ಎಂಬಾತನ ಜತೆ ಪರಾರಿಯಾಗಿದ್ದಾಳೆ ಎಂದು ತಿಳಿಸಿದ್ದಾರೆ.ಈ ರೀತಿ ಹೋಗಬೇಕಾದರೆ ನನಗೆ ಮೊದಲೇ ಹೇಳಬೇಕಿತ್ತು. ನನ್ನ ಮರ್ಯಾದೆ ಕಳೆದಿದ್ದಾಳೆ. ಈಗ ನಮಗೂ ಅವಳಿಗೂ ಯಾವುದೇ ಸಂಬಂಧವಿಲ್ಲ. ಅದಕ್ಕಾಗಿಯೇ ತಮ್ಮ ಇಡೀ ಕುಟುಂಬದೊಂದಿಗೆ ಪ್ರಿಯಾಂಕಳ ಅಂತ್ಯಕ್ರಿಯೆಯನ್ನು ಜೀವಂತವಾಗಿರುವಾಗಲೇ ಮಾಡುತ್ತಿದ್ದೇವೆ ಎಂದು ತಿಳಿಸಿದರು