ಉಚಿತ ಮನೆ ನಿರ್ಮಿಸಿಕೊಳ್ಳಲು ಕಾರ್ಮಿಕರಿಗೆ ಅವಕಾಶ.! ಲೇಬರ್ ಕಾರ್ಡ್ ಇದ್ದರೆ ಸಾಕಂತೆ.!
ನಮಸ್ಕಾರ ಸ್ನೇಹಿತರೇ, ರಾಜ್ಯ ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕ ಕಾರ್ಡ್ ಅಂದರೆ, ಲೇಬರ್ ಕಾರ್ಡ್ ಹೊಂದಿರುವ ರಾಜ್ಯದ ಎಲ್ಲಾ ಕಾರ್ಮಿಕರಿಗೆ ಬಂಪರ್ ಸಿಹಿಸುದ್ಧಿ ನೀಡಲಾಗಿದ್ದು, ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಇಂದು ಅಧೀಕೃತವಾಗಿ ಸಭೆಯನ್ನ ನಡೆಸಿ ಎಲ್ಲಾ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.
ಹೌದು, ಕಾರ್ಮಿಕ ಇಲಾಖೆ ವತಿಯಿಂದ ಯಾರು ಲೇಬರ್ ಕಾರ್ಡ್ ನ್ನ ಹೊಂದಿದ್ದಾರೋ, ಅಂತಹವರಿಗೆ ಹಲವು ಸೇವೆ ಸೌಲಭ್ಯಗಳನ್ನ ಇದೀಗ ರಾಜ್ಯ ಸರ್ಕಾರ ಒದಗಿಸಿಕೊಡುತ್ತಿದ್ದು, ಎಲ್ಲಾ ಕಾರ್ಮಿಕರ ಅಭಿವೃದ್ಧಿಗಾಗಿ ಈಗಾಗಲೇ ಪ್ರತ್ಯೇಕ ಬಜೆಟನ್ನು ಕೂಡ ಮೀಸಲಿಡಲಾಗಿದ್ದು, ಸ್ವಂತ ಮನೆಯಿಲ್ಲದವರಿಗೆ, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರಿಗೆ ಹಾಗು ಸ್ವಂತ ಜಾಗವಿಲ್ಲದವರಿಗೆ, ಕಾರ್ಮಿಕ ಕಲ್ಯಾಣ ಮಂಡಳಿ ಇಲಾಖೆ ವತಿಯಿಂದ ವಸತಿ ಸೌಲಭ್ಯ (ಉಚಿತ ಮನೆ ಪಡೆದುಕೊಳ್ಳುವುದು) ನೀಡುವ ಬಗ್ಗೆ ಸಚಿವ ಸಂತೋಷ್ ಲಾಡ್ ಅವರು ಇಂದು ಅಧೀಕೃತವಾಗಿ ಸಭೆಯಲ್ಲಿ ತಿಳಿಸಿದ್ದು, ಲೇಬರ್ ಕಾರ್ಡ್ ಹೊಂದಿರುವವರು ಉಚಿತ ಮನೆ ಪಡೆದುಕೊಳ್ಳುವುದು, ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲಾತಿಗಳು ಏನು.? ಎಲ್ಲಿ ಅರ್ಜಿ ಸಲ್ಲಿಸುವುದು.? ವೆಬ್ ಸೈಟ್ ಲಿಂಕ್ ಯಾವುದು.? ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.
ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯು ಇದೀಗ ಎಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ, ಲೇಬರ್ ಕಾರ್ಡ್ ಹೊಂದಿರುವವರಿಗೆ ಹಲವು ಯೋಜನೆಗಳು, ಹಲವು ಸೇವೆಗಳು, ಸೌಲಭ್ಯಗಳನ್ನ ಒದಗಿಸಿಕೊಡುತ್ತಿದ್ದು, ಇದೀಗ ಕಾರ್ಮಿಕರಿಗೆ ವಸತಿ ಸೌಲಭ್ಯ, ಉಚಿತ ಮನೆ ನಿರ್ಮಿಸಿಕೊಳ್ಳಲು ಸಹಾಯಧನಕ್ಕೆ ಅರ್ಜಿಗಳನ್ನ ಕರೆಯಲಾಗಿದೆ. ಸುಲಭವಾಗಿ ಲೇಬರ್ ಕಾರ್ಡ್ ಹೊಂದಿರುವವರು, ಇದೀಗ ಕಾರ್ಮಿಕರಿಗೆ ವಸತಿ ಸೌಲಭ್ಯ, ಉಚಿತ ಮನೆ ನಿರ್ಮಿಸಿಕೊಳ್ಳಲು ಸಹಾಯಧನಕ್ಕೆ ಅರ್ಜಿಗಳನ್ನ ಕರೆಯಲಾಗಿದೆ. ಸುಲಭವಾಗಿ ಲೇಬರ್ ಕಾರ್ಡ್ ಹೊಂದಿರುವ ಪ್ರತೀಯೊಬ್ಬರೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ, ೪ ಲಕ್ಷ ರೂಪಾಯಿ ಮನೆ ನಿರ್ಮಿಸಿಕೊಳ್ಳಲು ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸುವ ವೇಳೆಯಲ್ಲಿ ಬೇಕಾಗುವ ದಾಖಲಾತಿಗಳು :- ಚಾಲ್ತಿಯಲ್ಲಿರುವ ನಿಮ್ಮ ಲೇಬರ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನ ಜೆರಾಕ್ಸ್, ಜಾತಿ ಮತ್ತು ಆದಾಯ ಪ್ರಮಾಣಪತ್ರ ಹಾಗು ನಿಮ್ಮ ಮೊಬೈಲ್ ಸಂಖ್ಯೆ ಬೇಕಾಗುತ್ತದೆ. ಹಾಗು ಅರ್ಜಿಯನ್ನ ಎಲ್ಲಿ ಸಲ್ಲಿಸುವುದು ಅಂದರೆ :- ಇನ್ನೆರಡು ದಿನದಲ್ಲಿ ಅಧೀಕೃತವಾಗಿ ಅರ್ಜಿ ಸಲ್ಲಿಸುವ ವೆಬ್ ಸೈಟ್ ಗೆ ಚಾಲನೆ ನೀಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮಾಹಿತಿ ತಿಳಿಸಿದ್ದಾರೆ.