ಎಲ್ಲಾ ರೈತರಿಗೂ 5 ಲಕ್ಷ ಶೂನ್ಯ ಬಡ್ಡಿ ಸಾಲ ಕೊಡಲು ಮುಂದಾದ ಸರಕಾರ..! ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಎಲ್ಲಾ ರೈತರಿಗೂ 5 ಲಕ್ಷ ಶೂನ್ಯ ಬಡ್ಡಿ ಸಾಲ ಕೊಡಲು ಮುಂದಾದ ಸರಕಾರ..! ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಕರ್ನಾಟಕದಲ್ಲಿ ಇದೀಗ ನೂತನ ಸರ್ಕಾರ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹೌದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸಾಕಷ್ಟು ಬದಲಾವಣೆಗಳು ಈಗಾಗಲೇ ಮುನ್ನುಡಿಗೆ ಬಂದಿವೆ ಎಂದು ಹೇಳಬಹುದು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನವೇ ಅವರು ಹೇಳಿದ ಪ್ರಕಾರ ಗ್ಯಾರಂಟಿ ಯೋಜನೆಗಳು ಒಂದೊಂದೇ ಇದೀಗ ನೆರವೇರುತ್ತಿವೆ. ಈ ಗ್ಯಾರೆಂಟಿ ಯೋಜನೆಗಳ ಕುರಿತು ರಾಜ್ಯದ ಕೆಲ ಜನತೆ ಇದರ ವಿರುದ್ಧ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.. ಆದ್ರೆ ಇನ್ನು ಕೆಲವರು ಈ ಗ್ಯಾರಂಟಿ ಯೋಜನೆಗಳು ನಮ್ಮಂತ ಬಡವರಿಗೆ ಉಪಯೋಗ ಆಗುತ್ತವೆ ಎಂಬುದಾಗಿ ಹೇಳಿಕೊಳ್ಳುತ್ತಿದ್ದಾರೆ.

ಹೌದು ಈಗ ಮತ್ತೆ ರಾಜ್ಯ ಸರ್ಕಾರದಿಂದ ಹೊಸ ಸುದ್ದಿ ಒಂದು ಹೊರಬಿದ್ದಿದ್ದು, ಈ ವಿಡಿಯೋ ಒಂದರಲ್ಲಿ ತಿಳಿದುಬಂದಿರುವ ಮಾಹಿತಿ ಪ್ರಕಾರ ಎಲ್ಲಾ ರೈತರಿಗೆ ಒಟ್ಟು ಐದು ಲಕ್ಷಕ್ಕೂ ಅಧಿಕ ಹಣವು ಸಾಲವಾಗಿ ಸಿಗಲಿದೆಯಂತೆ. ಈಗಾಗಲೇ ಸಾಲ ಇದ್ದವರು ಸಹ ಈ ಸಾಲವನ್ನು ಪಡೆಯಬಹುದು ಎಂದು ಈ ವಿಡಿಯೋ ಮೂಲಕ ತಿಳಿದುಬಂದಿದೆ. ಇದಕ್ಕಿಂತ ಮುಂಚೆ ಕಾಂಗ್ರೆಸ್ ಸರ್ಕಾರ ಅಕ್ಕಿ ಉಚಿತವಾಗಿ ಕೊಡುತ್ತಿದ್ದು, ಅಕ್ಕಿಯ ಅರ್ಧ ಹಣ ಈಗಾಗಲೇ ಕೆಲವರ ಖಾತೆಗೆ ಬಿದ್ದಿದೆಯಂತೆ ಹಾಗೂ ಗೃಹಲಕ್ಷ್ಮಿ ಯೋಜನೆಯೂ ಕೂಡ ಇಷ್ಟರಲ್ಲಿ ಹೊರಬರಲಿದೆ. ತಿಂಗಳಿಗೆ 2000 ಹಣ ಎಲ್ಲರಿಗೂ ಕೂಡ ಸಿಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜೊತೆಗೆ ಬಸ್ ಪ್ರಯಾಣ ಮಹಿಳೆಯರಿಗೆ ಫ್ರೀ ಆಗಿರುವುದು ಕೂಡ ನಿಮಗೆ ಗೊತ್ತು.   

ಇದೆಲ್ಲದರ ಜೊತೆಗೆ ರೈತರು ತುಂಬಾ ಕಷ್ಟದಲ್ಲಿದ್ದಾರೆ, ಅ ರೈತರಿಗೆ ಸಾಲ ನೀಡಬೇಕು ಅವರು ಎಂದಿಗೂ ಕೂಡ ಕೊರಗಬಾರದು ಎನ್ನುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಇದೀಗ ಹೊಸ ಮಂಡನೆಯ ಕೈಗೊಂಡಿದ್ದು 2023- 24 ರಲ್ಲಿ ರೈತರಿಗಾಗಿ ಹೊಸ ಮಂಡನೆಯನ್ನು ರಚಿಸಿದ್ದಾರೆ ಎಂದು ಕೇಳಿ ಬಂದಿದೆ..ಅದರ ಪ್ರಕಾರ ಯಾವುದೇ ಬಡ್ಡಿ ಇಲ್ಲದೆ ಬಡ್ಡಿ ರಹಿತ ಸಾಲವನ್ನು ರೈತರಿಗೆ ನೀಡಲು ಮುಂದಾಗಿದ್ದು, ರೈತರಿಗೆ ಒಟ್ಟು ಐದು ಲಕ್ಷ ಹಣ ಸಿಗಲಿದೆಯಂತೆ.. ಅದು ಹೇಗೆ, ಹಾಗೆ ಯಾವ ಬ್ಯಾಂಕಿನಲ್ಲಿ ಜೊತೆಗೆ ಯಾವ ದಾಖಲೆಗಳು ಈ ಹೊಸ ಯೋಜನೆಗೆ ಬೇಕು, ಹಾಗೆ ಸಾಲವನ್ನು ಪಡೆಯಲು ಯಾರೆಲ್ಲಾ ಅರ್ಹರಾಗಿರಬೇಕು ಎಂಬುದಾಗಿ ಎಲ್ಲವನ್ನು ತಿಳಿಯಲು ಈ ಲೇಖನದ ಕೊನೆಯಲ್ಲಿರುವ ಒಂದು ವಿಡಿಯೋವನ್ನು ನೋಡಿ. ಈ ಮಾಹಿತಿ ನಮಗೆ ಇದೆ  ವಿಡಿಯೋದಲ್ಲಿ ದೊರಕಿದ್ದು, ಇನ್ನೊಮ್ಮೆ ಪರಿಶೀಲಿಸಿ  ಮಾಹಿತಿಯನ್ನು ಖಚಿತಪಡಿಸಿಕೊಳ್ಳಿ. ಈ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.. ( video credit : ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ )