ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದರೂ ಕೂಡ ಈ ಕೆಲಸವನ್ನು ಮಾಡಲೇಬೇಕು..! ಇಲ್ಲ ಅಂದ್ರೆ ಹಣ ಬರಲ್ವಂತೆ

ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದರೂ ಕೂಡ ಈ ಕೆಲಸವನ್ನು ಮಾಡಲೇಬೇಕು..! ಇಲ್ಲ ಅಂದ್ರೆ ಹಣ ಬರಲ್ವಂತೆ

ಕರ್ನಾಟಕದಲ್ಲಿ ನೂತನವಾಗಿ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿಯೇ ಸಾಕಷ್ಟು ಯೋಜನೆಗಳನ್ನು ನೀಡುವುದಾಗಿ ಎಲೆಕ್ಷನ್ ಮುನ್ನವೇ ಒಟ್ಟು ಐದು ಗ್ಯಾರಂಟಿ ಕೊಡುತ್ತೇವೆ ಎಂದು ಮೊದಲೇ ಹೇಳಿಕೊಂಡಿತ್ತು. ತದನಂತರ ಅವರು ಹೇಳಿರುವ ಗ್ಯಾರಂಟಿ ಪ್ರಕಾರವೇ ಅವರು ಗೆದ್ದ ಬಳಿಕ ಕಾಂಗ್ರೆಸ್ ಸರ್ಕಾರದಿಂದ ಬಸ್ ಮಹಿಳೆಯರಿಗಾಗಿ ಉಚಿತ ಈಗ ಲಭಿಸಿದೆ. ಜೊತೆಗೆ ಕರೆಂಟ್ ಕೂಡ ಫ್ರೀ ಆಗಿ ಎರಡು ನೂರು ಯೂನಿಟ್ ಬರುತ್ತಿದೆ..ಆದರೆ ಇನ್ನು ಕೆಲ ಗ್ಯಾರಂಟಿಗಳು ಇಷ್ಟರಲ್ಲೇ ಚಾಲ್ತಿಗೆ ಬರಲಿದ್ದು ಎಲ್ಲರೂ ಕೂಡ ಇದೀಗ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ಹೌದು ಎಲ್ಲ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಿದರೆ ಅವರ ಖಾತೆಗೆ 2000 ಹಣ ಬರುವುದಾಗಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕೊಟ್ಟಿದ್ದು, ಅದೇ ರೀತಿ ಅಕ್ಕಿಯನ್ನು ಕೂಡ ಉಚಿತವಾಗಿ ನೀಡುತ್ತಿದೆ.

ಹೌದು ಅಕ್ಕಿ ಜೊತೆ ಹಣವನ್ನು ಕೂಡ ಕೊಡುವುದಾಗಿ ಆದೇಶ ಹೊರಬಂದಿದ್ದು, ಇದೀಗ ಯಾರೆಲ್ಲಾ ಖಾತೆಗಳಿಗೆ ಅಕ್ಕಿಯ ಹಣ ಬಂದಿದೆ ಅವರು ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದರೆ ಸಾಕು, ಅವರಿಗೆ ಅವರ ಖಾತೆಗೆ ಹಣ 2000 ಜಮಾ ಆಗಲಿದೆ ಎಂದು ತಿಳಿದುಬಂದಿದೆ. ಆದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಸಿದ ಇನ್ನೂ ಕೆಲ ಮಹಿಳೆಯರು ಈಗಲೆ ಈ ಕೆಲಸವನ್ನ ಮಾಡಲೇಬೇಕು. ನಿಮಗೆ ಅಕ್ಕಿಯ ಹಣ ಬರದೆ ಇದ್ದರೆ ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ್ದರೂ ಕೂಡ ನಿಮ್ಮ ಖಾತೆಗೆ 2,000 ಜಮಾ ಆಗುವುದಿಲ್ಲವಂತೆ. ಆದರೆ ಯಾರು, ಯಾವಾಗ, ಹೇಗೆ ಯಾವ ಕೆಲಸ ಮಾಡಿದರೆ ನಿಮ್ಮ ಖಾತೆಗೆ 2000 ಹಣ ಜಮಾ ಆಗಲಿದೆ ಗೊತ್ತಾ ಮುಂದೆ ಓದಿ.  

ಹೌದು ಗೂಗಲ್ ಮಾಹಿತಿ ಲಭ್ಯ ಪ್ರಕಾರ 2000 ಹಣ ನಿಮ್ಮ ಖಾತೆಗೆ ಬರಬೇಕು ಅಂದ್ರೆ, ಮನೆ ಯಜಮಾನಿಗೆ ಇದು ಸಿಗುತ್ತದೆ. ಹೌದು ಗೃಹಲಕ್ಷ್ಮಿ ಯೋಜನೆ ಪ್ರಕಾರ ನೀವು ಅರ್ಜಿ ಸಲ್ಲಿಸಿದ್ದರೂ ಕೂಡ ನಿಮ್ಮ ಆಧಾರ್ ಕಾರ್ಡ್ ನಂಬರ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯಾ ಎಂದು ಒಮ್ಮೆ ಪರಿಶೀಲಿಸಿ. ನಿಮ್ಮ ಬ್ಯಾಂಕ್ ಖಾತೆಯ ಆಧಾರ್ ಕಾರ್ಡ್ ಲಿಂಕ್ಗಾಗಿ ಬ್ಯಾಂಕಿಗೆ ಒಮ್ಮೆ ಭೇಟಿಕೊಟ್ಟು, ಎನ್ ಪಿ ಸಿ ಐ ಮಾಡಿಸಿ ಅಂದರೆ, ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ, ನಂತರ ನಿಮಗೆ ಗೃಹಲಕ್ಷ್ಮಿ ಯೋಜನೆಯ 2000 ಹಣ ನಿಮ್ಮ ಖಾತೆಗೆ ಜಮಾ ಆಗಲಿದೆ ಎಂದು ಗೂಗಲ್ ಮೂಲಕ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...

( video credit :  ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ )

ವಿಶೇಷ ಸೂಚನೆ : ಈ ಮಾಹಿತಿಯನ್ನು ಮತ್ತೊಮ್ಮೆ ಯೂಟ್ಯೂಬ್ ನಲ್ಲಿ ಪರಿಶೀಲಿಸಿ, ಇದು ನಮಗೆ ಯೂಟ್ಯೂಬ್ ಮೂಲಕವೇ ದೊರಕಿದಂತಹ ಮಾಹಿತಿ ಆಗಿದೆ. ತಪ್ಪದೆ ಇನ್ನೊಮ್ಮೆ ಪರಿಶೀಲಿಸಿ, ಶೇರ್ ಮಾಡಿ ಧನ್ಯವಾದಗಳು..