ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಅಪ್ಪನ ಅಂತ್ಯ ಕ್ರಿಯೆ ಮಾಡಿ ಎಂದಿದ್ದಕ್ಕೆ ಮಕ್ಕಳು ಹೇಳಿದ್ದೇನೆ ಗೊತ್ತಾ? ಕೇಳಿದರೆ ಶಾಕ್ ಆಗುತ್ತೀರಾ ಇಂತಹ ಮಕ್ಕಳು ಇರುತ್ತಾರಾ
ನಮ್ಮ ಸಮಾಜ ದಿನದಿಂದ ದಿನಕ್ಕೆ ಸ್ವಾರ್ಥಿಗಳ ಪ್ರಪಂಚ ಆಗಿ ಬದಲಾಗುತ್ತಿದೆ ಎಂದರೆ ತಪ್ಪಾಗಲಾರದು. ಮೊದಲೆಲ್ಲಾ ಕಷ್ಟ ಎಂದ ಕೂಡಲೇ ನೆರೆ ಗಿರೆಯ ಜನ ತಮ್ಮ ಕಷ್ಟದಂತೆ ಬಂದು ನಿಲ್ಲುತ್ತಿದ್ದ ಕಾಲ ಇತ್ತು. ಆದ್ರೆ ಇಂದು ದಿನ ಕಳೆಯುತ್ತಿದ್ದಂತೆ ನಮ್ಮವರೇ ನಮ್ಮ ಕಷ್ಟಕ್ಕೆ ಆಗದಂಥ ಕಾಲಕ್ಕೆ ನಾವು ಬಂದು ನಿಂತಿದ್ದೇವೆ. ಆದರೆ ಇನ್ನೂ ಕ್ರೂರತನ ಎಂದರೆ ತನ್ನ ಭವಿಷ್ಯವನ್ನು ಕಟ್ಟಿ ಕೊಟ್ಟ ತಂದೆ ತಾಯಿಯ ಕಷ್ಟಕ್ಕೆ ಮಕ್ಕಳು ಆಗದಂಥ ಕಾಲಕ್ಕೆ ನಾವು ಕಲಿತ್ತುದ್ದೇವೆ. ಹೌದು ಸ್ನೇಹಿತರೇ ನಾವು ಇಂತಹ ನೈಜ ಘಟನೆ ಬಗ್ಗೆ ಇಂದು ನಾವು ಹೇಳಲು ಹೊರಟಿದ್ದೇವೆ. ಆ ಘಟನೆಯ ಬಗ್ಗೆ ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.
ನೆನ್ನೆ ಪೊಲೀಸರು ಹೇಳಿರುವ ಹೇಳಿಕೆಯ ಪ್ರಕಾರ ತಮ್ಮ ಸ್ವಂತ ಮಕ್ಕಳೇ ಅಪ್ಪನನ್ನು ನೋಡಿಕೊಳ್ಳದೆ ಯಾವುದೋ ಲಾಡ್ಜ್ ನಲ್ಲಿ ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಹಾಗೆಂದು ಆತ ಬಡವ ಹಾಗೆಂದು ತಿಳಿಯಬೇಡಿ. ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕೆಲ್ಸ ಮಾಡುತ್ತಿದ್ದ ಆ ವ್ಯಕ್ತಿ ತನ್ನ ಮಕ್ಕಳನ್ನು ಸಾಕಲು ಬಹಳ ಕಷ್ಟ ಪಟ್ಟು ಕೆಲ್ಸ ಮಾಡಿ ಒಂದಿಷ್ಟು ಆಸ್ತಿಯನ್ನು ಮಾಡಿ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಒಂದಿಷ್ಟು ಹಣವನ್ನು ಕೊಡುತ್ತಿದ್ದ. ಆದರೆ ಇದೀಗ ಎಲ್ಲವನ್ನೂ ಮಾಡಿಸಿಕೊಂಡ ಮಕ್ಕಳು ತನ್ನ ಅಪ್ಪನ ಅನಾರೋಗ್ಯ ಸಮಸ್ಯೆ ಯಿಂದ ನೋಡಿಕೊಳ್ಳಲು ಆಗದೆ ಲಾಡ್ಜ್ ನಲ್ಲಿ ಬಿಟ್ಟು ಪರಾರಿ ಆಗಿದ್ದಾರೆ. ಇದೀಗ ಈ ವಿಚಾರ ಬೆಳಕಿಗೆ ಬಂದು ಆತನನ್ನು ವಿಚಾರಿಸಿ ತಮ್ಮ ಮಕ್ಕಳ ವಿವರ ತಿಳಿಸಿದಾಗ ಆ ಮಕ್ಕಳನ್ನು ಪೋಲಿಸರು ಸಂಪರ್ಕ ಮಾಡಿದಾಗ ಮಕ್ಕಳು ಹೇಳೋದೇ ಬೇರೆ.
ಈಗ ಪೊಲೀಸರ ವಶದಲ್ಲಿ ಇರುವ ವೃದ್ಧನ ಹೆಸರು "ಮೂಲಚಂದ್ರ ಶರ್ಮಾ" ಇವರಿಗೆ' 76' ವರ್ಷ ವಯಸ್ಸು. ಈತ ಮೂಲತಃ ಪೋಣಯವರು ಅಲ್ಲಿ "ಬ್ಯಾಂಕ್ ಮ್ಯಾನೇಜರ್" ಆಗಿ ಕೆಲ್ಸ ಮಾಡಿ ನಿವೃತ್ತಿ ಹೊಂದಿದ್ದವರು. ಇವರಿಗೆ "ಪಾಶು ವಾಯು" ಸಮಸ್ಯೆ ಇಂದ ಬಳಲುತ್ತಿದ್ದವರು. ಆದರೆ ತಮ್ಮ ಮಕ್ಕಳನ್ನು ವಿದೇಶ ದಲ್ಲಿ ಇರಿಸಿದ್ದ ಕಾರಣ ಈತ ಒಬ್ಬಂಟಿಯ ಜೀವನವನ್ನು ನಡೆಸುತ್ತಿದ್ದರು. ಮಕ್ಕಳು ಒಬ್ಬ ನರ್ಸ್ ಅವರನ್ನು ನೇಮಕ ಮಾಡಿ ಇರಿಸಿದ್ದರು. ಚಿಕಿತ್ಸೆಗೆಂದು ಇವರನ್ನು ಆ ನರ್ಸ್ ಜೊತೆ ನಗರಬೋನ್ನೇಳಿ ಗ್ರಾಮಕ್ಕೆ ಬಂದಿದ್ದರು. ಅಲ್ಲಿ ಒಂದು ಲಾಡ್ಜ್ ನಲ್ಲಿ ತಂಗಿದ್ದರು. ಇದ್ದಕ್ಕಿದಂತೆ ಇವರೋಟ್ಟಿಗೆ ಇದ್ದ ನರ್ಸ್ ಕೂಡ ಪರಾರಿ ಆಗಿದ್ದಾರೆ. ಆಗ ಲಾಡ್ಜ್ ಸಿಬ್ಬಂದಿ ಪೋಲಿಸರ ಮೊರೆ ಹೋದಾಗ ಆಗ ಪೊಲೀಸ್ ಅವರು ಈ ವೃದ್ಧನ ಮಕ್ಕಳ ಬಗ್ಗೆ ವಿಚಾರಿಸಿ ಅವರನ್ನು ಸಂಪರ್ಕ ಮಾಡಿದಾಗ ಆ ಮಕ್ಕಳು ನಿಮಗೆ ಆದರೆ ಅವರ ಅಂತ್ಯ ಕ್ರಿಯೆ ಮಾಡಿ ಇಲ್ಲದಿದ್ದರೆ ಅವರನ್ನು ಯಾವುದಾದರು ಬೀದಿಗೆ ಬಿಟ್ಟು ಹೋಗಿ ಎಂದು ತಿಳಿಸಿ ಕರೆಯನ್ನು ಕಟ್ ಮಾಡಿದ್ದಾರಂತೆ. ಈ ವಿಚಾರವನ್ನು ಪೊಲೀಸರು ವರದಿ ಮಾಡಿ ಒಂದು ಸಂದೇಶವನ್ನು ತಿಳಿಸಿದ್ದಾರೆ. ಅದೇನೆಂದರೆ ತಮ್ಮ ಮಕ್ಕಳ ಭವಿಷ್ಯವನ್ನು ಕಟ್ಟಲು ಹೋಗಿ ತಮ್ಮ ಮುಂದಿನ ದಿನಗಳನ್ನು ಮರೆಯಬೇಡಿ ಎಂದು ತಿಳಿಸಿದ್ದಾರೆ. ( video credit : third eye )