ಅಡುಗೆ ಎಣ್ಣೆ ಮತ್ತೆ ಬೆಲೆ ಏರಿಕೆ !! ಕಂಗಾಲದ ಜನರು!!

ಎಣ್ಣೆ ರೇಟು ಮತ್ತೆ ಜಾಸ್ತಿ ಆಗಿದೆ ಕಣ್ರಿ ಹಂಗಂತ ಇದು ಕಿಕ್ಕೇರಿಸೋ ಎಣ್ಣೆ ಅಲ್ಲ ಮನೆಯಲ್ಲಿ ಅಡುಗೆ ಮಾಡೋ ಕೈಗಳು ಬಳಸುವಂತಹ ಎಣ್ಣೆ ಆದರೂ ಏರ್ತಾ ಇರುವಂತಹ ರೇಟು ರುಚಿ ರುಚಿಯಾದ ಊಟದ ಕಿಕ್ಕಿಳಿಸ್ತಾ [ಸಂಗೀತ] ಇದೆ ಬಸ್ ಟಿಕೆಟ್ ಆಯ್ತು ಮೆಟ್ರೋ ಟಿಕೆಟ್ ಆಯ್ತು ವಾಟರ್ ಬಿಲ್ ಹೈಕ್ ಆಗ್ತಿದೆ ಮೊದಲೇ ರೇಟ್ ಜಾಸ್ತಿಯಾಗಿರೋ ಹಾಲಿನ ದರವು ಜಾಸ್ತಿ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯೇ ಬಡಜನ ಹಾಗೂ ಮಧ್ಯಮ ವರ್ಗದ ಜನರಿಗೆ ಆಘಾತ ಕೊಡುತ್ತಿದೆ ಈಗ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿ ಗೃಹಣಿಯರಿಗೆ ಶಾಕ್ ಕೊಟ್ಟಿದೆ ಕಳೆದ ಒಂದು ತಿಂಗಳಿಂದ ಖಾದ್ಯ ತೈಲ ರೂಪಾಯಿ ಲೆಕ್ಕದಲ್ಲಿ ಏರಿಕೆಯಾಗುತ್ತಿದೆ ಒಂದು
ತಿಂಗಳ ಹಿಂದಿನ ಬೆಲೆಗೂ ಈಗಿನ ಬೆಲೆಗೂ 10 ರೂಪಾಯಿ ಏರಿಕೆಯಾಗಿದೆ ಇದೆ ಇದಿಷ್ಟು ಅಡುಗೆ ಎಣ್ಣೆ ಕಥೆಯಾದರೆ ತೆಂಗಿನಕಾಯಿ ಎಣ್ಣೆಯು ಕೂಡ ದುಬಾರಿಯಾಗಿದ್ದು ಮಾರುಕಟ್ಟೆಯಲ್ಲಿ ಒಂದು ಕೆಜಿ ತೆಂಗಿನಕಾಯಿ ಎಣ್ಣೆಗೆ 320 ರೂಪಾಯಿ ಇದೆ ಸನ್ ಪ್ಯೂರ್ ಅಡುಗೆ ಎಣ್ಣೆಯ ಹಳೆಯ ದರ 133 ಇದ್ದು ಹೊಸ ದರ 143 ಆಗಿದೆ ಗೋಲ್ಡ್ ವಿನ್ನರ್ ಹಳೆಯ ದರ 136 ಹೊಸ ದರ 146 ಏರಿಕೆಯಾಗಿದೆ ಇನ್ನು ರುಚಿ ಗೋಲ್ಡ್ ಹಳೆಯ ದರ 98 ಇದ್ರೆ ಹೊಸ ದರ 100 33 ರೂಪಾಯಿ ಜಾಸ್ತಿಯಾಗಿದೆ ಜಮೀನಿ ಅಡುಗೆ ಎಣ್ಣೆ ಮೊದಲು 140 ಇತ್ತು ಈಗ 155 ರೂಪಾಯಿ ಹೆಚ್ಚಾಗಿದೆ ಇಮಾಮಿ ಎಣ್ಣೆ ಹಳೆ ದರ ಕೆಜಿ ಗೆ 135 ರೂಪಾಯಿ ಇತ್ತು ಈಗ 145 ರೂಪಾಯಿ ಆಗಿದೆ ಫ್ರೀಡಂ ಆಯಿಲ್ ಮೊದಲು 130 ಇತ್ತು ಹೊಸ ದರದಲ್ಲಿ 144 ರೂಪಾಯಿ
ಆಗಿದೆ ಯಾಕೆ ಅಂತಂದ್ರೆ ಸನ್ ಫ್ಲವರ್ ಎಲ್ಲಾ ಮೊದಲೆಲ್ಲ ಕಮ್ಮಿ ಇದ್ದಾಗ ಫ್ಲೋಟಿಂಗ್ ಜಾಸ್ತಿ ಇತ್ತು ಕ್ವಾಂಟಿಟಿ ಜಾಸ್ತಿ ತಗೊಳ್ತಾ ಇದ್ರು ಇವಾಗ ರೇಟ್ ಜಾಸ್ತಿ ಆದಾಗ ಸ್ವಲ್ಪ ಕ್ವಾಂಟಿಟಿನು ಕಮ್ಮಿ ಕಸ್ಟಮರ್ ಕಮ್ಮಿ ಎನ್ಕ್ವೈರಿ ಮಾಡ್ತಾರೆ ರೇಟ್ ಕೇಳ್ತಾರೆ ವಾಪಸ್ ಹೋಗ್ತಾರೆ ಇವಾಗ ಸಂಸಾರ ಮಾಡೋದೇ ಕಷ್ಟ ಇದೆ ಈ ದುಬಾರಿ ದುನಿಯಾದಲ್ಲಿ ಜೀವನ ಮಾಡೋದು ಎಷ್ಟು ತುಂಬಾ ಸಮಸ್ಯೆ ಇದೆ ಅದರಲ್ಲೂ ಕೂಡ ಇದು ಆಯಿಲ್ ಎಲ್ಲಾ ಅಡುಗೆಗೂ ಬೇಕೇ ಬೇಕು ಅಂತದ್ರಲ್ಲಿ ಇದನ್ನ ಹೈಕ್ ಮಾಡೋದ್ರಿಂದ ಸಾಮಾನ್ಯ ಜನಗಳಿಗೆ ಬಡವರಿಗೆ ಮಧ್ಯಮ ವರ್ಗದವರಿಗೆ ತುಂಬಾ ಹೊಡೆತ ಬೀಳುತ್ತೆ ಸರ್ ಒಟ್ಟಿನಲ್ಲಿ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಜಾಸ್ತಿ ಆಗ್ತಿರೋದು ಜನರ ಚಿಂತೆ ಹೆಚ್ಚು ಮಾಡ್ತಿದೆ ಇದೇ ರೀತಿ ರೇಟು ಹೈಕ್ ಮಾಡಿ ಅಡುಗೆ ರುಚಿ ಕಡಿಮೆ ಮಾಡಬೇಡ್ರಪ್ಪ