"ಚಂದ್ರಯಾನ 3" ಕ್ರೆಡಿಟ್ ಪೈಟ್ ಶುರುಮಾಡಿದ ಕಾಂಗ್ರೆಸ್ ಹಾಗೂ ಬಿಜೆಪಿ! ಇವ್ರು ಹೇಳೋದು ಏನು ಗೊತ್ತಾ?

ನಮ್ಮ ಭಾರತದ ಹಿರಿಮೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಎಂದರೆ ತಪ್ಪಾಗಲಾರದು. ದಿನ ಕಳೆಯುತ್ತಿದ್ದಂತೆ ನಮ್ಮ ಕಾಲ ಬಹಳ ಇನ್ಸ್ಟಂಟ್ ಆಗುತ್ತಾ ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಎಂದ್ರೆ ಸೈನ್ಸ್ ಹಾಗೂ ಟೆಕ್ನಾಲಜಿ. ಈ ಎರಡು ಕ್ಷೇತ್ರಗಳಲ್ಲಿ ಮಾಡಿದ ಒಂದು ಸಣ್ಣ ಬದಲಾವಣೆ ನಮ್ಮ ದಿನಚರಿಯ ಶೈಲಿಯಲ್ಲಾಗಲಿ ಅಥವಾ ದೊಡ್ಡ ದೊಡ್ಡ ಬದಲಾವಣೆಗಳನ್ನು ಕೂಡ ತಂದುಕೊಡುತ್ತದೆ. ಇದೀಗ ನಮ್ಮ ಭಾರತದವರು ಸದ್ಯದ ಸ್ಥಿತಿಯಲ್ಲಿ ಆರ್ಥಿಕವಾಗಿ ಪ್ರಗತಿ ಹೊಂದು ತಿರುವುದಕ್ಕೆ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ  ಏಕಕಾಲದಲ್ಲಿ ಆಗುತ್ತಿರುವ ಬದಲಾವಣೆಗಳು ಕಾರಣ ಎಂದರೆ ತಪ್ಪಾಗಲಾರದು . ಈ ಬದಲಾವಣೆಗಳು ಹೀಗೆ ಮುಂದುವರಿಯಬೇಕು ಎಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ  ಪ್ರಯೋಗಾಲಯಗಳು, ಇಂಡಿಯನ್ ಇನ್ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ, ಆಟೋಮಿಕ್ ಎನರ್ಜಿ ಕಮಿಷನ್ ಎಂದು ಸಾಕಷ್ಟು ಸಂಸ್ಥೆಗಳು  ಸ್ಥಾಪನೆ ಮಾಡಿದ್ದಾರೆ.

ಈ ಬದಲಾವಣೆಗಳಿಂದ ನಮ್ಮ ಭಾರತದ ದೇಶದಲ್ಲಿ 140ಕ್ಕೂ ಹೆಚ್ಚು ಪ್ರಯೋಗಾಲಯಗಳು ಸ್ಥಾಪನೆ ಆಗಿರುವುದು ನಮ್ಮ ಹೆಮ್ಮೆ. ಈ ಸಂಸ್ಥೆಯ ವತಿಯಿಂದ ಸಾರ್ಕ್ ದೇಶಗಳಿಗೂ ಕೂಡ ನಮ್ಮ ದೇಶದವರಿಂದ  ಸಹಾಯದಿಂದ ತಮ್ಮ ಪ್ರಯೋಗವನ್ನು ನಡೆಸುತ್ತಿದೆ. ಇನ್ನೂ ನಮ್ಮ ವಾತಾವರಣದಲ್ಲಿ ಆಗುವ  ಹವಮಾನ ಬದಲಾವಣೆಗಳನ್ನು ಸೇರಿದಂತೆ ವಿವಿಧ ವಲಯಗಳಿಗೂ ಕೊಡ  ಭಾರತದ ವಿವಿಧ ದೇಶಗಳು ಸ್ಯಾಟಲೈಟ್ ಗಳ ಸಹಾಯದಿಂದ ಬೇಕಾಗಿರುವ ಎಲ್ಲಾ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುವುದನ್ನ ನಾವು ಗಮನಿಸಬಹುದಾಗಿದೆ. ಹಾಗೆಯೇ ಇತ್ತೀಚೆಗೆ ಚಂದ್ರಯಾನ 3 ಸಕ್ಸಸ್ ಲ್ಯಂದಿಗ್ ನಿಂದಾ ನಮ್ಮ ಭಾರತ ದೇಶಕ್ಕೆ ಮತ್ತಷ್ಟು ಪ್ರತಿಷ್ಠೆ ಹೆಚ್ಚಾಗಿದೆ.   

ಇನ್ನೂ "ಚಂದ್ರಯಾನ 3" ಸಕ್ಸಸ್ ಲ್ಯಂಡಿಗ್ ಕಾರಣದಿಂದ ನಮ್ಮ ದೇಶ ಅಲ್ಲದೆ ಪರ ದೇಶದವರು ಕೂಡ ಇಸ್ರೋ ವಿಜ್ಞಾನಿಗಳಿಗೆ ಪ್ರಶಂಶೆ ಹಾಗೂ ಶುಭಾಶಯವನ್ನು ಕೊರುತ್ತಿರುವ ಸಂಧರ್ಭದಲ್ಲಿ. ಈ ವಿಚಾರಕ್ಕೆ ನಮ್ಮ ಭಾರತದ ದೇಶವನ್ನು ಆಡಳಿತ ಮಾಡುತ್ತಿರುವ ರಾಜಕಾರಣಿಗಳ ಮದ್ಯೆ ಗದ್ದಲ ಉಂಟಾಗಿದೆ. ಈ ರಾಜಕಾರಣಿಗಳು ಇಸ್ರೋ ಅವರ ಪರಿಶ್ರಮವನ್ನು ಮರೆತು ಚಂದ್ರಯಾನ 3 ಸಕ್ಸಸ್ ಲ್ಯಾಂಡಿಂಗ್ ಕ್ರೆಡಿಟ್ ತಮ್ಮ ತಮ್ಮ ಪಕ್ಷದ ನಾಯಕರಿಗೆ ಸೇರಬೇಕು ಎಂದು ಕಿತ್ತಾಡುತ್ತಿದ್ದಾರೆ. ಇತ್ತ "ಕಾಂಗ್ರೆಸ್" ಅವರು ನಾವು ಇಸ್ರೊ ವಿಜ್ಞಾನಿಗಳ ಸಂಪರ್ಕದಲ್ಲಿ ಇದ್ದೆವು ಅವರಿಗೆ ಬೇಕಾದ ಹಾಗೆ ನಾವು ಅವಕಾಶಗಳನ್ನು ಕಲ್ಪಿಸಿಕೊಟ್ಟ ಕಾರಣ ಈ ಸಕ್ಸಸ್ ಪಡೆಯಲು ಸಾಧ್ಯ ಎಂದರೆ ಇತ್ತಾ  ಬಿಜೆಪಿ ಅವರು ನಮ್ಮ "ಮೋದಿ" ಅವರು ಇದ್ದ ಕಾರಣ ಈ ಯಶಸ್ಸು ಪಡೆಯಲು ಸಾಧ್ಯವಾಗಿದೆ ಎಂದು ಬೀಗುತ್ತಿದ್ದಾರೆ. ಇದರಲ್ಲಿ ಯಾವ ರಾಜಕಾರಣಿಗಳಲ್ಲಿ ಯಾವ ಸಹಾಯ ಇಲ್ಲದಿದ್ದರೂ ಕೇವಲ ಪ್ರತಿಷ್ಠೆಗೆ ಹೆಸ್ರು ಪಡೆಯಲು ಕಿತ್ತಾಡುತ್ತಿರುವ ಕಾರಣ ಎಲ್ಲರ ಎದುರು ಚಿಕ್ಕವರಾಗುವಂತೆ   ಮಾಡಿಕೊಳ್ಳತ್ತಾ ಇದ್ದಾರೆ ಎಂದರೆ ತಪ್ಪಾಗಲಾರದು.