ಫ್ರೀ ಬಸ್ ಕಂಡಕ್ಟರ್ ನ ಮುಸ್ಲಿಂ ಟೋಪಿ ತೆಗೆಸಿದ ಮಹಿಳೆ, ಇದು ಸರೀನಾ ತಪ್ಪಾ ನಿಮ್ಮ ಅನಿಸಿಕೆಯನ್ನು ತಿಳಿಸಿ
ಬಿಎಂಟಿಸಿ ಬಸ್ಸಿನಲ್ಲಿ ಸಂಚರಿಸುವ ವೇಳೆ ಮಹಿಳೆಯೊಬ್ಬರು ಕರ್ತವ್ಯದ ವೇಳೆ ಕಂಡಕ್ಟರ್ ಟೋಪಿ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅದನ್ನು ತೆಗೆಸಿರುವ ಘಟನೆ ನಡೆದಿದೆ.ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಮಹಿಳೆ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಕಂಡಕ್ಟರ್ಗೆ ಹೇಳುತ್ತಿರುವುದು ಕಂಡು ಬರುತ್ತದೆ. ಬಿಎಂಟಿಸಿ ಅಧಿಕಾರಿಗಳು ಹೇಳುವ ಪ್ರಕಾರ ಸುಮಾರು 10-12 ದಿನಗಳ ಹಿಂದೆ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ನಿರ್ವಾಹಕನಿಗೆ ಕರ್ತವ್ಯದ ವೇಳೆ ಟೋಪಿ ಧರಿಸಲು ನಿಮಗೆ ಅನುಮತಿ ಇದೆಯಾ ಎಂದು ಮೊದಲಿಗೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಕಂಡಕ್ಟರ್ ಧರಿಸಬಹುದು ಧರಿಸದೆ ಇರಬಹುದು ಎಂದು ಹೇಳಿದ್ದಾರೆ.
ನೀವು ಸರ್ಕಾರಿ ಅಧಿಕಾರಿಯಾಗಿದ್ದು, ಧರ್ಮವನ್ನು ಮನೆಯಲ್ಲಿ ಪಾಲಿಸಬೇಕು ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲ ಎಂದು ಹೇಳುತ್ತಾರೆ. ಅದಕ್ಕೆ ಪ್ರತಿಯಾಗಿ ನಾನು ಹಲವು ವರ್ಷಗಳಿಂದ ಧರಿಸುತ್ತಿದ್ದೇನೆ ಎಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಮಹಿಳೆ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳುತ್ತಾರೆ.
ವಾಟ್ಸಾಪಲ್ಲಿ ನೋಡ್ದೆ. ಆ ಮಹಿಳೆಯ ಹೃದಯದಲ್ಲಿ ತುಂಬಿದ ಕೋಮು ವಿಷದ ತೀವ್ರತೆಯನ್ನು ಅಳೆಯುವ ಯಂತ್ರವೊಂದಿದ್ರೆ ಅದರ ಮುಳ್ಳುಗಳೇ ಒಡೆದುಹೋಗುತ್ತಿದ್ವೆನೋ?. ಕುಂಕುಮ, ಮಾಲೆಗಳನ್ನು ಧರಿಸುವಂತೆ ಟೋಪಿಗೂ ಅವಕಾಶವಿದೆಎಂದಾಗಿದೆ ನನ್ನ ಭಾವನೆ. ಏನಿದ್ದರೂ ವಿಷ ಕಾರುತ್ತಿರುವ ಮಹಿಳೆಯ ಮುಂದೆಯೂ ಸೌಮ್ಯವಾಗಿ ನಡೆದುಕೊಂಡ ನಿರ್ವಾಹಕರಿಗೆ ನನ್ನದೊಂದು ಸಲಾಂ pic.twitter.com/RFaIXGuq3M
— Mohamed Haneef (@Mohamed47623244) July 11, 2023