ಹೊಸ ರೇಶನ್ ಕಾರ್ಡ್ಗೆ ನೀವೂ ಅರ್ಜಿ ಹಾಕಬೇಕಾ..? ಅದು ಯಾವಾಗ ಎಂದು ನೀವೇ ನೋಡಿ

ಹೊಸ ರೇಶನ್ ಕಾರ್ಡ್ಗೆ ನೀವೂ ಅರ್ಜಿ ಹಾಕಬೇಕಾ..? ಅದು ಯಾವಾಗ ಎಂದು ನೀವೇ ನೋಡಿ

: ಕಳೆದ ಆರು ಏಳು ತಿಂಗಳ ಹಿಂದೆಯೆ ಅಂದ್ರೆ ಈಗ ಮುಂಬರುವ ವಿಧಾನಸಭಾ ಚುನಾವಣೆಗೂ ಮುಂಚಿತ ಕೆಲವರು ಅವರವರ ಹೊಸ ರೇಷನ್ ಕಾರ್ಡ್​​ಗೆ ಅರ್ಜಿ ಹಾಕಿದ್ದಾರೆ. ಒಟ್ಟು 2.95 ಲಕ್ಷ ಹೊಸ ರೇಶನ್ ಕಾರ್ಡ್ ಅರ್ಜಿ ಬಂದಿದ್ದು ಅವುಗಳ ಪರಿಶೀಲನೆ ಮಾಡಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಬರುತ್ತಿದ್ದಂತೆ ಅವರು ಹೇಳಿದ್ದ ಗ್ಯಾರಂಟಿ ಯೋಜನೆಗಳು ಈಗ ಒಂದೊಂದೇ ಜಾರಿಗೆ ಬರುತ್ತಿದ್ದಂತೆಯೇ ಹೊಸ ಅಕ್ಕಿ ಗೋದಿ ಕಾರ್ಡ್​​ ಕೊಡುವುದು ಯವಾಗೆಂದು ಕೆಲವರು ರಾಜ್ಯದಲ್ಲಿಯ ಈಗಿನ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಹೀಗಿರುವ ವೇಳೆಯೇ ಹೊಸದಾಗಿ ಎಪಿಎಲ್​ ಕಾರ್ಡ್​​ ಮತ್ತು ಬಿಪಿಎಲ್ ಕಾರ್ಡ್​​ ಹಾಗೇನೇ ಈಗಿರುವ ಹಳೆಯ ರೇಷನ್​ ಕಾರ್ಡ್​​ನ್ನ್ನು ಏನಾದ್ರೂ ತಿದ್ದುಪಡಿ ಮಾಡಲು ಅವಕಾಶ ನೀಡುತ್ತದೆಯೇ ಹಾಗೂ ಸರ್ಕಾರ ಅನುಮತಿ ನೀಡುತ್ತಾ ಎಂದೆಲ್ಲಾ ಹಲವರ ಪ್ರಶ್ನೆಗಳು ಕೇಳಿ ಬಂದಿದ್ದು ಅ ಪ್ರಶ್ನೆಗಳು ಈಗಲೂ ಹಲವರನ್ನು ಹೆಚ್ಚು ಕಾಡುತ್ತಿದೆ ಎಂದು ತಿಳಿದುಬಂದಿದೆ. ರಾಜ್ಯ ಸರ್ಕಾರ ನೀಡಿರುವ ಎಲ್ಲಾ ಗ್ಯಾರಂಟಿ ಯೋಜನೆ ಜಾರಿ ಮಾಡುವ ಹಂತದಲ್ಲಿ ಹೆಚ್ಚು ಪ್ರಾಮುಕ್ಯತೆ ಈ ರೇಷನ್​ ಕಾರ್ಡ್​ ಹೋಲ್ಡರ್​ಗಳಿಗೆಯೇ ಇದೆ. ಮತ್ತು ಈ ಗೃಹಲಕ್ಷ್ಮಿ ಯೋಜನೆಯಲ್ಲಿ ರೇಷನ್​ ಕಾರ್ಡ್​ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ.

ಇದರಿಂದಲೆ ಹಲವರು ತಮ್ಮ ಹೊಸ ರೇಷನ್​ ಕಾರ್ಡ್​​​ ಮಾಡಿಸಲು ಸಜ್ಜಾಗಿ ಅರ್ಜಿ ಹಾಕಲು ಹೆಚ್ಚು ಕಾದುಕುಳಿತ್ತಿದ್ದಾರೆ. ಜೊತೆಗೆ ರೇಶನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರು ಕಾರ್ಡ್ ಯಾವಾಗ ಕೊಡ್ತಾರೆ ಅಂತ ಪ್ರಶ್ನೆ ಸಲ್ಲಿಸಿದರೆ, ರೇಶನ್ ಕಾರ್ಡ್ ಹೊಂದಿರದ ಕೆಲವರು ನಾವೀಗ ಏನು ಮಾಡ್ಬೇಕು ಅಂತ ಯೋಚಿಸುತ್ತ ಅತ್ತ ಸರ್ಕಾರವನ್ನೆ ಪ್ರಶ್ನಿಸುತ್ತಿದ್ದಾರೆ. ಇದೆಲ್ಲದರ ನಡುವೆ ಅತ್ತ ಆಹಾರ ಇಲಾಖೆಯು ಹೊಸ ರೇಶನ್ ಕಾರ್ಡ್ ಅರ್ಜಿಗೆ ಹಾಗೂ ತಿದ್ದುಪಡಿ ಹಾಗೂ ಅಪ್ಡೇಟ್ ಎಲ್ಲಾ ಆಪ್ಷನ್ ಅನ್ನು ಸ್ಟಾಪ್ ಮಾಡಿದ್ದು ತಡೆ ಹಿಡಿದಿದೆ. ಇದೆಲ್ಲವೂ ಸರ್ಕಾರದ ಆದೇಶದ ಮೇರೆಗೆ ಆಹಾರ ಇಲಾಖೆ ಈ ಆಪ್ಷನ್ ಅನ್ನು ನಿಲ್ಲಿಸಿದೆ ಎಂದು ಕೇಳಿ ಬರುತ್ತಿದ್ದು ಅತ್ತ ಕೆಲವರು ಸಹಾಯವಾಣಿ ಮೂಲಕ ಫೋನ್ ಮಾಡಿ ಯಾವಾಗ ಹೊಸ ಕಾರ್ಡ್ ಗೆ ಅರ್ಜಿ ಅವಕಾಶ ಕೊಡ್ತೀರ  ಅಂಥ ಪ್ರಶ್ನಿಸುತ್ತಿದ್ದಾರಂತೆ.   

ಇದಕ್ಕೆ ಉತ್ತರವಾಗಿ ಆಹಾರ ಇಲಾಖೆ, ಈಗಾಗಲೇ ಬಂದಿರುವ ರೇಶನ್ ಕಾರ್ಡ್ ಅರ್ಜಿಯ ಪರಿಶೀಲನೆ ನಡೆದಿದೆ ಎಂದು ಹೇಳಿದ್ದು ಈ ಕುರಿತು ಹೆಚ್ಚುವರಿ ನಿರ್ದೇಶಕ ಆಗಿರುವ ಆಹಾರ ಇಲಾಖೆಯ ಜ್ಞಾನೇಂದ್ರ ಕುಮಾರ್ ಎಂಬುವವರು ಆ ಎಲ್ಲಾ ಅರ್ಜಿಗಳ ಪರಿಶೀಲನೆ ಮಾಡುತ್ತೇವೆ ಎಂದಿದ್ದು ಖಚಿತ ಪಡಿಸಿದ್ದಾರೆ ಎನ್ನಲಾಗಿದೆ. ಕೇಂದ್ರ ಸರ್ಕಾರದ ಆಹಾರ ಕಾಯ್ದೆಯಡಿಯಲ್ಲಿ ಬರುವ ನಮ್ಮ ರಾಜ್ಯದಲ್ಲಿ 1 ಕೋಟಿ 28 ಲಕ್ಷ ಕಾರ್ಡ್ ಗಳು ಬಿಬಿಪಿಎಲ್ ಬಳಕೆದಾರರು ಆಗಿದ್ದು, ಹಾಗೇನೇ 4 ಕೋಟಿ 42 ಲಕ್ಷದಷ್ಟು ಫಲಾನುಭವಿಗಳು ಇದ್ದಾರೆ ಎಂದು ತಿಳಿದುಬಂದಿದೆ. ಹಾಗೇನೇ ಈಗ ಹೊಸದಾಗಿ ಮತ್ತೆ ರೇಶನ್ ಕಾರ್ಡ್​ ಕೊಡಬೇಕು ಅಂದ್ರೆ ಆ ಎಲ್ಲಾ ಖರ್ಚನ್ನು ಈಗಿರುವ ರಾಜ್ಯ ಸರ್ಕಾರವೇ ಕೊಡಬೇಕು. ಹಾಗಾಗಿ ಈಗ ಅರ್ಜಿ ಹಾಕಬೇಕು ಎನ್ನುತ್ತಿರುವ ಹೊಸಬರ ಅರ್ಜಿಗಳನ್ನು ಸ್ವೀಕಾರ ಮಾಡಲು ತಡ ಮಾಡುತ್ತಿದ್ದಾರೆ ಎಂಬೆಲ್ಲ ಮಾತುಗಳು ಹೊರಬಿದ್ದಿವೆ. ಇದೆಲ್ಲವ್ನೂ ನೋಡಿದರೆ ನೀವೀಗ ಹೊಸ ಅರ್ಜಿಯನ್ನ ಹಾಕಬೇಕು ಅಂದ್ರೆ ಸದ್ಯಕ್ಕೆ ಆ ಅವಕಾಶ ಸಿಗುವುದು ಸ್ವಲ್ಪ ತಡವೆ ಎಂದೆನಿಸುತ್ತದೆ..


ಇನ್ನು, ಗೃಹಲಕ್ಷ್ಮಿ ಯೋಜನೆಯೂ ಜಾರಿಗೆ ಬಂದಮೇಲೆ ಇನ್ನೂ ಕೆಲವರು ಎಪಿಎಲ್​ ಕಾರ್ಡ್​ ಆದ್ರೂ ನಮಗೆ ಕೊಡಿ, ನಾವು ಯೋಜನೆ ಫಲಾನುಭವಿಗಳಾಗುತ್ತೇವೆ ಎಂದೆಲ್ಲಾ ಮನವಿ ಸಲ್ಲಿಸಿದ್ದಾರಂತೆ. ಇದಕ್ಕೆ ಒಪ್ಪಿ ಹೊಸ ಕಾರ್ಡ್ ಮಾಡಲು ಅನುಮತಿ ನೀಡಿದರೆ ಕೋಟಿ ಕೋಟಿ ಹಣ ಖರ್ಚು ಆಗಲಿದ್ದು ಇದನ್ನೆಲ್ಲಾ ರಾಜ್ಯ ಸರ್ಕಾರವೆ ನೋಡಿಕೊಳ್ಳಬೇಕು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಪ್ರಕಾರ ರಾಜ್ಯದಿಂದ ಸುಮಾರು ನಾಲ್ಕು ಕೋಟಿ 16 ಲಕ್ಷ ಜನರಿಗೆ ಮಾತ್ರವೆ ಫಲಾನುಭವಿಗಳು ಆಗಲು ಅವಕಾಶ ಇದೆ. ಆದ್ರೆ ಈಗಾಗಲೇ ಸುಮಾರು ನಾಲ್ಕು ಕೋಟಿ ಜನರು ಈ ಯೋಜನೆಯ ಲಾಭವನ್ನ ಪಡೆದುಕೊಳ್ಳುತ್ತಿದ್ದಾರೆ.. ಹೌದು ಇದೆಲ್ಲಾ ಒಂದು ಕಡೆಯಾದರೆ, ಅತ್ತ ರಾಜ್ಯ ಸರ್ಕಾರ ಅವರು ಮೊದಲೇ ಹೇಳಿದ್ದ ಹಾಗೆ ಗ್ಯಾರಂಟಿ ಯೋಜನೆಗಳಲ್ಲಿ ಮಗ್ನರಾಗಿದ್ದು ಅದರ ಅನುದಾನ ಹೊಂದಿಸಲು ಶ್ರಮಿಸುತ್ತಿದ್ದಾರೆ..

ಇಂತಹ ವೇಳೆಯಲ್ಲಿ ಇನ್ನಷ್ಟು ರೇಷನ್​ ಕಾರ್ಡ್​​ಗಳು ಹೊರ ಬರುತ್ತಾ ಹೋದರೆ ಗ್ಯಾರಂಟಿ ಯೋಜನೆಗಳ ವೆಚ್ಚ ಇನ್ನಷ್ಟು ಹೆಚ್ಚಲಿದೆಯಂತೆ. ಹಾಗಾಗಿ ಇದನ್ನೆಲ್ಲಾ ಕಾಂಗ್ರೆಸ್ ಸರ್ಕಾರ ಹೇಗೆ ನಿಭಾಯಿಸುತ್ತದೆ ಎಂದು ನೋಡಬೇಕು. ಜೊತೆಗೆ ಇದೆಲ್ಲಾ ಸರಕಾರಕ್ಕೆ ಕಷ್ಟ ಏನು ಅಲ್ಲ. ಕಾರಣ ಗ್ಯಾರೆಂಟಿ ಯೋಜನೆಗಳಿಗೆಂದೆ ಸಾವಿರಾರು ಕೋಟಿ ಹಣವನ್ನು ಅನುದಾನಕ್ಕೆ ತರುತ್ತಿದೆ. ಇದೆಲ್ಲಾ ದೊಡ್ಡದು ಏನು ಅಲ್ಲ ಕಾದು ನೋಡಬೇಕು. ಅರ್ಜಿ ಹಾಕುವ ಪ್ರಶ್ನೆಗೆ ಉತ್ತರ ಬೇಕು ಅಂದ್ರೆ ಇನ್ನೂ ಒಂದು ತಿಂಗಳು ಎಲ್ಲರೂ ಕಾಯಲೇಬೇಕು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಮಾಹಿತಿ ಇಷ್ಟ ಆದ್ರೆ ಶೇರ್ ಮಾಡಿ, ಹಾಗೆ ಈ ಎಲ್ಲಾ ಮಾಹಿತಿ ನಮಗೆ ಸೋಶಿಯಲ್ ಮೀಡಿಯಾದ ಮಾದ್ಯಮ ಚಾನೆಲ್ ಒಂದರಲ್ಲಿ ತಿಳಿದು ಬಂದಿದೆ ಇನ್ನೊಮ್ಮೆ ಪರಿಶೀಲಿಸಿ ಕೇಳಿ ತಿಳಿದುಕೊಳ್ಳಿ.