ಮಧ್ಯ ಪ್ರದೇಶ ದ ಈ ಅಜ್ಜಿ 14 ಮಂದಿ ಮಕ್ಕಳಿದ್ದರೂ ತಮ್ಮ 25 ಎಕರೆ ಜಮೀನನ್ನು ಪ್ರಧಾನಿ ಮೋದಿ ಹೆಸರಿಗೇ ಬರೆಯೋದು ಎಂದ ಅಜ್ಜಿ..; ವಿಡಿಯೋ ವೈರಲ್
ನರೇಂದ್ರ ಮೋದಿ ಅವರ ಜನಪ್ರಿಯತೆ ಎಷ್ಟಿದೆ ಅಂದರೆ ಈ ೧೦೦ ವರ್ಷ ವಯಸ್ಸಾಗಿರುವ ಮಧ್ಯ ಪ್ರದೇಶ ದ ಈ ಅಜ್ಜಿ 14 ಮಂದಿ ಮಕ್ಕಳಿದ್ದರೂ ತಮ್ಮ 25 ಎಕರೆ ಜಮೀನನ್ನು ಪ್ರಧಾನಿ ಮೋದಿ ಹೆಸರಿಗೇ ಬರೆಯೋದು ಎಂದು ಹೇಳಿದ್ದಾರೆ . ಏನ್ ಇದು ಘಟನೆ ನೋಡಣ ಬನ್ನಿ
ಮೋದಿಯವರು ದೇಶಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ.ಈ ದೇಶಕ್ಕೆ ಅವರ ಕೊಡುಗೆ ಅಪಾರ ಎನ್ನುವ ಅಜ್ಜಿ ತಮ್ಮ 25 ಎಕರೆ ಜಮೀನನ್ನು ಮೋದಿಗೆ ನೀಡುತ್ತೇನೆಂದು 100 ವರ್ಷದ ಮಂಗಿಬಾಯಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ
.ಈ ಕುರಿತಾಗಿ ಮಾತನಾಡಿದ ವೃದ್ಧೆ, ಮೋದಿಯನ್ನು ಟಿವಿಯಲ್ಲಿ ಹಲವು ಬಾರಿ ನೋಡಿದ್ದೇನೆ. ಮೋದಿ ನನಗೆ ಮನೆ ಕೊಟ್ಟರು. ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಮೋದಿ ಅಷ್ಟೊಂದು ಕೊಟ್ಟಿದ್ದರಿಂದ ಹಣ ಉಳಿಸಿ ತೀರ್ಥಯಾತ್ರೆಗೆ ತೆರಳಲು ಸಾಧ್ಯವಾಯಿತು
( video credit : live hindustan )
ಅಂದ ಹಾಗೆ ಈ ಅಜ್ಜಿಗೆ ಮಕ್ಕಳೇ ಇಲ್ವೇನೋ ಅಂದ್ಕೋಬೇಡಿ.ಇವರಿಗೆ 14 ಮಂದಿ ಮಕ್ಕಳಿದ್ದಾರೆ. ಆದರೂ ಪ್ರಧಾನಿ ಮೋದಿಯವರನ್ನು ತನ್ನ 15ನೇ ಮಗ ಎಂದು ಭಾವಿಸಿಕೊಂಡಿದ್ದಾರಂತೆ. ಮಧ್ಯಪ್ರದೇಶದ ರಾಜ್‌ಗಢ್ ಜಿಲ್ಲೆಯ ಹರಿಪುರ ಗ್ರಾಮದಲ್ಲಿ ವಾಸವಾಗಿರುವ ಈ ಅಜ್ಜಿಗೆ ಇದೀಗ 100 ವರ್ಷ. ಹೆಸರು ಮಂಗಿಬಾಯಿ ತನ್ವಾರ್.
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.