ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದಲ್ಲಿನ ಬಸವಲಿಂಗ ಶ್ರೀಗಳ ಸೂಸೈಡ್ ಗೆ ಕಾರಣಳಾದ್ ನೀಲಾಂಬಿಕೆ ಈಗ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಬಂಡೆಮಠದ ಸ್ವಾಮೀಜಿ, ಮಹಿಳೆಯ ಜೊತೆಗೆ ನಗ್ನವಾಗಿ ವೀಡಿಯೋ ಕಾಲ್ ನಲ್ಲಿ ಮಾತನಾಡಿದ್ದು ಎಲ್ಲರಿಗೂ ಗೊತ್ತಾಗಿರುವ ಸುದ್ದಿಯೇ. ಆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಕಳೆದ ತಿಂಗಳು ಬಂಡೆಮಠದ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಮುನ್ನ ಶ್ರೀಗಳು ಡೆತ್ ನೋಟ್ ಕೂಡ ಬರೆದಿದ್ದರು. ಈ ಡೆತ್ ನೋಟ್ ನಲ್ಲಿ ಹಲವರ ಹೆಸರನ್ನು ಉಲ್ಲೇಖಿಸಿದ್ದರು. ಹೀಗಾಗಿ ಇವರ ಸಾವಿನ ಸುತ್ತ ಅನುಮಾನದ ಹುತ್ತ ಹುಟ್ಟಿಕೊಂಡಿತ್ತು.

ಪೊಲೀಸರು ತನಿಖೆ ನಡೆಸಿದಂತೆ ಸ್ಫೋಟಕ ಮಾಹಿತಿಗಳು ಹೊರ ಬರಲು ಶುರುವಾಯ್ತು. ಪೊಲೀಸರ ತನಿಖೆಯಿಂದ ಆರೋಪಿ ನೀಲಾಂಬಿಕೆ ಸಿಕ್ಕಿಬಿದ್ದಳು. ನೀಲಾಂಬಿಕೆ ಕೇವಲ 21 ವರ್ಷದ ಯುವತಿ. ಈಕೆ ಹನಿಟ್ರ್ಯಾಪ್ ಮೂಲಕ ಹಲವು ಸ್ವಾಮೀಜಿಗಳ ಜೊತೆ ಅನ್ಯೋನ್ಯವಾಗಿದ್ದರು. ನಂತರ ಬ್ಲ್ಯಾಕ್ ಮೇಲ್ ಮಾಡಿ ಹಣ ದೋಚಿದ್ದ ವಿಚಾರ ಬಯಲಾಗಿದೆ. ಅಷ್ಟಕ್ಕೂ ಈ ನೀಲಾಂಬಿಕೆ ಯಾರು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ನೀಲಾಂಬಿಕೆ ಅವರ ಅಜ್ಜಿ ಇದ್ದದ್ದು ತುಮಕೂರಿನಲ್ಲಿ. ಪಿಯುಸಿ ಓದುವಾಗ ತುಮಕೂರಿಗೆ ಬಂದಿದ್ದ ನೀಲಾಂಬಿಕೆ ಸಿದ್ಧಗಂಗಾ ಮಠಕ್ಕೆ ಹೋಗಿ ಬರುತ್ತಿದ್ದರು. ಇವರ ಮಾವ ಸಿದ್ಧಗಂಗಾ ಮಢದಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಸುಲಭವಾಗಿ ಮಠಕ್ಕೆ ಹೋಗುತ್ತಿದ್ದ ನೀಲಾಂಬಿಕೆ ಕೆಲ ಸ್ವಾಮಿಜಿಗಳ ಪರಿಚಯ ಮಾಡಿಕೊಂಡಿದ್ದಳು. ಇಲ್ಲೇ ಬಸವಲಿಂಗ ಸ್ವಾಮೀಜಿ ಅವರ ಪರಿಚಯ ಕೂಡ ಆಗಿತ್ತು. ಇನ್ನು ಇವರ ಜೊತೆಗ

ದೊಡ್ಡಬಳ್ಳಾಪುರದ ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ ನೀಲಾಂಬಿಕೆ, ಚಿಕ್ಕವಯಸ್ಸಿನಿಂದಲೂ ಸಿದ್ದಗಂಗಾ ಮಠದ ಒಡನಾಟ ಇಟ್ಟುಕೊಂಡಿದ್ದರು. ಸಿದ್ದಗಂಗಾ ಮಠಕ್ಕೆ ಬರುವ ಹಲವು ಸ್ವಾಮೀಜಿಗಳನ್ನ ಪರಿಚಯ ಮಾಡಿಕೊಂಡಿದ್ದರು. ನೀಲಾಂಬಿಕೆ ಸ್ವಾಮೀಜಿಗಳ ಜೊತೆಗೆ ಅನ್ಯೂನ್ಯವಾಗಿ ಮಾತನಾಡುತ್ತಿದ್ದಳು. ಮೆಸೇಜ್, ವೀಡಿಯೋ ಕಾಲ್ ಗಳನ್ನು ಕೂಡ ಮಾಡುತ್ತಿದ್ದಳು. ಸ್ವಾಮೀಜಿಗಳ ಬಳಿ ಕಷ್ಟವಿದೆ ಎಂದು 500-1000 ರೂಪಾಯಿ ಹಣವನ್ನು ಕೂಡ ಆಗಾಗ ಕೇಳಿ ಪಡೆಯುತ್ತಿದ್ದಳು. (video credit : third eye )