ನಟಿ ನಯನತಾರಾ ಮತ್ತು ನಟ ವಿಘ್ನೇಶ್ ನಿಯಮ ಉಲ್ಲಂಘಿಸಿ ಅವಳಿ ಮಕ್ಕಳ ಪೋಷಕರಾಗಿದ್ದಾರೆ ಎಂದು ಹೇಳಲಾಗ್ತಿದೆ. ಹಾಗೊಂದುವೇಳೆ ನಿಯಮ ಉಲ್ಲಂಗಿಸಿದ್ರೆ ದಂಪತಿಗಳಿಗೆ ಜೈಲು ಶಿಕ್ಷೆಯಾಗಬಹುದು. ನಟಿ ನಯನತಾರಾ ಹಾಗೂ ನಟ ವಿಜ್ಞೇಶ್ ಇಬ್ಬರು ಜೂನ್ 9ನೇ ತಾರೀಕು ಅದ್ಧೂರಿಯಾಗಿ ಮದುವೆಯಾಗಿದ್ದರು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಸಪ್ತಪದಿ ತುಳಿದು ನಾಲ್ಕು ತಿಂಗಳ ಕೆಳಗೆ ದಂಪತಿಗಳಾಗಿದ್ದರು. ಮದುವೆಯ ಬಳಿಕ ಕೆಲ ವಿಚಾರಗಳಿಂದ ಸುದ್ದಿ ಆಗುತ್ತಲೇ ಇದ್ದ ಈ ಜೋಡಿ, ಆದಷ್ಟು ಬೇಗ ತಂದೆ ತಾಯಿಯಾಗುವ ಆತುರದಲ್ಲಿದ್ದಾರೆ ಎಂಬ ಸುದ್ದಿ ಕೂಡ ಚರ್ಚಿ ಆಗುತ್ತಿತ್ತು.

ಆದರೆ ಮದುವೆಯಾದ ನಾಲ್ಕೇ ತಿಂಗಳಿಗೆ ಅವಳಿ ಮಕ್ಕಳಿಗೆ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಇದರಿಂದ ಪತಿ-ಪತ್ನಿಯರಿಬ್ಬರು ಸಂತೋಷದಲ್ಲಿ ತೇಲಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಾವಿಬರು ಅವಳಿ ಮಕ್ಕಳಿಗೆ ಪೋಷಕರಾಗಿರುವ ಸಂತೋಷದ ವಿಚಾರವನ್ನು ಕೂಡ ಹಂಚಿಕೊಂಡಿದ್ದರು. ಆದರೆ ಈ ವಿಚಾರ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಮದುವೆಯಾದ ನಾಲ್ಕೇ ತಿಂಗಳಿಗೆ ಮಕ್ಕಳನ್ನು ಪಡೆಯಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿದೆ. ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿದ್ದಾರೆ ಎಂಬ ಸುದ್ದಿ ಇದೀಗ ಚರ್ಚೆಯಾಗುತ್ತಿದೆ. ಆದರೆ ಈ ಬಗ್ಗೆ ದಂಪತಿಗಳು ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಹಾಗಿದ್ದರೂ ತಮಿಳುನಾಡು ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.

ಹಾಗಾಗಿ ದಂಪತಿಗಳು ಮತ್ತು ಬಾಡಿಗೆ ತಾಯ್ತನದ ವಿಚಾರವಾಗಿ ಆಸ್ಪತ್ರೆಯಲ್ಲಿ ವೈದ್ಯರೊಂದಿಗೆ ತನಿಖೆಯನ್ನು ಕೂಡ ಪ್ರಾರಂಭಿಸಲಾಗಿದೆ. ಈ ಪ್ರಕರಣ ಸಂಬಂಧ ದಂಪತಿಗಳು ನಿಯಮ ಉಲ್ಲಂಘಿಸಿ ಮಕ್ಕಳನ್ನು ಪಡೆದಿದ್ದಾರೆ ಎಂಬುದು ಸಾಬೀತಾದರೆ ಇಬ್ಬರಿಗೂ ಜೈಲು ಶಿಕ್ಷೆಯಾಗುವುದು ಗ್ಯಾರೆಂಟಿ ಎಂದು ಹೇಳಲಾಗುತ್ತಿದೆ. ಹಾಗಾದರೆ ಬಾಡಿಗೆ ತಾಯ್ತನದ ನುಯಮಗಳೇನು ಎಂಬುದನ್ನು ನಾವು ತಿಳಿಯೋಣ ಬನ್ನಿ.

By Kumar K