ಮದುವೆಯ ಮೊದಲ ರಾತ್ರಿ ಹೇಗೆ ನಡೆದುಕೊಳ್ಳಬೇಕು? ಇಲ್ಲಿದೆ ನೋಡಿ ಕೆಲವು ಟಿಪ್ಸ್

ಮದುವೆಯ ಮೊದಲ ರಾತ್ರಿ ಹೇಗೆ ನಡೆದುಕೊಳ್ಳಬೇಕು? ಇಲ್ಲಿದೆ ನೋಡಿ ಕೆಲವು ಟಿಪ್ಸ್

ಒಂದು ವಿಷಯ ನಾವು ತಿಳಿದಿರಬೇಕು ಪ್ರಿಯ ಓದುಗರೇ, ಮದುವೆಯ ಮೊದಲ ರಾತ್ರಿಯೇ ದಂಪತಿಗಳಿಗೆ ಕೊನೆಯ ರಾತ್ರಿಯಲ್ಲ.. ಆದರೆ ಮೊದಲ ರಾತ್ರಿ ಪ್ರತಿ ದಂಪತಿಗಳಿಗೆ ವಿಶೇಷ ರಾತ್ರಿ ಹೌದು..

ಏಕೆಂದರೆ ಒಂದು ಗಂಡು ಹೆಣ್ಣು ಮದುವೆಯ ಪವಿತ್ರ ಸಂಸ್ಕಾರದಲ್ಲಿ ತಂದೆ ತಾಯಿ ,ಗುರು ಹಿರಿಯರ ,ಬಂದು ಬಳಗದವರ ಸಮ್ಮುಖದಲ್ಲಿ ಕಾಯಾ, ವಾಚಾ, ಮಾನಸ ಜೀವನ ಪೂರ್ತಿ ಬಾಳಿ ಬೆಳಗುವ ಬಂಧನದಲ್ಲಿ ಒಂದಾಗುವ ದಿನ…

ಹಾಗಾಗಿ ಈ ದಿನ ವಿಶೇಷವಲ್ಲದೆ ಇನ್ನೇನು, ಅಲ್ಲವೇ?,

ದಂಪತಿಗಳು ಒಬ್ಬರಿಗೊಬ್ಬರು ಪ್ರೀತಿಸಿ ಇಲ್ಲವೇ , ಹಿರಿಯರಿಂದ ನಿಶ್ಚಯಿಸಿ ಆದ ಮದುವೆ ಆಗಿರಬಹುದು, ಏನೇ ಆದರೂ ಮದುವೆಯ ಗಂಡು ಹೆಣ್ಣು ಇಬ್ಬರೂ ಸಾವಿರಾರು ಬಿಸಿ ಬಿಸಿ ಬಯಕೆ, ಆಸೆ, ಕನಸು ಕಟ್ಟಿಕೊಂಡು ಈ ವಿಶೇಷ ದಿನಕ್ಕೆ ಕಾಯುತ್ತಿರುತ್ತವೆ.

ಮದುವೆಯ ಸಂಬ್ರಮವೆಂದರೆ ಒಂದೇ ದಿನದ ಸಂಭ್ರಮವಲ್ಲ ಆದರೆ ತಿಂಗಳುಗಟ್ಟಲೆ ಮೊದಲಿಂದಲೆ ಈ ದಿನಕ್ಕೆ ವಿಶೇಷ ಸಿದ್ಧತೆ ಏರ್ಪಟ್ಟಿರುತ್ತವೆ..ಕುಟುಂಬದವರ ಜೊತೆಗೆ ಮದುವೆಯ ಗಂಡು ಹೆಣ್ಣು ಕೂಡ ಕರೆಯೋಲೆ, ಸಿದ್ಧತೆ, ಜವಳಿ ಹೀಗೆ ಹತ್ತು ಹಲವು ಕೆಲಸದಲ್ಲಿ ತಮ್ಮ ತಮ್ಮ ಕುಟುಂಬದವರ ಜೊತೆ ವ್ಯಸ್ಥರಾಗಿದ್ದು ಸಹಜವಾಗಿ ಮದುವೆಯ ದಿನ ಕೂಡ ಪೂಜೆ ಕಾರ್ಯ ನೆಂಟರು ಗಡಿಬಿಡಿ ಹೀಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ತೀವ್ರ ಬಳಲಿಕೆ ಹಾಗೂ ಸುಸ್ತು ಅನುಭವಿಸುತ್ತಾರೆ..

ಈ ಕಾರಣದಿoದ ಮದುವೆಯ ಮೊದಲ ರಾತ್ರಿ ಗಂಡು ಹೆಣ್ಣು ಇಬ್ಬರೂ ತಮ್ಮ ಏಕಾಂತಕ್ಕೆ ತೆರಳಿದಾಗ ಮೊದಲು ರಿಲಾಕ್ಸ್ ಆಗಿ, ಆರಾಮವಾಗಿ, ಕಳೆದ ಒಂದು ತಿಂಗಳು ಯಾವ ರೀತಿ ತಯಾರಿ ನಡೆಸಿದ್ದು ಅಂತಾ ಒಬ್ಬರಿಗೊಬ್ಬರು ಸ್ನೇಹಿತರಂತೆ ನಿಮ್ಮ ಅನುಭವಗಳನ್ನು share ಮಾಡಿಕೊಳ್ಳಿ…

ಮುಂದಿನ ಭವಿಷ್ಯದ ಬಗ್ಗೆ short ಆಗಿ ಪ್ಲಾನ್ ಮಾಡಿಕೊಳ್ಳಿ…ಮೊಬೈಲ್ನಲ್ಲಿ ಕ್ಲಿಕ್ಕಿಸಿದ ಮದುವೆಯ ಫೋಟೋಗಳನ್ನು ಒಬ್ಬರಿಗೊಬ್ಬರು ನೋಡಿಕೊಂಡು ಹಾಸ್ಯಭರಿತವಾಗಿ ಸಮಯ ಕಳೆಯಿರಿ..

ಲವ್ ಮ್ಯಾರೇಜ್ ಆದರೆ ಇಷ್ಟು ಸಮಯ ಕಳೆಯುವುದರೊಳಗೆ ಕೈ ಕೈ ಹಿಡಿದು ಕೊಳ್ಳುವುದು, ಬಿಸಿಯಪ್ಪುಗೆ, ಚುಂಬನ ಇವೆಲ್ಲ ಮುಗಿಸಿ ಬಿಡುತ್ತೀರಿ..

ಅದೇ arranged marriage ಆದರೆ ಸ್ವಲ್ಪ ಹತ್ತಿರ ಬರುವುದು ಕಷ್ಟವಾಗಬಹುದು, ಹೆದರಿಕೆ ಸಂಕೋಚ ಆತಂಕ ಹೆಣ್ಣಿಗೆ ಇರಬಹುದು.

ಅದಕ್ಕೆ ಹೇಳುವುದು ಗಂಡು ಆತುರ ಮಾಡುವುದು ಬೇಡ, ಮೊದಲಿಗೆ ನೀವೊಬ್ಬ ಆಕೆಯ ಒಬ್ಬ ಆತ್ಮೀಯ ಸ್ನೇಹಿತ ಹಾಗೂ ಸಂಗಾತಿ ಎನ್ನುವುದನ್ನು ಆಕೆಗೆ ಮನವರಿಕೆ ಮಾಡಿಸಿ, ದಣಿವಾದದ್ದರಿಂದ ಪರಸ್ಪರ ಒಪ್ಪಿಗೆ ಪಡೆದು ಮಾರನೆಯ ದಿನಕ್ಕೆ ಸೇರುವ ಕಾರ್ಯಕ್ರಮ ಇಟ್ಟುಕೊಳ್ಳಬಹುದೆ ಎಂಬುದನ್ನು ನಿವೇದಿಸಿಕೊಳ್ಳಿ .. ಒಳ್ಳೆಯ ನಿದ್ರೆ ಮಾಡಿ… ಇಲ್ಲವಾದರೆ ಅಂದೇ ಸೇರುವ ಕಾರ್ಯ ಮಾಡಲು ಇಬ್ಬರೂ ಒಪ್ಪಿದರೆ ಧಾರಾಳವಾಗಿ ಮಿಲನ ಮಹೋತ್ಸವ ಆಚರಿಸಿಕೊಳ್ಳಿ.. ಅದು ನಿಮ್ಮ ಇಬ್ಬರ nirdhrada ಮೇಲೆ ಇರುತ್ತದೆ. ಏನೇ ಆದರೂ ಚೆನ್ನಾಗಿ ಪ್ಲಾನ್ ಮಾಡಿಕೊಳ್ಳಿ..

ಅದಕ್ಕೆ ಹೇಳಿದ್ದು ಮದುವೆಯ ಪ್ರಥಮ ರಾತ್ರಿ ಕೊನೆಯ ರಾತ್ರಿಯಲ್ಲ .. ಇನ್ನೂ ದೀರ್ಘವಾದ ಮಧುರ ರಾತ್ರಿಗಳು ನಿಮಗಾಗಿ ಕಾಯುತ್ತಿವೆ..ಹಾಗಾಗಿ ಯಾವುದೇ ರೀತಿಯ ಅವಸರ, ಗಡಿಬಿಡಿ, ಆತುರತೆ, ಅಥವಾ ಎಲ್ಲವನ್ನು ಒಂದೇ ದಿನಕ್ಕೆ ಮಾಡಿ ಮುಗಿಸಬೇಕೆಂಬ ಆತಂಕ ಬೇಡ…ಸರಿಯಾಗಿ ನಿಮ್ಮಿಬ್ಬರಿಗೂ ಸಂಪೂರ್ಣ ತೃಪ್ತಿ ಆಗುವ ಹಾಗೆ ಮಿಲನ ನಡೆಸಲು ಇಬ್ಬರಿಗೂ ಸ್ವಲ್ಪ ಸಮಯ ಬೇಕು..ಹಾಗಾಗಿ ದಿನಕಳೆದಂತೆ ನೀವು ಅದರಲ್ಲಿ ಪ್ರಾವೀಣ್ಯತೆ ಹೊಂದುವಿರಿ… ಹಾಗಾಗಿ ದಿನ ಕಳೆದಂತೆ ಇಬ್ಬರೂ ಮುಕ್ತವಾಗಿ ಮಾತನಾಡಿಕೊಳ್ಳಿ..ಇಬ್ಬರ chemisty, ಫಿಸಿಕ್ಸ್, biology, ಒಂದಾಗಲಿ.

ಇನ್ನೂ ಕೆಲವು ಪ್ರಥಮ ರಾತ್ರಿಯ ಸಂಪ್ರದಾಯಗಳಿರಬಹುದು, ಆದರೆ ಶಿಕ್ಷಿತರಾದ ನೀವು ದಂಪತಿಗಳು, ಆ ಸಂಪ್ರದಾಯಗಳು ವೈಜ್ಞಾನಿಕವಾಗಿ ಎಷ್ಟು ಸರಿ ಎಂಬುವುದನ್ನು ವಿವೇಚಿಸಿ ಪಾಲಿಸಿ..