ಸಿಂಹ ರಾಶಿ ಯವರಿಗೆ 2025 ಭರ್ಜರಿ ಧನಲಾಭ : ಯೋಗಗಳ ಸುರಿಮಳೆ

ಸಿಂಹ ರಾಶಿ ಯವರಿಗೆ  2025   ಭರ್ಜರಿ ಧನಲಾಭ :   ಯೋಗಗಳ ಸುರಿಮಳೆ

ಸಿಂಹ ರಾಶಿಯವರಿಗೆ ಮುಂದಿನ ವರ್ಷ ಲಾಭವನ್ನು ತಂದು ಕೊಡುತ್ತದೆ. ಧನಕಾರಕ, ಯೋಗಕಾರಕ ಬುಧ ಸಿಂಹ ರಾಶಿಯವರಿಗೆ ವಿಪರೀತ ಧನವನ್ನು ತಂದುಕೊಡುತ್ತಾನೆ.


ಸಿಂಹರಾಶಿಯವರಿಗೆ ಲಾಭಾಧಿಪತಿ ಮಿಥುನ ರಾಶಿಯಾಗಿರುತ್ತದೆ. ಲಾಭಾಧಿಪತಿ ಬುಧ ಹಾಗೂ ಮಿಥುನ ಸಿಂಹ ರಾಶಿಯವರಿಗೆ ನಿರೀಕ್ಷೆಗೂ ಹೆಚ್ಚು ಲಾಭವನ್ನು ನೀಡುತ್ತಾರೆ. ಇದರಿಂದಾಗಿ 2025ನೇ ವರ್ಷ ಸಿಂಹ ರಾಶಿಯವರಿಗೆ ಅದ್ಭುತವಾಗಿರುತ್ತದೆ. ದಾಯಾದಿಗಳಿಂದ ಬರಬೇಕಾದ ಹಣ ಆಸ್ತಿ ನಿಮ್ಮ ಕೈ ಸೇರುತ್ತದೆ. ಯಾರಿಗಾದರೂ ಸಾಲ ನೀಡಿದ್ದರೆ ಆ ಹಣ ನಿಮಗೆ ವಾಪಸ್ ಬರುತ್ತದೆ. ಶ್ರಮವಿಲ್ಲದೇ ನಿಮ್ಮತ್ತ ಧನಲಕ್ಷ್ಮೀ ಆಗಮನವಾಗಲಿದೆ.

ಮುಂಬರುವ ವರ್ಷದಲ್ಲಿ ಧನಪ್ರಾಪ್ತಿ ಮಹಾಯೋಗ, ಗುರು ಮಂಗಲ ಯೋಗ, ಗಜಕೇಸರಿ ಯೋಗ, ಬುಧಾಧಿತ್ಯ ಯೋಗ ಇವೆಲ್ಲವೂ ಕೂಡ ಸಿಂಹರಾಶಿಯವರಿಗಿದೆ. ಇದರೊಂದಿಗೆ ವಿವಾಹ ಯೋಗವೂ ಇದ್ದು ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಕೂಡಿ ಬರಲಿದೆ. ಅಲ್ಲದೆ ಮುಂದಿನ ವರ್ಷ ಸಾಲಭಾದೆಗಳು ನಿವಾರಣೆಯಾಗುತ್ತವೆ. ಯಂತ್ರೋಪಕರಣಗಳು, ಆಟೋ ಮೋಬೈಲ್ ವ್ಯವಹಾರ ದ್ವಿಗುಣ ಲಾಭವನ್ನು ನೀಡುತ್ತದೆ. ತರಬೇತಿ ಕೇಂದ್ರದಲ್ಲಿ ಹೆಚ್ಚಿನ ಹಣವನ್ನು ನೀವು ಪಡೆಯುವಿರಿ.

ಸಿಂಹ ರಾಶಿಯವರಿಗೆ ಅದೃಷ್ಟ ಸಂಖ್ಯೆ 1, 14, 26 ಆಗಿದೆ. ಇದು ಮುಂಬರುವ ವರ್ಷದ ಸಿಂಹ ರಾಶಿಯವರಿಗೆ ಶುಭ ಸಂಖ್ಯೆಯಾಗಿದೆ. ಒಟ್ಟಿನಲ್ಲಿ ಸಿಂಹ ರಾಶಿಯವರಿಗೆ ಈ ವರ್ಷ ಹರ್ಷವನ್ನು ತರಲಿದೆ.

ಅಲ್ಲದೆ ಸಾಲ ಕೂಡ ದೂರವಾಗುತ್ತದೆ. ಮುಂದಿನ ವರ್ಷ ಸಿಂಹ ರಾಶಿಯವರಿಗೆ ಎಲ್ಲದರಿಂದಲೂ ಅನುಕೂಲಕರವಾಗಿರುತ್ತದೆ. ಸಿಂಹ ರಾಶಿಯವರಿಗೆ ಒಳ್ಳೆಯ ಉದ್ಯೋಗ ಸಿಗಲಿದೆ. ಸಂಬಳ ಹೆಚ್ಚಾಗಿರುವ ಕೆಲಸ ಸಿಗುತ್ತದೆ. ಹೆಚ್ಚು ಶ್ರಮ ಪಡುತ್ತೇನೆ ಎನ್ನುವರಿಗೆ ಭಗವಂತನ ಆಶೀರ್ವಾದಿಂದ ಹೆಚ್ಚಿನ ಸಂಬಳವಿರುವ ಉದ್ಯೋಗ ಸಿಗಲಿದೆ.