ಜಗತ್ತಿನ ಏಕೈಕ ಪಾರದರ್ಶಕ ಶಿವಲಿಂಗ ನೋಡಿ! ಈ ಶಿವಲಿಂಗದಲ್ಲಿ ಕೈಲಾಸ ಪರ್ವತವನ್ನು ನೋಡಬಹುದು ;ವಿಡಿಯೋ ನೋಡಿ

ಜಗತ್ತಿನ ಏಕೈಕ ಪಾರದರ್ಶಕ ಶಿವಲಿಂಗ ನೋಡಿ! ಈ ಶಿವಲಿಂಗದಲ್ಲಿ ಕೈಲಾಸ ಪರ್ವತವನ್ನು ನೋಡಬಹುದು ;ವಿಡಿಯೋ ನೋಡಿ

ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ನೆಲೆಸಿರುವ ಶಿವಲಿಂಗವು ಕಪ್ಪು ಬಣ್ಣದ ಆಗಿರುತ್ತದೆ ಆದರೆ ಇಂದು ಮಾತನಾಡುತ್ತಿರುವ ಈ ಶಿವಲಿಂಗವು ಪಾರದರ್ಶಕ ಶಿವಲಿಂಗವಾಗಿದೆ. ಅಂದರೆ ಈ ಶಿವ ಲಿಂಗವು ಟ್ರಾನ್ಸ್ಪರೆಂಟ್ ಆಗಿದೆ. ಹೌದು ಈ ರೀತಿಯ ಪಾರದರ್ಶಕ ಶಿವಲಿಂಗವನ್ನು ನೀವು ಪ್ರಪಂಚದಲ್ಲೇ ಎಲ್ಲೂ ನೋಡಲು ಸಾಧ್ಯವಿಲ್ಲ.ಈ ಶಿವಲಿಂಗಳ ಹಳೆಯದ್ದು ಎಂದು ಉಲ್ಲೇಖಿಸಲಾಗಿದೆ. ಹಾಗಾದರೆ ಬನ್ನಿ, ಈ ದೇವಸ್ಥಾನ ಯಾವುದು? ಹಾಗೆ ಈ ದೇವಸ್ಥಾನ ಇರೋದಾದರೂ ಎಲ್ಲಿ? ಈ ರೀತಿಯ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸಂಪೂರ್ಣವಾದ ಉತ್ತರ ನೀಡುತ್ತೇವೆ. ಈ ಪುಟವನ್ನು ಪೂರ್ತಿಯಾಗಿ ಓದಿ…

ಪ್ರಪಂಚದ ಏಕೈಕ ಪಾರದರ್ಶಕ ಶಿವಲಿಂಗವನ್ನು ಚಂದ್ರದೇವರ ಪುತ್ರ ವರ್ಚಸ್ ಅವರು ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ಪುರಾವೆಗಳು ಹೇಳುತ್ತದೆ. ಮಹಾಭಾರತದ ಸಮಯದಲ್ಲಿ ವರ್ಚಸ್ ತನ್ನ ಎರಡನೇ ಅವತಾರದಲ್ಲಿ ಮತ್ತೆ ಹುಟ್ಟಿ ಬರುತ್ತಾನೆ. ಹೌದು, ಅರ್ಜುನನ ಮಗ ಅಭಿಮನ್ಯುವಿನ ರೂಪದಲ್ಲಿ,ವರ್ಚಸ್ ಮತ್ತೆ ಭೂಮಿಯ ಮೇಲೆ ಹುಟ್ಟುತ್ತಾನೆ. ಇನ್ನು ವರ್ಚಸ್ ಸ್ಥಾಪಿಸಿರುವ ಈ ಶಿವಲಿಂಗವು ರಾಜಸ್ಥಾನದ ಸಿಕ್ಕರ್ ನಗರದ ಬಳಿ ಇರುವ ಮಂಡವ ಎಂಬ ಹಳ್ಳಿಯಲ್ಲಿ ಈ ಪಾರದರ್ಶಕ ಶಿವಲಿಂಗದ ದರ್ಶನ ಪಡೆಯಬಹುದು. ಇನ್ನು ಈ ಶಿವಲಿಂಗದ ಒಳಗೆ ಕೈಲಾಸ ಪರ್ವತದ ಆಕಾರ ಕಂಡು ಬರುತ್ತದೆ ಎಂದು ಹೇಳುತ್ತಾರೆ. 

ಈ ಪಾರದರ್ಶಕ ಶಿವಲಿಂಗ ಸುಮಾರು 5 ಕಿ.ಮೀ ಭೂಮಿಯ ಒಳಗೆ ಹೋಗಿದ್ದು, ಈ ವಿಚಾರದ ಬಗ್ಗೆ ಭಾರತದ ಅರ್ಜಿಯೊಲಜಿ ಡಿಪಾರ್ಟ್ಮೆಂಟ್ ಸ್ಪಷ್ಟ ಪಡಿಸಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಈ ಪಾರದರ್ಶಿಕ ಶಿವಲಿಂಗವನ್ನು ಮುಟ್ಟಿ ನಮಸ್ಕರಿಸುವ ಅವಕಾಶ ನೀಡಲಾಗುತ್ತದೆ.

ಮಾಂಗಲಿಕ ದೋಷ ಇರುವವರು ಈ ದೇವಸ್ಥಾನಕ್ಕೆ ಬಂದು 101 ಪ್ರದಕ್ಷಿಣೆ ಮಾಡಿ ಶಿವಲಿಂಗವನ್ನು ಮುಟ್ಟಿ ನಮಸ್ಕರಿಸಿದರೆ ಅವರ ಮಾಂಗಲಿಕ ದೋಷ ಪರಿಹಾರವಾಗುತ್ತದೆ ಎಂದು ಹೇಳುತ್ತಾರೆ. ವರ್ಚಸ್ ನ ಬಳಿ ಎಲ್ಲಾ ದೋಷವನ್ನು ಪರಿಹಾರ ಮಾಡುವ ಶಕ್ತಿ ಇತ್ತು. ಆತ ಶಿವನ ಆಗ್ನೇಯಂತೆ ಈ ಪ್ರದೇಶಕ್ಕೆ ಬಂದು ಮಾಂಗಲಿಕ ದೋಷ ಪರಿಹಾರ ಮಾಡುವ ಮಣಿಯನ್ನು,

ಈ ಶಿವಲಿಂಗದ ಒಳಗಿಟ್ಟು ಅದನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದಾನೆ. ಇನ್ನು ಇಂದಿಗೂ ಆ ಮಣಿ ಶಿವಲಿಂಗದ ಒಳಗೆ ಇದೆ ಎನ್ನಲಾಗುತ್ತದೆ. ಇನ್ನು ಪ್ರತಿದಿನ ಬೆಳಗ್ಗೆ ಶಿವಲಿಂಗವು ಸೂರ್ಯೋದಯದ ಸಮಯದಲ್ಲಿ ಬಿಸಿಯಾಗಲು ಶುರುವಾಗುತ್ತದೆ. ಹಾಗೆ ಸಂಜೆ ಸೂರ್ಯ ಮುಳುಗುವ ವೇಳೆ ಈ ಶಿವಲಿಂಗವು ಎಂಟರಿಂದ ಹತ್ತು ಡಿಗ್ರಿ ಸೆಲ್ಸಿಯಸ್ ತಣ್ಣಗಾಗುತ್ತದೆ.  ( video credit : goli inside hit )

ಎಲ್ಲಿ ನಡೆಯುತ್ತಿರುವ ಈ ವಿಸ್ಮಯಕ್ಕೆ ಕಾರಣ ತಿಳಿದು ಬಂದಿಲ್ಲ. ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನದಂದು ಈ ಶಿವಲಿಂಗವು ಕೆಂಪು ಹಾಗೂ ಹಳದಿ ಬಣ್ಣದಲ್ಲಿ ಬದಲಾಗುತ್ತದೆ. ಇನ್ನು ಈ ದೇವಸ್ಥಾನಕ್ಕೆ ಕೇವಲ ಮಾಂಗಲಿಕ ದೋಷ ಇರುವವರು ಮಾತ್ರ ಭೇಟಿ ನೀಡುತ್ತಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…