ಇಬ್ಬರು ಹೆಂಡಿರ ಮುದ್ದಿನ ಗಂಡ; 3 ದಿನ ಇವಳು, 3 ದಿನ ಅವಳು, 1 ದಿನ ರಜೆ ! ಎಲ್ಲಿ ನೋಡಿ ಶಾಕ್ ಆಗ್ತೀರಾ

ಇಬ್ಬರು ಹೆಂಡಿರನ್ನು ಮದುವೆಯಾದ ಗಂಡಂದಿರು ಮೊದಲ ಪತ್ನಿಗೆ ಗೊತ್ತಿಲ್ಲದಂತೆ ಇನ್ನೊಬ್ಬಳ ಜೊತೆ ಸಂಸಾರ ನಡೆಸುತ್ತಿರುತ್ತಾರೆ. ಒಂದು ವೇಳೆ ಗೊತ್ತಾದರೆ ಗಂಡ ಫಜೀತಿಗೆ ಸಿಕ್ಕಾಕೊಳ್ತಾನೆ. ಅದೇ ರೀತಿ ಬಿಹಾರ್‌ನ ಪೂರ್ಣಿಯಾ ಜಿಲ್ಲೆಯಲ್ಲಿ ಒಂದು ಘಟನೆ ನಡೆದಿದ್ದು, ಇಲ್ಲಿ ವಿಚಿತ್ರ ಒಪ್ಪಂದವೊಂದು ನಡೆದಿದೆ. ಒಬ್ಬ ಪುರುಷ ತನ್ನ ಎರಡು ಹೆಂಡತಿಯರೊಂದಿಗೆ ಸಮಯವನ್ನು ಹಂಚಿಕೊಳ್ಳಬೇಕು ಎಂದು ಒಪ್ಪಂದದಲ್ಲಿ ಹೇಳಲಾಗಿದೆ.
ಹೌದು, ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್‌ನ ನಿರ್ಧಾರದ ಪ್ರಕಾರ, ಪತಿ ವಾರದಲ್ಲಿ ಮೂರು ದಿನ ಮೊದಲ ಹೆಂಡತಿಯೊಂದಿಗೆ ಮತ್ತು ಮೂರು ದಿನ ಎರಡನೇ ಹೆಂಡತಿಯೊಂದಿಗೆ ಕಳೆಯಬೇಕು. ಉಳಿದ ಒಂದು ದಿನ ಅವನಿಗೆ ಸ್ವತಂತ್ರ ನೀಡಲಾಗಿದೆ. ಆ ದಿನ ಅವನು ತನ್ನ ಇಷ್ಟದ ಹೆಂಡತಿಯೊಂದಿಗೆ ಸಮಯ ಕಳೆಯಬಹುದು. ಇಲ್ಲವಾದ್ರೆ ಒಬ್ಬನೇ ಕಳೆಯಬಹುದು.
ಈ ಘಟನೆ ಪೂರ್ಣಿಯಾದ ರೂಪೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅವನಿಗೆ ಮೊದಲ ಹೆಂಡತಿಯಿಂದ ಇಬ್ಬರು ಮಕ್ಕಳಿದ್ದಾರೆ. ಏಳು ವರ್ಷಗಳ ಹಿಂದೆ ಈ ವ್ಯಕ್ತಿ ಎರಡನೇ ಮದುವೆ ಆಗಿದ್ದಾನೆ, ಆದರೆ ಅವನ ಮೊದಲ ಹೆಂಡತಿಗೆ ಈ ವಿಚಾರ ಏನೂ ತಿಳಿಸಿರಲಿಲ್ಲ.
ಸುಮಾರು ಏಳು ವರ್ಷಗಳ ಹಿಂದೆ, ಆ ವ್ಯಕ್ತಿ ತನ್ನ ಮೊದಲ ಹೆಂಡತಿಗೆ ತಿಳಿಸದೆ ಎರಡನೇ ವಿವಾಹವಾದನು. ಈ ಘಟನೆಯ ಬಗ್ಗೆ ಮೊದಲ ಪತ್ನಿಗೆ ತಿಳಿದಾಗ, ಆಕೆ ಆಘಾತಕ್ಕೊಳಗಾದಳು ಮತ್ತು ಪೊಲೀಸರಿಗೆ ದೂರು ನೀಡಿದಳು. ಜೊತೆಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗಿದ್ದಲ್ಲದೆ, ಮೊದಲ ಪತ್ನಿ ಮತ್ತು ಮಕ್ಕಳನ್ನು ಜವಬ್ದಾರಿಯುತವಾಗಿ ನೋಡಿಕೊಳ್ಳಲಿಲ್ಲ ಎಂಬ ಆರೋಪವೂ ಪತಿ ಮೇಲಿತ್ತು. ಈ ಬಗ್ಗೆ ಮೊದಲ ಪತ್ನಿ ಪೂರ್ಣಿಯಾ ಎಸ್‌ಪಿ ಕಾರ್ತಿಕೇಯ ಶರ್ಮಾ ಅವರಿಗೆ ದೂರು ನೀಡಿದ್ದು, ಎಸ್ಪಿ ಈ ವಿಚಿತ್ರ ಪ್ರಕರಣವನ್ನು ಕುಟುಂಬ ಸಮಾಲೋಚನಾ ಕೇಂದ್ರಕ್ಕೆ ಹಸ್ತಾಂತರಿಸಿದರು.
ಫೆಬ್ರವರಿ 14 ರಂದು ಪತಿ ಮತ್ತು ಎಬ್ಬರು ಹೆಂಡತಿಯರನ್ನು ಹಾಜರಾಗುವಂತೆ ತಿಳಿಸಿದ್ದರು. ವಿಚಾರಣೆಯ ಸಮಯದಲ್ಲಿ, ಮೊದಲ ಹೆಂಡತಿ ತನ್ನ ಗಂಡ ಎರಡನೇ ಮದುವೆಯಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಆಗ ಕೇಂದ್ರದ ಸದಸ್ಯರು ಆತನನ್ನು ತರಾಟೆ ತೆಗೆದುಕೊಂಡಿದ್ದಾರೆ, ಅಷ್ಟೇ ಅಲ್ಲದೇ ಎರಡನೇ ಹೆಂಡತಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.
ವಿವಾದ ಬಗೆಹರಿಸಲು, ಮೊದಲು ಪತಿ ನಾಲ್ಕು ದಿನ ಮೊದಲ ಹೆಂಡತಿಯೊಂದಿಗೆ ಇರಬೇಕೆಂದು ನಿರ್ಧರಿಸಿತು, ಆದರೆ ಎರಡನೇ ಹೆಂಡತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದಳು. ಹೀಗಾಗಿ, ಅಂತಿಮವಾಗಿ, ಸಮಯವನ್ನು ಇಬ್ಬರೂ ಹೆಂಡತಿಯರ ನಡುವೆ ಸಮಾನವಾಗಿ ಹಂಚಲಾಯಿತು. ಮೂರು ದಿನ ಮೊದಲ ಪತ್ನಿ, ಇನ್ನು ಮೂರು ದಿನ ಎರಡನೇ ಹೆಂಡ್ತಿಯ ಜೊತೆ ಕಳೆಯಬೇಕು. ಉಳಿದ ಒಂದು ದಿನ ಅವನಿಗೆ ಸ್ವತಂತ್ರ ನೀಡಲಾಗಿದೆ. ಆ ದಿನ ಅವನು ತನ್ನ ಇಷ್ಟದ ಹೆಂಡತಿಯೊಂದಿಗೆ ಸಮಯ ಕಳೆಯಬಹುದು. ಇಲ್ಲವಾದ್ರೆ ಒಬ್ಬನೇ ಕಳೆಯಬಹುದು.