ಪ್ರೀತಿಸಿ ಮದುವೆ ಆಗುವುದು ಒಳ್ಳೆಯದಾ ಅಥವಾ ನಿಮ್ಮ ಪೋಷಕರ ನಿರ್ದಾರ ನ : ನಿಮ್ಮ ಆಯ್ಕೆ ಯಾವುದು ?

ಪ್ರೀತಿಸಿ ಮದುವೆ ಆಗುವುದು ಒಳ್ಳೆಯದಾ  ಅಥವಾ ನಿಮ್ಮ ಪೋಷಕರ ನಿರ್ದಾರ ನ : ನಿಮ್ಮ ಆಯ್ಕೆ ಯಾವುದು ?

ಇಲ್ಲಿ ಟೀನ್ ಏಜ್ ಹೆಣ್ಣು ಮಕ್ಕಳಿಗೆ ಕಿವಿಮಾತು ಬದುಕಿನಲ್ಲಿ ಭದ್ರತೆ ಸಿಗುವತನಕ ಪ್ರೇಮ ವಿವಾಹ ದ ತಂಟೆಗೆ ಹೋಗಬೇಡಿ. ಇಂದು ಬಣ್ಣದ ಮಾತುಗಳಿಂದ ಬುದ್ದಿ ಬಲಿಯದ ಬದುಕಿನ ವಾಸ್ತವ ಅರಿಯದ ಹೆಣ್ಣು ಮಕ್ಕಳನ್ನು ಮರುಳು ಮಾಡಿ ಹಾಳು ಗೆಡವಿ ಕೈ ಕೊಟ್ಟು ಹೋಗುವ ಅನೇಕ ಕಾಮುಕ ಪಿಶಾಚಿ ಗಳು ಸಮಾಜದಲ್ಲಿ ಇವೆ.ತಂದೆ ತಾಯಿಗಳ ಅಶೋತ್ತರ ಗಳನ್ನು ಈಡೇರಿಸಿ. ಮೊದಲು ವಿದ್ಯಾಭ್ಯಾಸ ದ ಗುರಿ ಸಾಧಿಸಿ. ಈ ಮೊಬೈಲ್ ಯುಗದಲ್ಲಿ ಇನ್ಸ್ಟಾಗ್ರಾಮ್ ಫೇಸ್ಬುಕ್ ವಾಟ್ಸಪ್ ಟೆಲಿಗ್ರಾಮ್ app ಗಳ ಗೀಳಿಗೆ ಬಿದ್ದು ಬಾಳು ಹಾಳು ಮಾಡಿಕೊಳ್ಳದಿರಿ ಧನ್ಯವಾದಗಳು


ಪ್ರೀತಿ ಮಾಡುವುದರಿಂದ ಪ್ರಾರಂಭದಲ್ಲಿ risk ಇದೆ. ಎಲ್ಲಾ ಕಡೆ ಸುತ್ತಾಡಿ, ಪ್ರೀತಿಯ ಮತ್ತಿನಲಿ ಒಬ್ಬರಿಗೊಬ್ಬರು ತಾಗಿ, ಸೆಲ್ಪಿ ಸೇರಿದಂತೆ, ನಾನಾ ಭಂಗಿಯಲ್ಲಿ ಪೊಟೊ ತೆಗೆದು ಖುಷಿ ಪಟ್ಟು, ಕೆಲವೊಮ್ಮೆ ದೇಹವನ್ನು ಅರ್ಪಿಸಿ, ನಂತರ ಕೈ ಕೊಟ್ಟು ಹೋದರೆ ಆಗುವ ಆಘಾತ ಒಮ್ಮೆ ನೆನಪಿಸಿಕೊಳ್ಳಿ.( ನೇಹಾ ಹಿರೇಮಠ, ಅಂಜಲಿ ಅಂಬೀಗೇರಾ, ಈ ಪ್ರೀತಿಯ ಬಲಿ ಪಶುಗಳು. -

ಅದ್ದರಿಂದ ಎಷ್ಟೊ ಹೆಣ್ಣು ಗಂಡುಗಳು ಪ್ರೀತಿ ಕಡಿದುಕೊಂಡಾಗ ನಲುಗಿ ಹೋಗಿದ್ದು ಇದೆ, ಪ್ರಾಣ ಕಳೆದುಕೊಂಡಿದ್ದು ಇದೆ.

ಮದುವೆ ಆದ ಮೇಲೂ risk. ಇದು ಇನ್ನೊಂದು ಹಂತದ್ದು. ಪ್ರೀತಿಯ ಮತ್ತಿನಲಿ ಮದುವೆಗೂ ಮುನ್ನ ಹುಡುಗಾಟಿಕೆ ಹೆಚ್ಚು. ಹೊಟೇಲಿಗೆ ಹೋಗಿದ್ದು, ಕುಣಿದದ್ದು, ತಿರುಗಿದ್ದು, ತಮಾಷೆ, ಎಲ್ಲವೂ ಮದುವೆ ನಂತರ ಸಹಜವಾಗಿ ಮುಂದುವರೆಯುವ ಸಾದ್ಯತೆ ಇಲ್ಲ. ಸಂಸಾರದ ನೋಗ, ಜವಾಬ್ದಾರಿ ಕೆಲವು ಸಲ ಬಾರವಾಗುತ್ತದೆ. ಆಗ ಸಂಗಾತಿ ಬದಲಾದ ಹಾಗೆ ಕಾಣುತ್ತಾರೆ. ಸಣ್ಣ ಪುಟ್ಟ ಕಲಹ ಸಹಜ. ಪ್ರೇಮ ವಿವಾಹದಲ್ಲಿ, ವಿವಾಹದ ಮುಂಚೆ ಇದ್ದಂತೆ ಇರಬೇಕು ಎಂದು ಅಶಿಸಿದರೆ ಬಿರುಕು ದೊಡ್ಡದೇ ಆಗಿಬಿಡುವ ಸಂದರ್ಭ ಜಾಸ್ತಿ. ಹಾಗಾಗಿ ಇತ್ತೀಚೆಗೆ ವಿಚ್ಚೇದನ ಹೆಚ್ಚು. ಇದಕ್ಕೆ ಕಾರಣ ಭ್ರಮ ನಿರಸನ.

ನಿಮ್ಮ ತಂದೆ ತಾಯಿಗಳಿಗೆ, ಅಯ್ಕೆ ಬಿಟ್ಟು ಬಿಡುವುದು ಕ್ಷೇಮ. ಅವರು ಹುಡುಗ/ ಹುಡುಗಿಯ, ಅವರ ಪೋಷಕರ ಪೂರ್ವಾಪರ, ಹಿನ್ನಲೆಯನ್ನು ಆದಷ್ಟು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಾರೆ. ಇಲ್ಲಿ ಒಂದು risk ಇದೆ. ಕೆಲವುಬಾರಿ ಒಲ್ಲದ ಸಂಗಾತಿಯನ್ನು ಕಟ್ಟಿ ಬಿಡುವ ಸಾದ್ಯತೆ ಇದೆ. ಅದಕ್ಕೆನಿಮಗೆ ಒಂದು ಕಿವಿ ಮಾತು. ನಿಮಗೆ ಸಂಗಾತಿ ಹುಡುಕಲು ನಿಮ್ಮ ಪೋಷಕರು ಹುಡುಕಲು ಪ್ರಾರಂಭ ಮಾಡಿದಾಗ ನಿಮ್ಮ ಅಭಿಪ್ರಾಯ , ನಿಮ್ಮ ಸಂಗಾತಿ ಹೇಗಿರಬೇಕು ಎಂಬುದನ್ನು ನಿಮ್ಮ ತಾಯಿಯ ಬಳಿ ತಿಳಿಸಿ. ಅಥವಾ ನಿಮ್ಮ ಬಳಿ ಸಲುಗೆ ಇರುವವರ ಕಿವಿಗೆ ಹಾಕಿ ಅದು ನಿಮ್ಮ ಪೊಷಕರಿಗೆ ತಲುಪವಂತೆ ನೊಡಿಕೊಳ್ಳಿ. ನಿಮ್ಮ ಇಚ್ಚೆಯಂತೆ, ಅವರು ಪ್ರಯತ್ನ ಮಾಡುತ್ತಾರೆ. ಉದಾ: ನೀವು software ನಲ್ಲಿ ಇದ್ದರೆ, software ಸಂಗಾತಿ ಬಯಸಿದರೆ ತಪ್ಪು ಎಂದು ನಿಮ್ಮ ಪೊಷಕರು ಬಾವಿಸುವುದಿಲ್ಲ. ಒಲ್ಲದ /ಒಪ್ಪಿಗೆ ಆಗದ ಸಂಗಾತಿಯನ್ನು ಬಿಲ್ ಕುಲ್ ನಿರಾಕರಿಸಿ. ಕಾರಣ ಮುಂದೆ ಜೀವನ ಪೂರ್ತಿ ಹೆಣಗಬೇಕಾಗುತ್ತದೆ. ಸ್ವಲ್ಪವಾದರೂ ನಿಮ್ಮ ಅಭಿರುಚಿಗೆ ಹೊಂದಿಕೆ ಆಗಬೇಕು. ಇದನ್ನು ಮನವರಿಕೆ ಮಾಡಿ.

ಒಮ್ಮೆ ನಕ್ಕವನು/ಳು ಸದಾ ನಗುತ್ತಾ ಇರಲು ಸಾದ್ಯವಿಲ್ಲ. ಮುಗ್ದ ಮನಸ್ಸು ಇರುವಂತೆ ನಟಿಸುವವನು/ ಳು ವ್ಯಾಘ್ರ ಮುಖಿ ಅಗಬಹುದು. ವಿದೇಯತೆ ತೋರಿದವನು/ ಳು ಅವಿಧೇಯ ಆಗಬಹುದು. ಸದಾ ನಂಬಿಕೆ. ಇರುವಂತೆ ಕಾಣುವವನು/ಳು ಕೈ ಸಹ ಕೊಡಬಹುದು.

ಅದ್ದರಿಂದ Love ನಲ್ಲಿ ಅಪಾಯ ಜಾಸ್ಥಿ. ಈಗ ನಿಮಗೆ ಯಾವುದೋ ಬೇಕೊ ಅದನ್ನು ಅಯ್ಕೆ ಮಾಡಿಕೊಳ್ಳಿ. ಹೇಗೂ ಬಾವಿಗೆ ಬೀಳುವವರು ನೀವು ತಾನೇ ? ಆಳವಾದ ಬಾವಿಗೆ ಬೀಳಬೇಡಿ ಎಂದು ನನ್ನ ಕಿವಿ ಮಾತು.

ಮನೆಯವರ ನಿರ್ದಾರಕ್ಕೆ ಬಿಟ್ಟು, ನಿಮ್ಮ ಮನಸ್ಸಿನಂತೆ, ಆಯ್ಕೆ ಸ್ವತಂತ್ರ ಇದ್ದರೆ ನಿಮ್ಮ ಮುಂದಿನ ಉಜ್ವಲವಾಗಬಹುದು. ಮದುವೆ ಆನಂದ, ಅನುಭಂದವನ್ನು ತಂದುಕೊಡಬಹುದು.ಎಲ್ಲಾ ನಿಮ್ಮ ಗುಣ ಸ್ವಬಾವದ ಮೇಲೂ, ತೆಗೆದುಕೊಳ್ಳುವ ನಿರ್ದಾರದ ಮೇಲೂ ಅವಲಂಬಿತವಾಗಿದೆ.