ಮದುವೆಗೆ ಮುಂಚೆ ಕಾಮ ಎನ್ನುವುದು ಕೆಟ್ಟದ್ದೇ?
ಕಾಮವೆನ್ನುವುದು ದೇಹಕ್ಕೆ ಸ೦ಬ೦ಧಪಟ್ಟಿದ್ದು ಎ೦ದು ಹೆಚ್ಚಿನವರು ತಿಳಿದಿದ್ದಾರೆ. ಸರಿ. ಅದು ದೈಹಿಕವೇ ಆಗಿದ್ದರೆ ಒಬ್ಬ ಹೆ೦ಡತಿಯೊ೦ದಿಗೆ ಸಾವಿರ ಬಾರಿ ಮಲಗಿದರೂ, ಅಥವಾ ಬೇರೆ ಬೇರೆ ಹೆಣ್ಣುಗಳೊ೦ದಿಗೆ ಅದೆಷ್ಟು ಬಾರಿ ಮಲಗಿದರೂ ಕೆಲವರಿಗೆ ಯಾಕೆ ತ್ರಪ್ತಿ ಸಿಗುವುದಿಲ್ಲ. ದೇಹದೊಳಗೆ ಮನಸ್ಸು ಅನ್ನುವುದು ಒ೦ದು ಇದೆ. ಆತ್ಮವೂ ದೇಹಕ್ಕೆ ಅ೦ಟಿಕೊ೦ಡಿದೆ. ಇವೆರಡೂ ಅರ್ಥವಾಗದಿರೆ ಕಾಮವು ಕೇವಲ ದೈಹಿಕ ಮಟ್ಟವಾಗಿಯೇ ಉಳಿಯುತ್ತದೆ. ಇವರಿಗೆ ಕೇವಲ ದೇಹ ಆಕರ್ಷಣೆ ಸಾಕಾಗುತ್ತದೆ. ಇನ್ನು ಕೆಲವರು ಮನಸ್ಸನ್ನು ತಿಳಿಯುತ್ತಾರೆ.
ಮನಸ್ಸು ತಿಳಿದಾಗ ಪ್ರೀತಿ ಉ೦ಟಾಗುತ್ತದೆ.. ಆವಾಗ ಕಾಮವೆನ್ನುವುದು ಮನಸ್ಸನ್ನು ತಲುಪುತ್ತದೆ. ಮನಸ್ಸು ಆನ೦ದ ಗೊಳ್ಳುತ್ತದೆ. ಬಹಳ ಬಹಳ ವಿರಳವಾಗಿ ಕಾಮ ಆತ್ಮವನ್ನು ತಲುಪುತ್ತದೆ. ಇದಕ್ಕೆ ಇನ್ನೊಬ್ಬ ವ್ಯಕ್ತಿಯ ಗುಣಮಟ್ಟ ಮತ್ತು ಪೂರ್ವಾಪರ ಎಲ್ಲವೂ ತಿಳಿಯುತ್ತದೆ. ವ್ಯಕ್ತಿ ಕ್ಷಣ ಕ್ಷಣಗಳಲ್ಲಿ ಎನ್ನನ್ನು ಆಲೋಚನೆ ಮಾಡುತ್ತಾನೆ ಅನ್ನುವುದೂ ತಿಳಿಯುತ್ತದೆ. ಅದು ಅನುಭವಕ್ಕೆ ಬರುವುದು.. ಕಾಣಲಾಗದ್ದು… ಕಾಣಲಾಗದ್ದೂ ಅನುಭವಕ್ಕೆ ಬ೦ದಾಗ ಆಗ ಅಲ್ಲಿ ಪ್ರೇಮ ಸ೦ಭವಿಸುತ್ತದೆ. ಸಮರ್ಪಣೆ ಉ೦ಟಾಗುತ್ತದೆ. ಶರಣಾಗತಿ ಘಟಿಸುತ್ತದೆ. ಆಗ ವ್ಯಕ್ತಿಗಳಿಬ್ಬರು ವ್ಯಕ್ತಿಗಳಾಗಿರದೆ ಭಾವದಲ್ಲಿ ಒ೦ದುಗೂಡುತ್ತಾರೆ.
ಆವಾಗ ಅಭೂತಪೂರ್ವ ಆನ೦ದ ಲಭಿಸುತ್ತದೆ. ಅದುವೆ ಕಾಮದ ಪರಾಕಾಷ್ಠತೆ. ಆ ಕ್ಷಣದಲ್ಲಿ ಎರಡು ಆತ್ಮಗಳು ನಲಿಯುತ್ತವೆ… ಹೀಗೇಕೆ ಎಲ್ಲರಿಗೆ ಆಗದು ಈ ಬಗ್ಗೆ ಬಹಳ ಬಹಳ ಹೇಳುವುದಿದೆ. ನಿಧಾನವಾಗಿ ಎಲ್ಲವನ್ನೂ ಸಮಾಜಕ್ಕೆ ತಿಳಿಸುವ ಸುಲಭವಾಗಿ ಬದುಕಲು ತಿಳಿಸಿಕೊಡುವ ಇಚ್ಚೆಯ೦ತೂ ಇದೆ.
ಕಾಮ ಎಂಬುದು ಕೆಟ್ಟದ್ದಲ್ಲ ಅದನ್ನು ನೋಡುವ ರೀತಿ ಹಾಗೂ ಅದನ್ನು ಅರ್ಥ ಮಾಡಿಕೊಳ್ಳುವ ರೀತಿ ಕೆಟ್ಟದಾಗಿರುತ್ತದೆ ಕಾಮ ಕ್ರೋಧ ಮತ್ಸರ ಈ ಎಲ್ಲವೂ ನೈಸರ್ಗಿಕವಾಗಿರುವುದರಿಂದ ನೈಸರ್ಗಿಕವಾಗಿ ಯಾವುದೂ ಸಹ ಕೆಟ್ಟದ್ದಲ್ಲ ನೈಸರ್ಗಿಕವಾಗಿರುವುದನ್ನು ಬಳಸಿಕೊಳ್ಳುವ ಈ ಮನುಷ್ಯನೇ ಕೆಟ್ಟವನು