ಬೆಂಗಳೂರು ಮೆಟ್ರೋ ನಿಲ್ದಾಣದಲ್ಲೇ ಜೋಡಿ ಹಕ್ಕಿಗಳ ರೋಮ್ಯಾನ್ಸ್ ; ಇವರಿಗೆ ಹೇಳೋರು ಕೇಳೋರು ಯಾರು ಇಲ್ವಾ ಅಂದ ನೆಟ್ಟಿಗರು ?

ಇದರೊಂದಿಗೆ ಬೆಂಗಳೂರು ಮೆಟ್ರೋ ಕೂಡ ದೆಹಲಿ ಮೆಟ್ರೋದ ಹಾದಿಯಲ್ಲಿಯೇ ಸಾಗುತ್ತಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ.
ಹೌದು.. ಅಕ್ಕಪಕ್ಕ ಜನರಿದ್ದರೂ ಕ್ಯಾರೇ ಎನ್ನದೆ ಜೋಡಿಯೊಂದು ಇದೀಗ ಅಸಭ್ಯವಾಗಿ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಪ್ಲಾಟ್ಫಾರ್ಮ್ 3ರಲ್ಲಿ ನಡೆದ ಘಟನೆ ಇದು ಎನ್ನಲಾಗುತ್ತಿದೆ.
ಎಕ್ಸ್ ಪೇಜ್ ಒಂದರಲ್ಲಿ ‘‘ಬೆಂಗಳೂರು ಮೆಟ್ರೋ ಕೂಡ ದೆಹಲಿ ಮೆಟ್ರೋ ಸಂಸ್ಕೃತಿಯತ್ತ ಸಾಗುತ್ತಿದೆಯೇ?’’ ಎಂದು ಪ್ರಶ್ನಿಸಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋಗೆ ಈಗ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ. ಜೋಡಿಯ ಅಸಭ್ಯ ವರ್ತನೆಗೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯುವಕ-ಯುವತಿ ಅಕ್ಕಪಕ್ಕ ಮಹಿಳೆಯರು, ಹಿರಿಯರಿದ್ದರೂ ಕ್ಯಾರೇ ಎನ್ನದೆ ಅಸಭ್ಯವಾಗಿ ವರ್ತಿಸಿರುವುದು ವಿಡಿಯೋದಲ್ಲಿದೆ. ಸುಮಾರು 1 ನಿಮಿಷ 30 ಸೆಕಂಡ್ನ ವಿಡಿಯೋ ಈಗ ವೈರಲ್ ಆಗುತ್ತಿದೆ.
ಇನ್ನು ಬೆಂಗಳೂರು ಯಾವಾಗಲೂ ಪ್ರಗತಿಪರ, ಗೌರವಾನ್ವಿತ ಸಂಸ್ಕೃತಿಗೆ ಹೆಸರುವಾಸಿಯಾದ ನಗರವಾಗಿದೆ. ದುರದೃಷ್ಟವಶಾತ್, ಈ ರೀತಿಯ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿರುತ್ತದೆ. ಅಧಿಕಾರಿಗಳು ಅಂತಹ ನಡವಳಿಕೆಯ ವಿರುದ್ಧ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಮತ್ತು ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಸುರಕ್ಷಿತ, ಸ್ವಚ್ಛ ಮತ್ತು ಗೌರವಾನ್ವಿತವಾಗಿ ಉಳಿಯುವಂತೆ ಮಾದರಿಯನ್ನಾಗಿ ಮಾಡಿ ತೋರಿಸಬೇಕು ಎಂದು ಎಕ್ಸ್ ಪೇಜ್ ಉಲ್ಲೇಖಿಸಲಾಗಿದೆ. ಇನ್ನು ಪೊಲೀಸರು ಅಥವಾ ಬಿಎಂಆರ್ಸಿಎಲ್ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಕೂಡಲೇ ಜೋಡಿ ಹಕ್ಕಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ( video credit ; Power tv news )