ಗಂಡನು ಹೆಂಡತಿಗೆ ಕೊಡ ಬೇಕಾದ ಐದು ಸುಖಗಳು ಯಾವುದು ನೋಡಿ ?

ಗಂಡನು ಹೆಂಡತಿಗೆ ಕೊಡ ಬೇಕಾದ ಐದು ಸುಖಗಳು ಯಾವುದು ನೋಡಿ ?

ಮದುವೆ ಎನ್ನುವುದು ಒಂದು ಸುಂದರ ಸಂಬಂಧ . ಅದು ಜನ್ಮ ಜನ್ಮಾಂತರ ದ ಸಂಬಂಧ . ಇಲ್ಲಿ ಒಬ್ಬರಿಗೊಬ್ಬರು ಅನುಸರಿಸಿ ಕೊಂಡು ಹೋಗ ಬೇಕಾಗುತ್ತದೆ . ಇದರಲ್ಲಿ ಮುಖ್ಯವಾಗಿ ಒಂದು ಹೆಣ್ಣು ತನ್ನ ತವರು ಮನೆ ಹಾಗು ಬಂದು ಬಳಗ ಬಿಟ್ಟು ಬಂದಿರುತ್ತಾಳೆ . ಅವಳಿಗೆ ಗೌರವ ಕೊಟ್ಟು ಅವಳಿಗೆ ಯಾವುದೇ ತೊಂದರೆ ಆಗದಂತೆ ನೋಡಿ ಕೊಳ್ಳುವುದು ಗಂಡನ ಕರ್ತವ್ಯ ಆಗಿರುತ್ತದೆ .ಇದರಲ್ಲಿಯೇ  ಗಂಡ ಮತ್ತು ಹೆಂಡತಿ ಸುಖವಾಗಿ ಬಾಳಲು ಸದ್ಯ . ಗಂಡ ಆದವನು ಹೆಂಡತಿಗೆ ಮುಖ್ಯವಾಗಿ  ಅವಳಿಗೆ ಈ ಸುಖಗಳನ್ನು ಕೊಡ ಬೇಕು . ಅದು ಯಾವುದು ಎಂದು ನೋಡಣ ಬನ್ನಿ .


ಚಾಣಕ್ಯ ನೀತಿ ಪತಿಯಿಂದ ಪತ್ನಿಗೆ ಸಿಗಬೇಕಾದ ಐದು ಸುಖಗಳು ಗಂಡ ಹೆಂಡತಿ ಸಂಬಂಧ ಕೊನೆಯವರೆಗೂ ಇರೋ ಬಂಧನವಾಗಿದೆ ಇಬ್ಬರು ಪರಸ್ಪರ ನಂಬಿಕೆ ಇರಿಸಿಕೊಂಡು ಹೊಂದಾಣಿಕೆಯಿಂದ ಬಾಳುವುದೇ ಸಂಸಾರ ಪುರುಷನಾದವನು ಹೆಂಡತಿಗೆ ಐದು ಸುಖ ಸಂತೋಷಗಳನ್ನು ನೀಡಬೇಕಾಗುತ್ತದೆ ಒಂದು ಹಣ ಪ್ರತಿಯೊಬ್ಬ ಪತಿಯು ತನ್ನ ಹೆಂಡತಿಗೆ ಹಣವನ್ನು ನೀಡಬೇಕು ಇದರಿಂದ ಮಹಿಳೆ ತನ್ನ ಅಗತ್ಯಗಳನ್ನು ಮತ್ತು ಹವ್ಯಾಸ ಗಳನ್ನು ಪೂರೈಸಿಕೊಳ್ಳಬಹುದು ಹೀಗೆ ಮಾಡುವುದರಿಂದ ಪತ್ನಿ ತನ್ನ ಗಂಡನೊಂದಿಗೆ ಯಾವಾಗಲೂ ಸಂತೋಷವಾಗಿರುತ್ತಾಳೆ ಈ ಹಿಂದೆ ಮಹಿಳೆಯರು ಗೃಹಿಣಿಯಾಗಿರುತ್ತಿದ್ದರು ಹಾಗಾಗಿ ಚಾಣಕ್ಯ ಈ ಮಾತನ್ನು ಹೇಳಿದರು ಇಂದು ಮಹಿಳೆಯರು ಆರ್ಥಿಕ ವಿಷಯದಲ್ಲಿ ಸ್ವಾವಲಂಬಿಗಳಾಗಿರುತ್ತಾರೆ

ಎರಡು ಗೌರವ  ಪ್ರತಿಯೊಬ್ಬ ಪತಿಯು ತನ್ನ ಹೆಂಡತಿಗೆ ಗೌರವವನ್ನು ನೀಡಬೇಕು ಯಾವುದೇ ಕಾರಣಕ್ಕೂ ಅವಮಾನಿಸಬಾರದು ಇದು ಪ್ರೇಮ ಜೀವನವನ್ನು ಸಂತೋಷವಾಗಿರಿಸುತ್ತದೆ ಅದರಲ್ಲಿಯೂ ಮೂರನೇ ವ್ಯಕ್ತಿ ಮುಂದೆ ಅವಮಾನಿಸುವ ಕೆಲಸ ಮಾಡಬಾರದು ಹೀಗೆ ಮಾಡಿದರೆ ಪತ್ನಿಯ ಸ್ವಾಭಿಮಾನಕ್ಕೆ ದಕ್ಕೆ ಉಂಟಾಗಿ ಸಂಸಾರದಲ್ಲಿ ವೈಮನಸ್ಸು ಉಂಟಾಗಬಹುದು

ಮೂರು ರಕ್ಷಣೆ ಪ್ರತಿಯೊಬ್ಬ ಹೆಂಡತಿಯು ತನ್ನ ಗಂಡನು ಎಲ್ಲಾ ಸಂದರ್ಭಗಳಲ್ಲಿಯೂ ತನ್ನನ್ನು ರಕ್ಷಿಸಬೇಕೆಂದು ಬಯಸುತ್ತಾಳೆ ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿಯೂ ತನ್ನ ಹೆಂಡತಿಯನ್ನು ರಕ್ಷಿಸುವುದು ಗಂಡನ ಕರ್ತವ್ಯ ಪತ್ನಿಯ ಎಲ್ಲಾ ಕೆಲಸಗಳಿಗೆ ಗಂಡ ಬೆನ್ನಲುಬಾಗಿ ನಿಂತು ಪ್ರೋತ್ಸಾಹ ನೀಡಬೇಕು ಇದರಿಂದ ಪತ್ನಿಗೆ ತಾನು ಸುರಕ್ಷಿತವಾಗಿದ್ದೇನೆ ಎಂಬ ಭಾವನೆ  ಬರುತ್ತದೆ

ನಾಲ್ಕು ಪ್ರೀತಿಯ ವಾತಾವರಣ ಗಂಡನು ತನ್ನ ಹೆಂಡತಿಯನ್ನು ಪ್ರೀತಿಸುತ್ತಾನೆ ಎಂಬುದು ನಿಜ ಇದರ ಜೊತೆಗೆ ಪತ್ನಿಗೆ ಯಾವುದೇ ರೀತಿಯ ತೊಂದರೆ ಎದುರಾಗದಂತೆ ಗಂಡನು ಅಂತಹ ವಾತಾವರಣವನ್ನು ಸೃಷ್ಟಿಸಬೇಕು ಹೊರಗಿನ ವಿಚಾರ ಅಥವಾ ಕೆಲಸದ ಒತ್ತಡವನ್ನು ಮನೆಯವರೆಗೂ ತರುವ ತಪ್ಪನ್ನು ಪುರುಷರು ಎಂದಿಗೂ ಮಾಡಬಾರದು ಐದು ದೈಹಿಕ ಸುಖ ಪತ್ನಿ ಕೂಡ ತನ್ನ ಗಂಡನಿಂದ ದೈಹಿಕ ಸುಖವನ್ನು ನಿರೀಕ್ಷಿಸುತ್ತಾಳೆ ಈ ವಿಷಯದಲ್ಲಿ ಗಂಡನು ವಿಶೇಷ ಕಾಳಜಿ ವಹಿಸಬೇಕು ಇದು ದಾಂಪತ್ಯ ಜೀವನವನ್ನು ಸಂತೋಷವಾಗಿರಿಸುತ್ತದೆ ಈ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಬೇಕು