ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಆರಂಭವಾಗಿದೆಯೇ?? ಈ ಚಿಕ್ಕ ಕ್ರಮವನ್ನು ಅನುಸರಿಸಿ ಬಿಳಿ ಕೂದಲು ನಿಲ್ಲುತ್ತದೆ.
ನಮಸ್ಕಾರ ಸ್ನೇಹಿತರೇ ಜನರನ್ನು ಅತಿಯಾಗಿ ಕಾಡುವ ಸಮಸ್ಯೆ ಇದು. ಹೌದು ವಯಸ್ಸಾದ ಮೇಲೆ ಬಿಳಿ ಕೂದಲು ಬರುವುದು ಸಹಜ. ಆದ್ರೆ ಇಳೆವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದು ಈ ಕಾಲಮಾನದ ದೊಡ್ದ ಸಮಸ್ಯೆ. ನಮ್ಮ ಜೀವನ ಶೈಲಿ, ಆಹಾರ ಪದ್ಧತಿಗಳು ಜೊತೆಗೆ ಹವಾಮಾನ ಬಿಳಿ ಕೂದಲು ಶುರುವಾಗುವುದಕ್ಕೆ ಅತ್ಯಂತ ಪ್ರಮುಖ ಕಾರಣ. ವೈದ್ಯರ ಪ್ರಕಾರ ಬಿಳಿ ಕೂದಲು ಬಂದರೆ ಮತ್ತೆ ಅದನ್ನು ಕಪ್ಪಾಗಿಸಲು ಸಾಧ್ಯವಿಲ್ಲ, ಆದರೆ ಕೆಲವು ಆಹಾರಗಳಿಂದ ಬಿಳಿ ಕೂದಲು ಹೆಚ್ಚಾಗುವುದನ್ನು ತಡೆಗಟ್ಟಬಹುದು, ಮತ್ತೆ ಬೇಗ ಬಿಳಿ ಕೂದಲು ಹುಟ್ಟದಂತೆಯೂ ನೋಡಿಕೊಳ್ಳಬಹುದು.
ಅಕಾಲಿಕ ಬಿಳಿ ಕೂದಲನ್ನು ತಡೆಯಲು ಮುಖ್ಯವಾಗಿ ನಮ್ಮ ದಿನನಿತ್ಯ ಸೇವಿಸುವ ಆಹಾರಗಳ ಬಗ್ಗೆ ಗಮನವಹಿಸಬೇಕು. ಅತ್ಯಂತ ಹೆಚ್ಚಿನ ಪ್ರೋಟಿನ್ ಇರುವ, ವಿಟಮಿನ್ ಸಿ ಯನ್ನು ಹೊಂದಿರುವ ಹಾಗೂ ಕೂದಲ ಬೇರುಗಳನ್ನು ಗಟ್ಟಿಯಾಗಿಸುವ ಕಿತ್ತಳೆ ಹಣ್ಣುಗಳನ್ನು ಸೇವಿಸುವುದು ಉತ್ತಮ. ಇದೀಗ ಚಳಿಗಾಲ ಆರಂಭವಾಗಿದೆ, ಹಾಗಾಗಿ ಸುಲಭವಾಗಿ ಕಿತ್ತಳೆ ಹಣ್ಣುಗಳು ಸಿಗುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಕಿತ್ತಳೆ ಹಣ್ಣು ಸೇವಿಸಿದರೆ ಆರೋಗ್ಯಕ್ಕೂ ಒಳ್ಳೆಯದು.
ಇನ್ನು ಕೂದಲಿಗೆ ಹೆಚ್ಚಿನ ವಿಟಮಿನ್ ದೊರೆತರೆ ಬೇಗ ಬಿಳಿಯಾಗುವುದನ್ನು ನಿಯಂತ್ರಿಸಬಹುದು. ಜೊತೆಗೆ ಅಜೀರ್ಣ ಸಮಸ್ಯೆ ಇಲ್ಲದಿದ್ದರೆ ಕೂದಲಿಗೆ ತೊಂದರೆಯಾಗುವುದಿಲ್ಲ. ಹಾಗಾಗಿ ನಿತ್ಯದ ಆಹಾರದಲ್ಲಿ ಮೊಸರು, ಸೋಯಾ, ವಿನೆಗರ್ ಹಾಗೂ ಆರೋಗ್ಯಕರ ಉಪ್ಪಿನಕಾಯಿಗಳನ್ನು ಕೂಡ ಸೇವನೆ ಮಾಡಬೇಕು. ವಿಟಮಿನ್ ಬಿ ಅಂಶವಿರುವ ಕೋಳಿಯ ಮೊಟ್ಟೆಯನ್ನು ಒಡೆದು ಕೂದಲಿಗೆ ಹಚ್ಚಿಕೊಂಡು ಸ್ವಲ್ವ ಸಮಯ ಬಿಟ್ಟು ತಲೆ ಸ್ನಾನ ಮಾಡುವುದರಿಂದ ಕೂದಲು ಬೇಗ ಬೆಳ್ಳಗಾಗುವುದನ್ನು ತಡೆಯಬಹುದು. ಜೊತೆಗೆ ಕೂದಲುದುರುವಿಕೆ, ತಲೆ ಹೊಟ್ಟು ಕೂಡ ನಿಯಂತ್ರಣಕ್ಕೆ ಬರುತ್ತದೆ. ಇನ್ನು ಡಾರ್ಕ್ ಚಾಕಲೇಟ್ ಸೇವನೆ ಮಾಡುವುದು. ಇದರಲ್ಲಿ ಕಬ್ಬಿಣದ ಅಂಶ ಮತ್ತು ಕಾಪರ್ ಪ್ರಮಾಣ ಹೆಚ್ಚಾಗಿ ಕಂಡುಬರುವುದರಿಂದ ಕೂದಲಿನ ಆರೋಗ್ಯಕ್ಕೆ ಬೇಕಾದ ಮೆಲನಿನ್ ಉತ್ಪತ್ತಿಯಾಗಲು ಸಹಾಯ ಮಾಡುತದೆ. ಹೀಗೆ ಆರೋಗುಅಕರ ಆಹಾರವೇ ನಮ್ಮ ಆರೊಗ್ಯದ ಮೂಲಮಂತ್ರವಾಗಿದೆ.
40 ಅಥವಾ 50 ವರ್ಷ ವಯಸ್ಸಿನವರ ಕೂದಲು ಬೆಳ್ಳಗಾಗುವುದು ಸಹಜ. ಆದರೆ 25 ರಿಂದ 30 ವರ್ಷ ವಯಸ್ಸಿನ ಯುವಕರು ಸಹ ಈ ಸಮಸ್ಯೆಯನ್ನು ಎದುರಿಸಬೇಕಾಗಿರುವುದು ಆತಂಕಕಾರಿಯಾಗಿದೆ. ಈ ಕಾರಣದಿಂದಾಗಿ, ಅನೇಕ ಯುವಕರ ಆತ್ಮವಿಶ್ವಾಸ ಕೂಡಾ ಕುಗ್ಗುತ್ತಿದೆ. ಕೆಲವರು ವಯಸ್ಸಾಗಿ ಕಾಣುವುದನ್ನು ತಪ್ಪಿಸಲು ತಮ್ಮ ಬಿಳಿ ಕೂದಲನ್ನು ಕೀಳುತ್ತಾರೆ. ಅನೇಕ ಯುವಕರು ತಮ್ಮ ಕೂದಲನ್ನು ಮತ್ತೆ ಕಪ್ಪು ಮಾಡಲು ಹೇರ್ ಡೈ ಅಥವಾ ರಾಸಾಯನಿಕ ಆಧಾರಿತ ಬಣ್ಣವನ್ನು ಬಳಸುತ್ತಾರೆ. ಆದರೆ ಇದು ಶಾಶ್ವತ ಪರಿಹಾರವನ್ನು ಒದಗಿಸುವುದಿಲ್ಲ. ಬದಲಾಗಿ ಬೇರೆ ಬೇರೆ ಸಮಸ್ಯೆಗಳಿಗೆ ಕಾರಣವಾಗಬಹುದು.
ಕೂದಲು ಬೆಳ್ಳಗಾಗಲು ಏನು ಕಾರಣ ?
ಅನಾರೋಗ್ಯಕರ ಆಹಾರಗಳನ್ನು ಹೆಚ್ಚು ಸೇವಿಸಿದರೆ ಕೂದಲಿಗೆ ಸರಿಯಾದ ಪೋಷಣೆ ಸಿಗದೇ 25ರಿಂದ 30ನೇ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗಲು ಶುರುವಾಗುತ್ತದೆ. ನಿಮ್ಮ ಆಹಾರದಲ್ಲಿ ಮಸಾಲೆ, ಹುಳಿ ಮತ್ತು ಉಪ್ಪು ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡಿ.
ಇತ್ತೀಚಿನ ದಿನಗಳಲ್ಲಿ ಮಾಲಿನ್ಯದ ಸಮಸ್ಯೆ ಬಹಳಷ್ಟು ಹೆಚ್ಚಾಗಿದೆ. ಇದು ನಮ್ಮ ಕೂದಲಿನ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ಕಲುಷಿತ ಗಾಳಿ, ಧೂಳು ಮತ್ತು ಹೊಗೆಯಿಂದ ಕೂದಲನ್ನು ರಕ್ಷಿಸುವುದು ಬಹಳ ಮುಖ್ಯ.
ಕೂದಲು ಬಿಳಿಯಾಗಲು ಮುಖ್ಯ ಕಾರಣವೆಂದರೆ ಅತಿಯಾದ ಒತ್ತಡ, ರಾತ್ರಿ ತಡವಾಗಿ ಮಲಗುವುದು ಮತ್ತು ಕನಿಷ್ಟ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡದಿರುವುದು. ಮನಸ್ಸನ್ನು ನಿರಾಳವಾಗಿಟ್ಟುಕೊಂಡರೆ ಇಂತಹ ಸಮಸ್ಯೆಗಳು ಬರುವುದಿಲ್ಲ.
ಬಿಳಿ ಕೂದಲನ್ನು ಕಪ್ಪಾಗಿಸಲು ಈ ವಸ್ತುಗಳನ್ನು ಬಳಸಿ:
1- ಮೊಸರು
ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಮೊಸರನ್ನು ಬಳಸಬಹುದು. ಇದಕ್ಕಾಗಿ, ಟೊಮೆಟೊವನ್ನು ಪೇಸ್ಟ್ ಮಾಡಿ, ಮೊಸರಿನೊಂದಿಗೆ ಮಿಶ್ರಣ ಮಾಡಿ. ನಂತರ ಅದಕ್ಕೆ ಸ್ವಲ್ಪ ನೀಲಗಿರಿ ಎಣ್ಣೆಯನ್ನು ಸೇರಿಸಿ. ಈಗ ಪ್ರತಿ 3 ದಿನಗಳಿಗೊಮ್ಮೆ ಈ ಮಿಶ್ರಣದೊಂದಿಗೆ ತಲೆ ಕೂದಲಿಗೆ ಮಸಾಜ್ ಮಾಡಿ, ಕೆಲವೇ ವಾರಗಳಲ್ಲಿ ನಿಮ್ಮ ಕೂದಲು ಕಪ್ಪಾಗುತ್ತದೆ.
2. ಈರುಳ್ಳಿ ರಸ
ಈರುಳ್ಳಿ ರಸವನ್ನು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ರಸವನ್ನು ನೆತ್ತಿಯ ಮೇಲೆ ಮಸಾಜ್ ಮಾಡಿ. ಇದರಿಂದ ನಿಮ್ಮ ಕೂದಲು ನೈಸರ್ಗಿಕವಾಗಿ ಕಪ್ಪಾಗುವುದಲ್ಲದೆ, ಕೂದಲು ಉದುರುವಿಕೆಯಂತಹ ಸಮಸ್ಯೆಗಳೂ ದೂರವಾಗುತ್ತವೆ.
3. ಕರಿಬೇವಿನ ಎಲೆಗಳು
ಚಿಕ್ಕ ವಯಸ್ಸಿನಲ್ಲೇ ನಿಮ್ಮ ಕೂದಲು ಬೆಳ್ಳಗಾಗಲು ಪ್ರಾರಂಭಿಸಿದ್ದರೆ, ಕರಿಬೇವಿನ ಎಲೆಗಳು ನಿಮಗೆ ತುಂಬಾ ಉಪಯುಕ್ತವಾಗಬಹುದು. ಇದು ಕೂದಲಿನ ಬೇರುಗಳನ್ನು ಪೋಷಿಸುವ ಜೈವಿಕ ಸಕ್ರಿಯ ಗುಣಗಳನ್ನು ಹೊಂದಿದೆ. ಈ ಎಲೆಗಳನ್ನು ಪುಡಿಮಾಡಿ ಮತ್ತು ಕೂದಲಿಗೆ ಬಳಸುವ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಇದರಿಂದ ತಯಾರಿಸಿದ ಪೇಸ್ಟ್ ಅನ್ನು ವಾರದಲ್ಲಿ ಯಾವುದಾದರೂ ಒಂದು ದಿನ ಹಚ್ಚಿಕೊಳ್ಳಿ.