ತಿರುಪತಿ ತಿಮ್ಮಪ್ಪನ ಲಡ್ಡು ಹೇಗೆ ತಯಾರು ಆಗುತ್ತದೆ..! ವರ್ಷಕ್ಕೆ ಎಷ್ಟು ಕೋಟಿ ಬರುತ್ತೆ ಗೊತ್ತಾ
ಭಾರತೀಯ ಸುಪ್ರಸಿದ್ಧ ಸ್ಥಳಗಳಲ್ಲಿ ಒಂದಾದ ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದ ಬಗ್ಗೆ ನಿಮಗೆ ಈಗಾಗಲೇ ಸಾಕಷ್ಟು ಮಾಹಿತಿ ಇದೆ ಅನುಕೊಂಡಿದ್ದೇನೆ. ಭಾರತೀಯ ಸುಪ್ರಸಿದ್ಧ ಸ್ಥಳಗಳಲ್ಲಿ, ದೇವಸ್ಥಾನಗಳಲ್ಲಿ ಒಂದಾದ ತಿರುಪತಿ ದೇವಸ್ಥಾನ ಈಗಾಗಲೇ ತನ್ನದೇ ಆದ ಶಕ್ತಿಯನ್ನ ಹೊಂದಿದೆ. ತಿರುಪತಿ ತಿಮ್ಮಪ್ಪ ದೇವರು ಸಾಕಷ್ಟು ಭಕ್ತಾದಿಗಳನ್ನ ಹೊಂದಿದ್ದಾರೆ. ತಮ್ಮ ಇಷ್ಟದ ಕನಸುಗಳನ್ನು ಈ ದೇವರ ಮುಂದೆ ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ ಭಕ್ತಾದಿಗಳು. ಜೊತೆಗೆ ಪೂಜೆ ಮಾಡಿಸುತ್ತಾರೆ. ಇಲ್ಲಿಗೆ ಬಂದವರು ತಿರುಪತಿ ಲಡ್ಡನ್ನು ತೆಗೆದುಕೊಂಡು ಹೋಗುವುದೆ ಇಲ್ಲ. ಪ್ರಸಾದವಾಗಿ ಇಲ್ಲಿ ತಿರುಪತಿ ಲಡ್ಡು ಕೊಡಲಾಗುತ್ತದೆ..
ಸಾಕಷ್ಟು ಜನರಿಗೆ ತಿರುಪತಿ ಲಡ್ಡನ್ನು ಹೇಗೆ ತಯಾರು ಮಾಡುತ್ತಾರೆ ಎಂದು ಗೊತ್ತಿಲ್ಲ. ಹಾಗೇನೆ ಈ ಲಡ್ಡಿಗೆ ಏನೆಲ್ಲ ಸೆಕ್ಯೂರಿಟಿ ಇರುತ್ತದೆ, ಹಾಗೆ ವರ್ಷಕ್ಕೆ ಈ ಲಡ್ಡು ನಿಂದ ತಿರುಪತಿಗೆ ಎಷ್ಟು ಆದಾಯ ಬರುತ್ತದೆ, ಮತ್ತು ಇದನ್ನು ಎಲ್ಲಿ ಬೇಕು ಅಲ್ಲಿ ಮಾರಾಟ ಮಾಡುವವರಿಗೆ ಯಾವ ರೀತಿ ಷರತ್ತುಗಳನ್ನು ತಿರುಪತಿಯ ತಿಮ್ಮಪ್ಪನ ದೇವಸ್ಥಾನದ ಆಡಳಿತ ಮಂಡಳಿಯವರು ಹಾಕಿದ್ದಾರೆ ಎಲ್ಲವನ್ನು ತಿಳಿಯೋಣ ಬನ್ನಿ. ಹೌದು ಈ ಲಡ್ಡು, ತುಪ್ಪ ಕಡಲೆ ಹಿಟ್ಟು, ಗೋಡಂಬಿ, ಏಲಕ್ಕಿ, ಹಾಗೆ ಸಕ್ಕರೆಯಿಂದ ತಯಾರು ಮಾಡಲಾಗುತ್ತದಂತೆ. ಸುಮಾರು 10 ಟನ್ ಕಡಲೆ ಹಿಟ್ಟನ್ನು ಒಂದೇ ಬಾರಿಗೆ ಲಡ್ಡುಗಳ ತಯಾರು ಮಾಡಲು ಕಲಿಸಿಕೊಳ್ಳುತ್ತಾರಂತೆ. ಹೌದು, ಈ ಲಡ್ಡು ತುಂಬಾ ಪ್ರಸಿದ್ಧವಾದದ್ದು, ದೇವರ ಪ್ರಸಾದ ಆಗಿರುತ್ತದೆ.
ಸುಮಾರು ಒಂದು ಲಡ್ಡುಗೆ 25 ರೂಪಾಯಿಯಿಂದ ಎರಡು ನೂರು ರೂಪಾಯಿವರೆಗೆ ಮಾರಾಟದ ಬೆಲೆ ಇರುತ್ತದಂತೆ. ಇದನ್ನು ಎಲ್ಲಿ ಬೇಕೋ ಅಲ್ಲಿ ಮಾರಾಟ ಮಾಡಲು ಅವಕಾಶ ಇರುವುದಿಲ್ಲ... ದೇವಸ್ತಾನ ಆಡಳಿತ ಮಂಡಳಿಯವರು ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿಯೇ ಮಾತ್ರ ಈ ಲಡ್ಡನ್ನು ವಿತರಣೆ ಮಾಡುತ್ತಾರೆ. ಈ ಲಡ್ಡುಗೆ ಸಾಕಷ್ಟು ಸೆಕ್ಯೂರಿಟಿ ಇರುತ್ತದೆ. ಸೆಕ್ಯೂರಿಟಿ ಕೋಡ್ ಕೂಡ ಇದೆಯಂತೆ. ಲಡ್ಡನ್ನು ತೆಗೆದುಕೊಳ್ಳಬೇಕು ಎಂದರೆ ಸೆಕ್ಯೂರಿಟಿ ಕೋಡ್ ಹೊಡೆಯಬೇಕು. ಆಗ ಮಾತ್ರ ಬಾಗಿಲು ಓಪನ್ ಆಗುತ್ತದೆ ಎಂದು ತಿಳಿದುಬಂದಿದೆ.. ಜೊತೆಗೆ ಸೆಕ್ಯೂರಿಟಿಗಳು ಇರುತ್ತಿದ್ದು ಸದಾ 24 ಗಂಟೆ ಇದನ್ನು ಜೋಪಾನವಾಗಿ ನೋಡಿಕೊಳ್ಳುವಂತಹ ಕೆಲಸ ಕೂಡ ಮಾಡುತ್ತಾರೆ.
ಲಡ್ಡನ್ನ ತೆಗೆದುಕೊಳ್ಳುವುದು ಕೂಡ ಅಷ್ಟು ಸುಲಭದ ಮಾತಿಲ್ಲ. ಮೊದಲು ಕೊಂಡುಕೊಳ್ಳವ ವೇಳೆ ಕುಪನ್ ತೆಗೆದುಕೊಳ್ಳಬೇಕು. ಆಗ ಮುಖ ಸ್ಕ್ಯಾನ್ ಆಗುತ್ತದೆ. ಇನ್ನೊಂದು ಕೌಂಟರ್ ಗೆ ಹೋಗಿ ಕೂಪನ್ ಕೊಡುವ ವೇಳೆ ಮೊದಲು ಸ್ಕ್ಯಾನ್ ಆದ ಮುಖವೇ ಅಲ್ಲಿಯೂ ಬರಬೇಕು. ಇಲ್ಲವಾದಲ್ಲಿ ಲಡ್ಡು ಸಿಗುವುದಿಲ್ಲವಂತೆ. ಇಷ್ಟೆಲ್ಲಾ ಕಟ್ಟುನಿಟ್ಟಿನಲ್ಲಿ ತಿರುಪತಿ ಲಡ್ಡನ್ನು ವಿತರಣೆ ಮಾಡಲಾಗುತ್ತದೆ. ವರ್ಷಕ್ಕೆ ಸುಮಾರು ನಾಲ್ಕು ಸಾವಿರ ಕೋಟಿಗೂ ಅಧಿಕ ದೇವಸ್ಥಾನಕ್ಕೆ ಹಣ ಬರುತ್ತದಂತೆ. ಆದ್ರೆ ಕೇವಲ ಲಡ್ಡುಗಳಿಂದಲೆ 300 ರಿಂದ 350 ಕೋಟಿ ಹಣ ವರ್ಷಕ್ಕೆ ಬರುತ್ತದೆಂದು ತಿಳಿದುಬಂದಿದೆ. ಇಲ್ಲಿದೆ ನೋಡಿ ತಿರುಪತಿ ತಿಮ್ಮಪ್ಪನ ಸಂಪೂರ್ಣ ಮಾಹಿತಿಯ ವಿಡಿಯೋ.. ಆ ದೇವಸ್ಥಾನದ ಮತ್ತು ತಿರುಪತಿ ತಿಮ್ಮಪ್ಪನ ಲಡ್ಡು ಹೇಗೆ ತಯಾರು ಆಗುತ್ತದೆ ಎಂಬುದಾಗಿ ಇನ್ನಷ್ಟು ಸಂಕ್ಷಿಪ್ತವಾಗಿ ತಿಳಿಸಲಾಗಿದೆ.. ಈ ವಿಡಿಯೋ ನೋಡಿ, ಹಾಗೆ ಇನ್ನಷ್ಟು ನಿಮಗೆ ಹೆಚ್ಚು ಮಾಹಿತಿ ಗೊತ್ತಿದ್ದಲ್ಲಿ ತಪ್ಪದೇ ನಮಗೆ ಕಮೆಂಟ್ ಮಾಡಿ ಧನ್ಯವಾದಗಳು... ( video credit : india reports )